ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಪಾಲಕ್ಕಾಡ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮೆಟ್ರೋಮ್ಯಾನ್ ಇ. ಶ್ರೀಧರನ್ ಅವರು ಚುನಾವಣೆಯಲ್ಲಿ ಸೋಲು ಕಂಡಿದ್ದರೂ, ಚುನಾವಣಾ ಪ್ರಚಾರದ ವೇಳೆ ನೀಡಿದ್ದ ಮಾತನ್ನು ಈಡೇರಿಸುವ ಮೂಲಕವಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪಾಲಿಕೆಯ ವಾರ್ಡ್ 3ರಲ್ಲಿನ ಪರಿಶಿಷ್ಟ ವರ್ಗದ ಕುಟುಂಬಗಳಿಗೆ ವಿದ್ಯುತ್ ಸಂಪರ್ಕವಿಲ್ಲ. ಕೆಲವರಿಗೆ ಬಾಕಿ ಇರುವ ಬಿಲ್ ಮೊತ್ತ ಪಾವತಿಸದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಸ್ಥಳೀಯ ನಿವಾಸಿಗಳ ಗುಂಪೊಂದು ಶ್ರೀಧರನ್ ಅವರ ಬಳಿ ಹೇಳಿಕೊಂಡಿತ್ತು. ಆಗ ವಿದ್ಯುತ್ ಸಂಪರ್ಕ ಮರುಕಲ್ಪಿಸುವ ಭರವಸೆ ನೀಡಿದ್ದರು.
Advertisement
Despite loosing, Metro Man
E Sreedharan fulfils his poll promise.
Massive respect .. a man of words❤️ pic.twitter.com/7hN4ow9nTp
— Vikas Chopra (@Pronamotweets) May 20, 2021
Advertisement
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪಾಲಕ್ಕಾಡ್ ಪಾಲಿಕೆ ವ್ಯಾಪ್ತಿಯ ಮದುರವೀರನ್ ಕಾಲೋನಿಯ ಜನತೆಗೆ, ನಾನು ಗೆಲ್ಲಲಿ, ಅಥವಾ ಸೋಲಲಿ ಇಲ್ಲಿನ ಎಲ್ಲ ಕುಟುಂಬಗಳಿಗೂ ವಿದ್ಯುತ್ ಸಂಪರ್ಕ ಸಿಗಲಿದೆ ಎಂಬ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಮಡೆದುಕೊಂಡಿದ್ದಾರೆ.
Advertisement
Advertisement
ಚುನಾವಣೆಯಲ್ಲಿ ಸೋತ ಬಳಿಕವೂ ತಮ್ಮ ಆಶ್ವಾಸನೆ ಮರೆಯದ ಶ್ರೀಧರನ್, ಕಲ್ಪತ್ತಿಯ ಕೆಎಸ್ಇಬಿ ಸಹಾಯಕ ಎಂಜಿನಿಯರ್ ಹೆಸರಿಗೆ ಮಂಗಳವಾರ 81,525 ರೂಪಾಯಿಯ ಚೆಕ್ ರವಾನಿಸಿದ್ದಾರೆ. ಜತೆಗೆ, 11 ಎಸ್ಸಿ ಕುಟುಂಬಗಳಿಗೆ ಹೊಸದಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ಸಹ ವ್ಯವಸ್ಥೆ ಮಾಡಲಾಗಿದೆ.