ಬೆಂಗಳೂರು: ಕೊರೊನಾ ತಂದಿಟ್ಟ ಸಂಕಷ್ಟಗಳು ಒಂದೆರಡಲ್ಲ. ಬಹುತೇಕ ಎಲ್ಲಾ ಕ್ಷೇತ್ರಗಳು ಕೊರೊನಾದಿಂದ ನೆಲಕ್ಕಚ್ಚಿವೆ. ಅದರಲ್ಲಿ ಬೀದಿ ಬದಿ ವ್ಯಾಪಾರವೂ ಒಂದು. ಜೂನ್ 21ರಿಂದ ಸಂಪೂರ್ಣವಾಗಿ ಬೀದಿ ಬದಿ ವ್ಯಾಪಾರಕ್ಕೆ ಅನುವು ನೀಡಬೇಕೆಂದು ಕರ್ನಾಟಕ ರಾಜ್ಯ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಂಗಸ್ವಾಮಿ ಆಗ್ರಹಿಸಿದ್ದಾರೆ.
Advertisement
ಕರ್ನಾಟಕ ಸರ್ಕಾರ ಬೀದಿ ಬದಿ ವ್ಯಾಪಾರಿಗಳಿಗೆ ವ್ಯವಹರಿಸಲು ಅನುಮತಿ ನೀಡುತ್ತಿಲ್ಲ. ಗೋಬಿ ಮಂಚೂರಿ,ಪಾನಿ ಪೂರಿ, ವೆಜ್ ನಾನ್ ವೆಜ್, ಕಾಫಿ, ಟೀ, ಬಜ್ಜಿ ಬೋಂಡಾ, ಚೈನೀಸ್, ಬಟ್ಟೆ, ಪ್ಲಾಸ್ಟಿಕ್ ವ್ಯಾಪಾರಿಗಳು ಮತ್ತು ಇತರ ವಸ್ತುಗಳ ವ್ಯಾಪಾರಿಗಳು ಹೇಗೆ ಜೀವನ ಮಾಡಬೇಕು. 21 ರಂದು ನೀವು ಸಂಪೂರ್ಣ ಅನುಮತಿ ಕೊಡಬೇಕು. ಅನುಮತಿ ಕೊಡಲಿಲ್ಲವೆಂದರೂ ಬೀದಿಯಲ್ಲಿ ನಾವು ವ್ಯಾಪಾರ ಮಾಡುವುದು ಶತಃ ಸಿದ್ಧ ಎಂದಿದ್ದಾರೆ.
Advertisement
Advertisement
ಜೊತೆಗೆ ನಾವು ಸತ್ತರೆ ನಮ್ಮ ಕುಟುಂಬದ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕು. 2000 ರೂ. ಘೋಷಣೆ ಮಾಡಿದ್ದೀರಾ, ಆದರೆ ಖಾತೆಗೆ ಬರುತ್ತಿದ್ದ ಹಾಗೆ ಕೇಂದ್ರ ಸರ್ಕಾರ 10000 ಹಣದ ಸಾಲವನ್ನು ಕಡಿತಗೊಳಿಸಿ ಜಮಾ ಮಾಡಿಕೊಳ್ಳಲು ಮುಂದಾಗಿದೆ. ಹೇಗೆ ಜೀವನ ಮಾಡುವುದು ಅಂತಾ ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ. ಸರ್ಕಾರದ ರಾಜ್ಯದಲ್ಲಿರುವ ಲಕ್ಷಕ್ಕೂ ಹೆಚ್ಚು ಜನ ಬೀದಿ ಬದಿ ವ್ಯಾಪಾರಿಗಳಿಗೆ ಆಹಾರ ಪ್ಯಾಕೇಜ್ ಕೊಡಿ, ತಿಂಗಳಿಗೆ 15 ಅಥವಾ 20 ಸಾವಿರ ಪರಿಹಾರ ನೀಡಿ. ಸರ್ಕಾರಿ ಕೆಲಸ ನೀಡಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಏನಿದು ಕ್ಲಬ್ ಹೌಸ್? ಜಾಯಿನ್ ಆಗೋದು ಹೇಗೆ? ರೂಮ್ನಲ್ಲಿ ಚಾಟ್ ಮಾಡೋದು ಹೇಗೆ?
Advertisement
ಈ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಗೆ, ಸಚಿವರಿಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರ ನೀದಿದ್ದೇವೆ. 21 ರ ನಂತರ ವ್ಯಾಪಾರ ಮಾಡೇ ಮಾಡುತ್ತೇವೆ, ನೀವು ಬಿಡಲಿಲ್ಲದಿದ್ದರೆ ಹೋರಾಟ ಮಾಡ್ತೇವೆ. ಕುಟುಂಬಕ್ಕೆ ಹಾನಿಯಾದರೆ, ಮರಣ ಹೊಂದಿದರೆ ಮುಖ್ಯಮಂತ್ರಿಗಳೇ ಹೊಣೆಯಾಗುತ್ತಿರಾ ಅಂತಾ ಎಚ್ಚರಿಸಿದ್ದಾರೆ.