ನವದೆಹಲಿ: ಜನ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ, ಪ್ರವಾಸಿ ತಾಣಗಳಲ್ಲಿ ಜನ ಗುಂಪು ಸೇರುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
3ನೇ ಅಲೆ ಆತಂಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಡ್, ಆಕ್ಸಿಜನ್-ವೆಂಟಿಲೇಟರ್ ಲಭ್ಯತೆ, ವ್ಯಾಕ್ಸಿನ್ ಪೂರೈಕೆ, ಸಂಬಂಧ ಇವತ್ತು ಉನ್ನತ ಮಟ್ಟದ ಸಭೆ ನಡೆಸಿದರು. ಈ ವೇಳೆ, ಪ್ರವಾಸಿ ತಾಣಗಳು, ಮಾರ್ಕೆಟ್ಗಳಲ್ಲಿ ಜನರ ವರ್ತನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
Advertisement
Advertisement
ಕೆಲ ದಿನಗಳಿಂದ ವಿಡಿಯೋ, ಫೋಟೋಗಳನ್ನು ನೋಡಿದೆ. ಜನ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಪ್ರವಾಸಿ ತಾಣಗಳಲ್ಲಿ ಜನ ಗುಂಪು ಸೇರುತ್ತಿದ್ದಾರೆ. ಮಾಸ್ಕ್ ಧರಿಸುತ್ತಿಲ್ಲ. ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಜನ ಕೊವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜನರ ನಿರ್ಲಕ್ಷ್ಯದಿಂದಲೇ ಮತ್ತೆ ಕೊರೋನಾ 3ನೇ ಅಲೆ ಬರುವ ಸಾಧ್ಯತೆ ಇದೆ ಎಂದಿದ್ದಾರೆ. ಇದನ್ನೂ ಓದಿ: ಮೂರನೇ ಅಲೆ ಆತಂಕ ಆಮ್ಲಜನಕ ಉತ್ಪಾದನೆ ಪೂರೈಕೆ ಕುರಿತಂತೆ ಪ್ರಧಾನಿ ಸಭೆ
Advertisement
ಸಂಜೆ ಸುದ್ದಿಗೋಷ್ಠಿ ನಡೆಸಿದ ನೂತನ ಆರೋಗ್ಯ ಸಚಿವ ಮನ್ಸುಖ್ ಮಾಂಡವ್ಯ, ದೇಶದಲ್ಲಿ 2ನೇ ಅಲೆ ಅಂತ್ಯವಾಗಿಲ್ಲ. 90 ಜಿಲ್ಲೆಗಳಲ್ಲಿ ಶೇ.80ರಷ್ಟು ಕೇಸ್ಗಳು ಪತ್ತೆಯಾಗುತ್ತಿವೆ, ಪ್ರವಾಸಿಗರೇ 3ನೇ ಅಲೆಗೆ ಆಮಂತ್ರಣ ನೀಡುತ್ತಿದ್ದಾರೆ ಎಂದರು.