ಶ್ರೀನಗರ: ಯೋಧರು ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಭಯೋತ್ಪಾದಕರು ಮೃತಪಟ್ಟು, ಇಬ್ಬರು ಯೋಧರು ಗಾಯಗೊಂಡಿರುವ ಘಟನೆ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದಿದೆ.
Advertisement
ದಾಳಿ ನಡೆಸಿದ ಸ್ಥಳದಿಂದ ಎಕೆ47 ಗನ್, ಮತ್ತು ಪಿಸ್ತೂಲ್ಗಳನ್ನು ಭದ್ರತಾ ಪಡೆ ವಶಪಡಿಸಿಕೊಂಡಿದೆ. ದಕ್ಷಿಣ ಕಾಶ್ಮೀರದ 2 ಸ್ಥಳಗಳಲ್ಲಿ ಒಂದೇ ಬಾರಿಗೆ ಯೋಧರು ಮತ್ತು ಭಯೋತ್ಪಾಧಕರ ನಡುವೆ ಗುಂಡಿನ ಚಕಮಕಿ ನಡೆದಿದೆ.
Advertisement
ಮೊದಲು ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಹಡಿಪೋರ್ ನಲ್ಲಿ ಎನ್ಕೌಂಟರ್ ನಡೆದರೆ ಎರಡನೇ ಎನ್ಕೌಂಟರ್ ಅನಂತ್ನಾಗ್ ಜಿಲ್ಲೆಯ ಸೆಮ್ಥಾನ್ ಬಿಜ್ಬೆಹಾರ್ ಪ್ರದೇಶದಲ್ಲಿ ನಡೆದಿದೆ. ಭಯೋತ್ಪಾದಕರು ಮತ್ತು ಯೋಧರ ನಡುವೆ ಗುಂಡಿನ ದಾಳಿ ನಡೆಯುತ್ತಿದ್ದಂತೆ ಸ್ಥಳಕ್ಕೆ ಹೆಚ್ಚುವರಿಯಾಗಿ ಮೀಸಲು ಸಶಸ್ತ್ರಪಡೆ ಜಂಟಿ ಕಾರ್ಯಚರಣೆಗಿಳಿದು. ಭಯೋತ್ಪಾದಕರ ಅಡಗುತಾಣಗಳ ಮೇಲೆ ದಾಳಿ ಮಾಡಿದೆ.
Advertisement
Jammu and Kashmir: Encounter underway in Senthan area of Anantnag. Police and security forces are carrying out the operation.
(Visuals deferred by unspecified time) pic.twitter.com/xGzC2PbWVP
— ANI (@ANI) April 10, 2021
Advertisement
ದಾಳಿಯ ಸಂದರ್ಭ ಇಬ್ಬರು ಯೋಧರಿಗೆ ಗಾಯಗಳಾಗಿದ್ದು, ಮೂವರು ಭಯೋತ್ಪಾದಕರು ಯೋಧರ ಗುಂಡಿಗೆ ಬಳಿಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.