ಅಬುಧಾಬಿ: ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಐಪಿಎಲ್ ಸರಣಿ ಆರಂಭವಾಗಿದ್ದು, ಚೆನ್ನೈ ತಂಡಕ್ಕೆ ಮುಂಬೈ 163 ರನ್ ಗಳ ಗುರಿಯನ್ನು ನೀಡಿದೆ.
Advertisement
ಚೆನ್ನೈ ಸೂಪರ್ ಕಿಂಗ್ಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟ್ ಮಾಡಿದ ಮುಂಬೈ 9 ವಿಕೆಟ್ ನಷ್ಟಕ್ಕೆ 162 ರನ್ ಹೊಡೆಯಿತು. ಆರಂಭಿಕ ಆಟಗಾರರಾಗಿ ರೋಹಿತ್ ಶರ್ಮಾ ಹಾಗೂ ಡಿ ಕುಕ್ ಫೀಲ್ಡಿಗಿಳಿದರು. ರೋಹಿತ್ ಶರ್ಮಾ ಕೇವಲ 10 ಬಾಲ್ಗೆ 12 ರನ್ ಗಳಿಸುವ ಮೂಲಕ ಕ್ಯಾಚ್ ನೀಡಿ ಪಿಯೂಶ್ ಚಾವ್ಲಾಗೆ ವಿಕೆಟ್ ಒಪ್ಪಿಸಿದರು. ನಂತರ ಡಿ ಕುಕ್ 20 ಬಾಲ್ಗೆ 33 ರನ್ ಗಳಿಸಿ ಔಟಾದರು.
Advertisement
#MumbaiIndians lose the wicket of Rohit Sharma.
Piyush Chawla picks up his first wicket for #CSK.#MI 48/1 after 5 overs.
Follow all the LIVE action here – https://t.co/HAaPi3BpDG #Dream11IPL #MIvCSK pic.twitter.com/6aebyQMeCn
— IndianPremierLeague (@IPL) September 19, 2020
Advertisement
ಆರಂಭದಲ್ಲಿ ಅಬ್ಬರಿಸಿದ್ದ ಮುಂಬೈ ಇಂಡಿಯನ್ಸ್ ತಂಡ ನಂತರ ಅಷ್ಟೇ ವೇಗದಲ್ಲಿ ವಿಕೆಟ್ ಕಳೆದುಕೊಂಡಿತು. ಕುಕ್ ಬಳಿಕ ಬಂದ ಸೂರ್ಯ ಕುಮಾರ್ ಯಾದವ್ 16 ಬಾಲ್ಗೆ 17 ರನ್ ಗಳಿಸಿ ಕ್ಯಾಚ್ ನೀಡಿದರು. ಸೌರಭ್ ತಿವಾರಿ 31 ಬಾಲ್ಗೆ 42ರನ್ ಗಳಿಸಿದರೂ ಅರ್ಧ ಶತಕ ಬಾರಿಸಲು ಸಾಧ್ಯವಾಗಲಿಲ್ಲ. ಹಾರ್ದಿಕ್ ಪಾಂಡ್ಯಾ 10 ಬಾಲ್ಗೆ 14ರನ್ ಗಳಿಸಿ ಔಟಾದರೆ, ಪೊಲಾರ್ಡ್ 14 ಬಾಲ್ಗೆ 18 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
Advertisement
Deepak Chahar strikes!
Suryakumar hits one straight down the ground, high in the air, but finds Curran in the deep.
Live – https://t.co/HAaPi3BpDG #MIvCSK #Dream11IPL pic.twitter.com/FJSZHR6Chf
— IndianPremierLeague (@IPL) September 19, 2020
ಬೌಲರ್ ಗಳ ಪೈಕಿ ಲುಂಗಿ ಎನ್ಗಿಡಿ 3, ದೀಪಕ್ ಚಹರ್ ಹಾಗೂ ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದರು. ಪಿಯೂಶ್ ಚಾವ್ಲಾ, ಕರಣ್ ತಲಾ ಒಂದು ವಿಕೆಟ್ ಕಿತ್ತರು.