ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತು ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಅವರು ಫೇಸ್ಬುಕ್, ಜಿಯೋ ಪಾಲುದಾರಿಕೆಯಿಂದ ದೇಶದ ಮೇಲೆ ಆಗಿರುವ ಮತ್ತು ಆಗಲಿರುವ ಪರಿಣಾಮದ ಬಗ್ಗೆ ಚರ್ಚೆ ನಡೆಸಿದ್ದಾರೆ.
ಫೇಸ್ಬುಕ್ ಫ್ಯುಯಲ್ ಫಾರ್ ಇಂಡಿಯಾ 2020 ಕಾರ್ಯಕ್ರಮದಲ್ಲಿ ಇಬ್ಬರು ನಾಯಕರು ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಅಂಬಾನಿ, ಮುಂದಿನ ಎರಡು ಮೂರು ದಶಕದಲ್ಲಿ ಭಾರತ ವಿಶ್ವದ ಟಾಪ್ 3 ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲಿದೆ ಎಂದು ಭವಿಷ್ಯ ನುಡಿದರು.
Advertisement
ಈ ಮೊದಲು ಜಿಯೋ ಮತ್ತು ವಾಟ್ಸಪ್ ಕೇವಲ ಸಂವಹನಕ್ಕಾಗಿ ಮಾತ್ರ ಬಳಕೆ ಆಗುತ್ತಿತ್ತು. ಆದರೆ ಈಗ ಗ್ರಾಹಕರು ಮತ್ತು ಸಣ್ಣ ವ್ಯವಹಾರಗಳಿಗೆ ಮೌಲ್ಯವನ್ನು ನೀಡುವ ವೇದಿಕೆಯಾಗಿ ಬದಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಕಲ್ಪನೆಯಿಂದ ಕಂಪನಿಗಳು ಈಗ ಹೆಚ್ಚು ಹೆಚ್ಚು ಇಂಟರ್ನೆಟ್ ಆಧಾರಿತ ಸೇವೆ ನೀಡುತ್ತಿವೆ ಎಂದು ತಿಳಿಸಿದರು.
Advertisement
Advertisement
ವಾಟ್ಸಾಪ್ ಭಾರತದಲ್ಲಿ 100 ದಶಲಕ್ಷ ಚಂದದಾರನ್ನು ಹೊಂದಿದ್ದರೆ ಜಿಯೋ 100 ದಶಲಕ್ಷ ಗ್ರಾಹಕರನ್ನು ಹೊಂದಿದೆ. ಇದರರ್ಥ ಜಿಯೋ ಡಿಜಿಟಲ್ ಕನೆಕ್ಟಿವಿಟಿ ತಂದರೆ ವಾಟ್ಸಪ್ ಡಿಜಿಟಲ್ ಇಂಟರಾಕ್ಟಿವಿಟಿ ತಂದಿದೆ. ಜಿಯೋ ಮಾರ್ಟ್ ಸಾಟಿಯಿಲ್ಲದ ಆನ್ಲೈನ್ ಮತ್ತು ಆಫ್ಲೈನ್ ಚಿಲ್ಲರೆ ಅವಕಾಶವನ್ನು ತರುತ್ತದೆ ಎಂದು ಅಂಬಾನಿ ಹೇಳಿದರು.
Advertisement
ಮಾರ್ಕ್ ಜುಕರ್ಬರ್ಗ್ ಮಾತನಾಡಿ, ನಾವು ಸಣ್ಣ ಉದ್ಯಮಗಳಿಗೆ ಸೇವೆ ಸಲ್ಲಿಸುವ ವ್ಯವಹಾರದಲ್ಲಿದ್ದೇವೆ ಎಂದು ಹೇಳಲು ನಾವು ಇಷ್ಟಪಡುತ್ತೇವೆ. ಭಾರತದ ಸಣ್ಣ ವ್ಯವಹಾರಗಳು ಜಾಗತಿಕ ಚೇತರಿಕೆಯ ಪ್ರಮುಖ ಭಾಗವಾಗಿರುತ್ತವೆ. ಹೀಗಾಗಿ ಅವರಿಗೆ ಸಹಾಯವಾಗಲು ಉತ್ತಮವಾದ ಟೂಲ್ಗಳನ್ನು ನಿರ್ಮಿಸುತ್ತೇವೆ. ಈ ಕಾರಣಕ್ಕೆ ನಾವು ಜಿಯೋ ಜೊತೆ ಪಾಲುದಾರಿಕೆ ಬಯಸಿದ್ದೇವೆ. ಇಂದು ಭಾರತದ ನೂರಾರು ಮಿಲಿಯನ್ ಮಂದಿಗೆ ಇಂಟರ್ನೆಟ್ ಸಿಗುವಲ್ಲಿ ಜಿಯೋದ ಪಾತ್ರ ದೊಡ್ಡದು ಎಂದು ಹೇಳಿ ಶ್ಲಾಘಿಸಿದರು.
ಲಾಕ್ಡೌನ್ ಮಧ್ಯದಲ್ಲಿ ಜಿಯೋ ಮತ್ತು ಫೇಸ್ಬುಕ್ ಪಾಲುದಾರಿಕೆ ಹೇಗೆ ನಡೆಯಿತು ಎಂಬುದಕ್ಕೆ ನಮ್ಮದೇ ಒಂದು ಉತ್ತಮ ಉದಾಹರಣೆ. ಭಾರತೀಯ ಎಫ್ಡಿಐ ಇದು ಇತಿಹಾಸದಲ್ಲಿಯೇ ಅತಿದೊಡ್ಡ ವಿದೇಶಿ ಹೂಡಿಕೆ ಜಿಯೋಗೆ ಬಂದಿದೆ. ಈ ಮಾತನ್ನು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ಜಿಯೋ ಮತ್ತು ಫೇಸ್ಬುಕ್ ನಡುವಿನ ಸಹಭಾಗಿತ್ವವು ಭಾರತ, ಭಾರತೀಯರು ಮತ್ತು ಸಣ್ಣ ಭಾರತೀಯ ವ್ಯವಹಾರಗಳಿಗೆ ಸಹಾಯವಾಗಲಿದೆ ಎಂದು ಮುಕೇಶ್ ಅಂಬಾನಿ ಅಭಿಪ್ರಾಯ ವ್ಯಕ್ತಪಡಿಸಿದರು.
ಏಪ್ರಿಲ್ 22 ರಂದು ಫೇಸ್ಬುಕ್ ಜಿಯೋದಲ್ಲಿ 43.354 ಕೋಟಿ ರೂ. ಹಣವನ್ನು ಹೂಡಿಕೆ ಮಾಡಿ ಶೇ.9.9ರಷ್ಟು ಪಾಲನ್ನು ಪಡೆದುಕೊಂಡಿತ್ತು.