– ದೇಶ, ವಿದೇಶಗಳಲ್ಲಿ ಚರ್ಚ್ಗಳಿಗೆ ಲೈಟಿಂಗ್ಸ್
ಬೆಂಗಳೂರು: ಕೊರೊನಾ ನಡುವೆಯೂ ವಿಶ್ವದ ಹಲವೆಡೆ ಈಗಾಗಲೇ ಕ್ರಿಸ್ಮಸ್ ಆಚರಣೆ ಮಾಡಲಾಯ್ತು. ತಿಂಗಳುಗಳಿಂದ ಕಾದುಕುಳಿತ ಕ್ರಿಸ್ತನ ಆರಾಧಕರು ಕೋವಿಡ್ ಹಿನ್ನೆಲೆಯಲ್ಲೂ ವಿಶೇಷ ಪ್ರಾರ್ಥನೆಗಳ ಮೂಲಕ ಏಸುವಿಗೆ ನಮಿಸಿದ್ರು. ಬೆಂಗಳೂರಿನ ಶಿವಾಜಿನಗರದ ಸೆಂಟ್ಮೇರಿಸ್ ಬೆಸಿಲಿಕಾ ಚರ್ಚ್ನಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಯ್ತು.
Advertisement
ಮೈಸೂರಿನ ವಿಶ್ವವಿಖ್ಯಾತ ಸಂತಫಿಲೋಮಿನ ಚರ್ಚ್ನಲ್ಲಿ ಬಲಿಪೂಜೆ ಮೂಲಕ ಸರಳವಾಗಿ ಕ್ರಿಸ್ಮಸ್ ಆಚರಣೆ ಮಾಡಿದ್ದಾರೆ. ಕ್ರಿಶ್ಚಿಯನ್ನರು ಬಾಲ ಏಸುವಿನ ಮೆರವಣಿಗೆ ಮಾಡಿದ್ರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದ್ರು. ಚರ್ಚ್ನ ಸಭಾಂಗಣದಲ್ಲಿ ಕೊರೊನಾ ನಿಯಮ ಪಾಲನೆ ಜೊತೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ರು. ಉಡುಪಿಯಲ್ಲೂ ಕ್ರಿಸ್ಮಸ್ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದೆ. ಚರ್ಚ್ ಆವರಣ ವಿದ್ಯುದ್ದೀಪಾಲಂಕಾರದಿಂದ ಝಗಮಗಿಸುತ್ತಿದೆ. ಮಿಡ್ನೈಟ್ ಮಾಸ್ ರದ್ದು ಮಾಡಿರುವ ಉಡುಪಿ ಧರ್ಮ ಪ್ರಾಂತ್ಯ, ನಿಗದಿತ ವೇಳೆಗೆ ಮೊದಲೇ ಕ್ರಿಸ್ಮಸ್ ಬಲಿ ಪೂಜೆಯನ್ನು ನಡೆಸಿದೆ.
Advertisement
Advertisement
ಮಂಜಿನ ನಗರಿ ಮಡಿಕೇರಿಯಲ್ಲು ಕೂಡ ಸಂಭ್ರಮ ಸಡಗರದಿಂದ ಕ್ರಿಸ್ತನ ಹುಟ್ಟುಹಬ್ಬವನ್ನು ಸಂಭ್ರಮಿಸಲಾಗ್ತಿದೆ. ನಗರದ ಸಂತ ಮೈಕಲರ ಚರ್ಚ್ ನವ ವದುವಿನಂತೆ ಸಿಂಗಾರಗೊಂಡಿದ್ದು ಬಣ್ಣ ಬಣ್ಣದ ಲೈಟಿಂಗ್ ಗಳಿಂದ ಮೂಡಿದ ಚಿತ್ತಾರ ನಯನ ಮನೋಹರವಾಗಿದೆ. ಇಡೀ ಚರ್ಚ್ ಸುಂದರ ಅಲಂಕಾರದಿಂದ ಕಂಗೊಳಿಸುತ್ತಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಕ್ರಿಶ್ಚಿಯನ್ ಭಾಂದವರು ಅಗಮಿಸಿ ಪ್ರಾರ್ಥನೆ ಮಾಡುತ್ತಿದ್ದಾರೆ. ಶಿವಮೊಗ್ಗದಲ್ಲೂ ಕ್ರಿಸ್ಮಸ್ ಹಿನ್ನೆಲೆ ಚರ್ಚ್ ಆವರಣವೆಲ್ಲಾ ಕಲರ್ ಕಲರ್ ಲೈಟ್ಸ್ಗಳಿಂದ ಕಂಗೊಳಿಸ್ತಿದೆ. ಕೊರೊನಾ ನಿಯಮದಂತೆಯೇ ಜನರು ಅಂತರ ಕಾಯ್ದುಕೊಂಡು ಯೇಸುವಿಗೆ ಪಾರ್ಥನೆ ಸಲ್ಲಿಸಿದ್ದಾರೆ. ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಬಾಲ ಏಸುವಿಗೆ ಗೋಧಳಿಕೆ ಇಟ್ಟು, ಪರಸ್ಪರ ಶುಭಾಶಯ ಕೋರಿ ಸಂತಸ ಪಟ್ರು.
Advertisement
ಕೊರೊನಾ ಮಧ್ಯೆ ದೇಶದಲ್ಲೂ ಕ್ರಿಸ್ಮಸ್ ಆಚರಣೆ ಮಾಡಲಾಗ್ತಿದೆ. ದೆಹಲಿ, ಮುಂಬೈ, ಕೊಲ್ಕತ್ತಾ ಸೇರಿದಂತೆ ಹಲವೆಡೆ ಯೇಸು ಕ್ರಿಸ್ತನಿಗೆ ಪ್ರಾರ್ಥನೆ ಸಲ್ಲಿಸ್ತಿದ್ದಾರೆ. ವಿದೇಶಗಳಲ್ಲೂ ಕ್ರಿಸ್ಮಸ್ ಆಚರಣೆ ಮಾಡಲಾಗಿದೆ. ಜನರು ಅಂತರ ಕಾಯ್ದುಕೊಂಡು ಕ್ರಿಸ್ಮಸ್ ಕಾರ್ಯಕ್ರಮಗಳಲ್ಲಿ ಭಾಗಿ ಆಗಿದ್ರು. ಅಮೆರಿಕ, ಆಸ್ಟ್ರೇಲಿಯಾದಲ್ಲಿ ಚರ್ಚ್ಗಳಿಗೆ ಮಾಡಿದ್ದ ವಿದ್ಯುತ್ ದೀಪಾಂಲಕಾರ ಎಲ್ಲರನ್ನು ಆಕರ್ಷಿಸುತ್ತಿದೆ.