ಮುಂಬೈ: ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಜಸ್ಟ್ ಡಯಲ್ ಕಂಪನಿಯನ್ನು ಖರೀದಿಸಲು ಮುಂದಾಗಿದೆ. ಒಟ್ಟು 6,600 ಕೋಟಿ ರೂ. ಖರೀದಿ ಸಂಬಂಧ ಎರಡು ಕಂಪನಿಗಳ ಮಧ್ಯೆ ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿದೆ.
25 ವರ್ಷದ ಹಳೆಯ ಕಂಪನಿಯಾಗಿರುವ ಜಸ್ಟ್ ಡಯಲ್ ಬೋರ್ಡ್ ಸಭೆ ನಾಳೆ ನಡೆಯಲಿದ್ದು, ನಾಳೆಯೇ ಅಂತಿಮ ನಿರ್ಧಾರ ಪ್ರಕಟವಾಗುವ ಸಾಧ್ಯತೆಯಿದೆ. ಭಾರತದ ಲೋಕಲ್ ಸರ್ಚ್ ಇಂಜಿನ್ ಆಗಿರುವ ಜಸ್ಟ್ ಡಯಲ್, ಆನ್ ಲೈನ್ ಶಾಪಿಂಗ್, ಹೋಟೆಲ್, ಸಿನಿಮಾ, ಬಸ್ ಬುಕ್ಕಿಂಗ್ ಸೇರಿದಂತೆ ಹಲವು ಸೇವೆಗಳನ್ನು ನೀಡುತ್ತಿದೆ.
Advertisement
Advertisement
Advertisement
ಜಸ್ಟ್ ಡಯಲ್ ಸಂಸ್ಥಾಪಕ ವಿಎಸ್ಎಸ್ ಮಣಿ ಮತ್ತು ಕುಟುಂಬದ ಸದಸ್ಯರು ಕಂಪನಿಯಲ್ಲಿ ಶೇ.35.5 ಪಾಲು ಹೊಂದಿದ್ದಾರೆ. ಕಂಪನಿ ಒಟ್ಟು 2,387 ಕೋಟಿ ರೂ. ಮೌಲ್ಯವನ್ನು ಹೊಂದಿದೆ.
Advertisement
ಈ ಹಿಂದೆ ಟಾಟಾ ಡಿಜಿಟಲ್ ಸೂಪರ್ ಆಪ್ ಹೂಡಿಕೆ ಸಂಬಂಧ ಟಾಟಾ ಸನ್ಸ್ ಜೊತೆ ಜಸ್ಟ್ ಡಯಲ್ ಮಾತುಕತೆ ನಡೆದಿತ್ತು. ಆದರೆ ಯಾವುದೇ ಫಲಿತಾಂಶ ಕಾಣದೆ ಮಾತುಕತೆ ಅಂತ್ಯವಾಗಿತ್ತು. ಇದನ್ನೂ ಓದಿ: ಜಿಯೋದಿಂದ ಬರುತ್ತೆ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ – ಬೆಲೆ ಎಷ್ಟು? ವಿಶೇಷತೆ ಏನು? ಕಡಿಮೆ ಬೆಲೆಗೆ ಹೇಗೆ ಸಿಗುತ್ತೆ?
ಕಳೆದ 6 ತಿಂಗಳಿನಲ್ಲಿ ಜಸ್ಟ್ ಡಯಲ್ ಕಂಪನಿಯ ಶೇರು ಶೇ.52.4 ರಷ್ಟು ಏರಿಕೆ ಕಂಡಿದೆ. ಗುರುವಾರ ಒಂದು ಷೇರು 1,080 ರೂ. ನಲ್ಲಿ ಮಾರಾಟ ಕಾಣುತ್ತಿದೆ.