ಉಡುಪಿ: ಕೊರೊನಾ ಎರಡನೇ ಅಲೆ ಕಂಟ್ರೋಲ್ ಗೆ ಪ್ರಧಾನಿ ನರೇಂದ್ರ ಮೋದಿ ರಾಜ್ಯದ 17 ಡಿಸಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ಮಾಡಿದ್ದಾರೆ. ಮೋದಿ ಡಿಸಿಗಳಿಗೆ ಕೊರೊನಾ ಹತೋಟಿಗೆ ತರುವ ಕುರಿತಾಗಿ ಕಿವಿಮಾತುಗಳನ್ನು ಹೇಳಿದ್ದಾರೆ.
Advertisement
ಜಿಲ್ಲಾಧಿಕಾರಿ ಕಮಾಂಡರ್ ತರ ಕೆಲಸ ಮಾಡಬೇಕು. ಜನಪ್ರರಿನಿಧಿಗಳ ಜೊತೆ ಸಮನ್ವಯ ಮಾಡಿಕೊಳ್ಳಿ. ಎಲ್ಲಾ ಮೇಲ್ವಿಚಾರಣೆ ಡಿಸಿಗಳ ಜವಾಬ್ದಾರಿ. ನಿರ್ಧಾರಗಳು ಅವಶ್ಯಕತೆ ಗಳ ಬಗ್ಗೆ ಸರ್ಕಾರದ ಗಮನಕ್ಕೆ ತನ್ನಿ. ಜನಪ್ರತಿನಿಧಿಗಳ ಕಮಿಟಿ ಮಾಡಿ. ಗ್ರಾಮ ಮಟ್ಟದಿಂದ ಟಾಸ್ಕ್ ಫೋರ್ಸ್ ಮಾಡಿ. ಕೊರೊನಾ ಜಾಗೃತಿ, ವ್ಯಾಕ್ಸಿನೇಶನ್ ಸೇರಿದಂತೆ ಸಮಗ್ರ ಮಾಹಿತಿ ಜನರಿಗೆ ತಲುಪಬೇಕು. ಗಾಳಿಸುದ್ದಿಗೆ ಕಿವಿಗೊಡದೆ ಜನರ ಆರೋಗ್ಯದ ಕಡೆ ಗಮನ ಕೊಡಿ. ಅಗತ್ಯ ಬಿದ್ದಲ್ಲಿ ಕಾರ್ ಅಂಬುಲೆನ್ಸ್ ಸಿದ್ಧಪಡಿಸಿಟ್ಟುಕೊಳ್ಳಿ. ಅಂಬುಲೆನ್ಸ್ ಕೊರತೆ ಆಗದಂತೆ ನೋಡಿಕೊಳ್ಳಿ.
Advertisement
Advertisement
ಖಾಸಗಿ ಆಂಬುಲೆನ್ಸ್ ಕಾಯ್ದಿರಿಸಿ. ಕೊರೊನಾ ಮುಕ್ತ ಗ್ರಾಮ ನಿಮ್ಮ ಮೊದಲ ಆದ್ಯತೆಯಾಗಲಿ. ಪಂಚಾಯತ್ ಸದಸ್ಯನಿಂದ ಸಂಸದರ ತನಕ ಕೊರೊನಾ ವಿರುದ್ಧ ಹೋರಾಟಕ್ಕೆ ಶ್ರಮಿಸಬೇಕು. ಜವಾಬ್ದಾರಿ ಹಂಚುವ, ಪ್ರಗತಿ ಪರಿಶೀಲನೆ ಮಾಡುವ ಜವಾಬ್ದಾರಿ ನಿಮ್ಮದು. ಕಂಟೈನ್ಮೆಂಟ್ ಝೋನ್ ಹೆಚ್ಚು ಹೆಚ್ವು ಮಾಡಿ. ಅಲ್ಲಲ್ಲೇ ಕೊರೊನಾ ಹತ್ತಿಕ್ಕಬೇಕು. ವ್ಯಾಪಿಸದಂತೆ ತಡೆಯಬೇಕು. ಹೆಚ್ಚು ಹೆಚ್ಚು ಟೆಸ್ಟ್ ಮಾಡಿ, ಕೊರೊನಾ ಚೈನ್ ಕಟ್ ಮಾಡಿ. ಪ್ರಾಥಮಿಕ ಸಂಪರ್ಕ ಜೊತೆ ರಾಪಿಡ್ ಟೆಸ್ಟ್ ಗೂ ನ ಕೊಡಿ. ಜನರಲ್ಲಿ ಜಾಗೃತಿ ಮೂಡಿಸಿ. ಫ್ರಂಟ್ ಲೈನ್ ವಾರಿಯರ್ ಗಳಾದ ಡಾಕ್ಟರ್, ಪೋಲೀಸ್ ಮಾಧ್ಯಮ ಜೊತೆ ಚೆನ್ನಾಗಿ ಸಮನ್ವಯ ಮಾಡಿ. ಅವರು ಯಾವುದೇ ಕಾರಣಕ್ಕೆ ಧೈರ್ಯ ಕುಂದದಂತೆ ನೋಡಿಕೊಳ್ಳಿ.
Advertisement
ನಿಮ್ಮ ಜಿಲ್ಲೆಯ ಪ್ರತಿ ಜೀವ ಮುಖ್ಯ. ಎಲ್ಲಾ ವಿಭಾಗದಲ್ಲೂ ಯಾವುದೇ ವಿಫಲವಾದಂತೆ ಕಾರ್ಯನಿರ್ವಹಿಸಬೇಕು. ಅದರ ಜವಾಬ್ದಾರಿ ನಿಮ್ಮ ಮೇಲಿದೆ. ಆಕ್ಸಿಜನ್ ಬಳಕೆ ಸರಿಯಾಗಿ ಮಾಡಿ. ಅವಶ್ಯಕತೆಗೆ ಸರಿಯಾಗಿ ಆಮ್ಲಜನಕ ಮ್ಯಾನೇಜ್ ಮಾಡಿಕೊಳ್ಳಿ. ಸುತ್ತಮುತ್ತಲಿನ ಜಿಲ್ಲೆ, ರಾಜ್ಯದ ಜೊತೆ ಸಂಪರ್ಕದಲ್ಲಿರಿ. ಜಿಲ್ಲೆಯನ್ನು ಕೊರೊನಾ ಮುಕ್ತ ಮಾಡೋದು ನಿಮ್ಮ ಜವಾಬ್ದಾರಿ. ಜವಾಬ್ದಾರಿ ವಹಿಸಿಕೊಂಡಿದ್ದನ್ನು ಸಾಧಿಸಿ ತೋರಿಸಿ. ಕೊರೊನಾ ಹತೋಟಿಗೆ ಬರುವವರೆಗೆ ವಿಶ್ರಾಂತಿ ಮಾಡಬೇಡಿ. ಕೊರೊನಾ ಜೊತೆ ಯುದ್ಧ ಘೋಷಣೆಯಾಗಿದೆ. ಇದು ವಿಶ್ರಾಂತಿ ಕಾಲ ಅಲ್ಲ. ಜನರ ಆರೋಗ್ಯ ಮುಖ್ಯ. ಕಾಳಜಿಯಿಂದ ಕೆಲಸ ಮಾಡಿ. ವಿರಮಿಸದೆ ಜವಾಬ್ದಾರಿ ನಿರ್ವಹಿಸಿ ಎಂದು ಪ್ರಧಾನಿ ಮೋದಿ ಸಲಹೆ ನೀಡಿ ಹೆಚ್ವುವರಿ ಜವಾಬ್ದಾರಿ ನೀಡಿದ್ದಾರೆ.