ಚಿಕ್ಕಮಗಳೂರು: ಜಮೀನು ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರೋ ಘಟನೆ ತಾಲೂಕಿನ ಕರಡಿಹಳ್ಳಿ ಕಾವಲ್ ಬಳಿಯ ಸರ್ವೇ ನಂ.1ರಲ್ಲಿ ನಡೆದಿದೆ.
ಎರಡು ಗುಂಪುಗಳು, ಜಮೀನು ನಮ್ಮದು ಎಂದು ವಾದ ಮಾಡುವಾಗ ಮಾತಿಗೆ ಮಾತು ಬೆಳೆದು ಎರಡು ಗುಂಪಿನ ಪುರುಷರು ಹಾಗೂ ಮಹಿಳೆಯರು ಹೆಲ್ಮೆಟ್, ದೊಣ್ಣೆಗಳಿಂದ ಪರಸ್ಪರ ಹೊಡೆದಾಡಿದ್ದಾರೆ. ಈ ಜಮೀನನ್ನ 1953ನೇ ಇಸವಿಯಲ್ಲಿ ನಾಗಭೂಷಣಮ್ಮ ಎಂಬವರಿಂದ ರಾಜ್ದೀಪ್ ಎಂಬವರು ಖರೀದಿ ಮಾಡಿದ್ದರು ಎಂದು ಹೇಳಲಾಗ್ತಿದೆ.
Advertisement
Advertisement
ರಾಜ್ದೀಪ್ ಜಮೀನನ್ನು ಕ್ಲೀನ್ ಮಾಡಲು ಹೋದಾಗ ಮತ್ತೊಂದು ಗುಂಪು ಈ ಜಮೀನು ನಮ್ಮದು, ನಾವು 30 ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದೇವೆ. ಫಾರಂ 50 ಹಾಗೂ 53ರಲ್ಲಿ ಅರ್ಜಿ ಹಾಕಿದ್ದೇವೆ ಎಂದು ಮತ್ತೊಂದು ಗುಂಪು ಈ ಜಮೀನು ನಮ್ಮದು ಎಂದಾಗ ಎರಡು ಗುಂಪಿನ ನಡುವೆ ಮಾತಿಗೆ ಮಾತು ಬೆಳೆದು ಇಬ್ಬರು ಹೊಡೆದಾಡಿದ್ದಾರೆ.
Advertisement
Advertisement
ಒಬ್ಬರು ನಾವು ಖರೀದಿ ಮಾಡಿದ್ದೇವೆ, ನಮ್ಮ ಹೆಸರಿಗೆ ಖಾತೆ ಇದೆ ಅಂತಿದ್ದಾರೆ. ಮತ್ತೊಬ್ಬರು ನಾವು 30 ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದೇವೆ ಎಂದು ಇಬ್ಬರು ಮಾರಾಮಾರಿ ಹೊಡೆದಾಡಿದ್ದಾರೆ. ಆದರೆ ಅಸಲಿಗೆ ಈ ಜಮೀನು ಯಾರಿಗೆ ಸೇರಬೇಕೆಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ.
ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.