ನವದೆಹಲಿ: ಆಗಸ್ಟ್ಗೂ ಮುನ್ನವೇ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಪುನಾರಂಭಿಸಲು ಪ್ರಯತ್ನಿಸುವುದಾಗಿ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಕೇಂದ್ರ ಸಚಿವರು ಮೇ 25ರಿಂದ ದೇಶಿಯ ವಿಮಾನ ಹಾರಾಟ ಪುನಾರಂಭಗೊಂಡ ಬೆನ್ನಲ್ಲೇ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟದ ಸುಳಿವು ನೀಡಿದ್ದಾರೆ. “ಸಾಧ್ಯವಾದಷ್ಟು ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದೇವೆ. ಮತ್ತಷ್ಟು ವಿಮಾನಗಳನ್ನು ಹೆಚ್ಚಿಸಲಿದ್ದೇವೆ. ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಆರಂಭಿಸಲು ಪ್ರಯತ್ನಿಸಲಿದ್ದೇವೆ” ಎಂದು ತಿಳಿಸಿದರು.
Advertisement
Thank you for joining me for the Facebook Live session.
I tried to address most of the thousands of questions that you put up.
A video recording of the entire session will also be uploaded soon on my website. I hope we are able to meet more often through these interactions. pic.twitter.com/aEo2wzXn0X
— Hardeep Singh Puri (@HardeepSPuri) May 23, 2020
Advertisement
ಆಗಸ್ಟ್-ಸೆಪ್ಟೆಂಬರ್ವರೆಗೆ ಏಕೆ ಕಾಯಬೇಕು? ಪರಿಸ್ಥಿತಿ ಸುಧಾರಿಸಿದರೆ ಅಥವಾ ಕೊರೊನಾ ನಿಯಂತ್ರಣಕ್ಕೆ ಬರದೆ ಇದ್ದರೆ ಮುಂಜಾಗ್ರತಾ ಕ್ರಮಕೈಗೊಂಡು ಜೂನ್ ಮಧ್ಯದಲ್ಲಿ ಅಥವಾ ಜುಲೈ ಅಂತ್ಯದ ವೇಳೆಗೆ ನಾವೇಕೆ ಅಂತಾರಾಷ್ಟ್ರೀಯ ವಿಮಾನ ಹಾರಟ ಪ್ರಾರಂಭಿಸಬಾರದು?
Advertisement
ದೇಶಿಯ ವಿಮಾನಗಳ ಹಾರಾಟದ ಮಾರ್ಗಸೂಚಿ ಸಂಬಂಧ ಮಾತನಾಡಿ, ಆರೋಗ್ಯ ಸೇತು ಅತ್ಯುತ್ತಮ ಆ್ಯಪ್. ಸೋಂಕಿತರ ಸಂಪರ್ಕ ಪತ್ತೆಹಚ್ಚಲು ಇದಕ್ಕಿಂತ ಉತ್ತಮ ಮಾರ್ಗ ಮತ್ತೊಂದಿಲ್ಲ. ಹೀಗಾಗಿ ಎಲ್ಲರೂ ಇದನ್ನು ಡೌನ್ಲೋಡ್ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
Advertisement
Our effort would be to see that if we are able to see that at least a good percentage, even if not the international civil aviation, we can start: Civil Aviation Minister Hardeep Singh Puri https://t.co/XxQt9a0Beo
— ANI (@ANI) May 23, 2020
ಆರೋಗ್ಯ ಸೇತುವಿನಲ್ಲಿ ಗ್ರೀನ್ ಸ್ಟೇಟಸ್ ಬಂದ ಬಳಿಕ ಕ್ವಾರಂಟೈನ್ ಅವಶ್ಯಕತೆ ಇಲ್ಲ ಎಂದು ಭಾವಿಸಬಾರದು. ಪ್ರಯಾಣದ ಬಳಿಕ ಸಂಪರ್ಕ ತಡೆ ಕಡ್ಡಾಯ. ಕೊರೊನಾ ಟೆಸ್ಟ್ ಬಳಿಕ ನಿಮ್ಮ ವರದಿ ನೆಗೆಟಿವ್ ಬಂದರೆ ಆಗ ಮಾತ್ರ ಕ್ವಾರಂಟೈನ್ ಅವಶ್ಯಕತೆ ಇರುವುದಿಲ್ಲ. ಸದ್ಯ ವಿಮಾನ ಸಂಚಾರಕ್ಕೆ ಆರೋಗ್ಯ ಸೇತು ಆ್ಯಪ್. ಪಾಸ್ಪೋರ್ಟ್ ಇದ್ದಂತೆ ಎಂದು ಸ್ಪಷ್ಟನೆ ನೀಡಿದರು.
We will put in place arrangements to make sure that your coming to the airport is facilitated. Borders between Delhi-Haryana and Delhi -Uttar Pradesh is the matter of the state governments and they will deal with it: Union Civil Aviation Minister Hardeep Singh Puri pic.twitter.com/zorSTjW5dy
— ANI (@ANI) May 23, 2020