ಚಿಕ್ಕಮಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜಮೀರ್ ಅಹ್ಮದ್ ಅವರ ಪಾತ್ರ ಎಷ್ಟಿದೆ, ಏನು ಅನ್ನೋದು ತನಿಖೆಯ ಬಳಿಕ ಗೊತ್ತಾಗಬೇಕು. ಆದರೆ ಜಮೀರ್ ತಾನು ಏನೆಂದು ಅವರೇ ಯೋಚಿಸಬೇಕು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.
ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಬಫರ್ ಝೋನ್ ಕುರಿತಂತೆ ಸ್ಥಳೀಯರೊಂದಿಗಿನ ಸಭೆಯ ಬಳಿಕ ಮಾತನಾಡಿದ ಸಚಿವರು, ಡ್ರಗ್ಸ್ ಮಾಫಿಯಾದಲ್ಲಿ ಜಮೀರ್ ಅಹ್ಮದ್ ಅವರ ಪಾತ್ರ ಎಷ್ಟಿದೆ ಎಂಬುವುದು ತನಿಖೆಯ ಬಳಿಕ ಗೊತ್ತಾಗಬೇಕಿದೆ. ಆದರೆ ಕೆಜೆ ಹಳ್ಳಿ ಮತ್ತು ಡಿಜೆ ಹಳ್ಳಿ ಪ್ರಕರಣದಲ್ಲಿ ಅಪರಾಧಿಗಳ ಪರ ಅವರು ನಿಂತಿದ್ದ ಅವರು ನಿಲುವು ಸಮಾಜಘಾತುಕ ಶಕ್ತಿಗಳಿಗೆ ಬೆಂಬಲ ಕೊಡುವಂತಹಾ ಮನಸ್ಥಿತಿ ತೋರಿಸುತ್ತೆ ಎಂದು ಜಮೀರ್ ವಿರುದ್ಧ ಕಿಡಿಕಾರಿದರು.
Advertisement
Advertisement
ಜಮೀರ್ ಅವರದ್ದು ಅಪರಾಧಿಗಳ ಪರವಾಗಿ ನಿಲ್ಲುವಂತಹಾ ಮನೋಭಾವನೆ. ಜೊತೆಗೆ ಅವರದ್ದೇ ಕ್ಷೇತ್ರವಾದ ಪಾದರಾಯನಪುರದಲ್ಲಿ ಅವರ ಬೆಂಬಲಿಗರು ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದ್ದರು. ಆಗ ಅವರು ಅವರ ಪರವಾಗಿ ನಿಂತು ಆರೋಪಿಗಳನ್ನು ಸನ್ಮಾನಿಸುವ ಕೆಲಸ ಮಾಡಿದ್ದು ಗಂಭೀರವಾಗಿ ತೆಗೆದುಕೊಳ್ಳಬೇಕಾದ ವಿಷಯ. ಸಾರ್ವಜನಿಕ ಬದುಕಿನಲ್ಲಿ ಇರುವಂತವರು ಸೌಹಾರ್ದತೆಗೆ ಒತ್ತು ಕೊಡಬೇಕೇ ವಿನಃ, ಡಿಸ್ಟ್ರೆಕ್ಟೀವ್ ಮೆಂಟಾಲಿಟಿಗೆ ಒತ್ತು ಕೊಡುವಂತದ್ದು ಶ್ರೇಯಸ್ಸಲ್ಲ. ಅದು ತಾತ್ಕಾಲಿಕವಾಗಿ ಲಾಭ ತಂದುಕೊಡಬಹುದು. ಆದರೆ, ಖಳನಾಯಕನಾಗಿ ಉಳಿಯೋದಕ್ಕೆ ಬೆಳೆಯೋದಕ್ಕೆ ಕಾರಣವಾಗುತ್ತೆ ಎಂದರು.