ನವದೆಹಲಿ: ಪಂಚ ರಾಜ್ಯಗಳು ಚುನಾವಣಾ ಚರ್ಚೆಯಲ್ಲಿ ಕಾಂಗ್ರೆಸ್ ತನ್ನ ವಕ್ತಾರರನ್ನು ಕಳುಹಿಸದಿರುವ ತೀರ್ಮಾನವನ್ನು ತೆಗೆದುಕೊಂಡಿದೆ.
At a time when Nation is facing an unprecedented crisis, when Govt under PM Modi has collapsed, we find it unacceptable to not hold them accountable & instead discuss election wins & losses.
We @INCIndia have decided to withdraw our spokespersons from election debates.
1/2
— Randeep Singh Surjewala (@rssurjewala) May 1, 2021
Advertisement
ಕಾಂಗ್ರೆಸ್ ವಕ್ತಾರ ರಣ್ದೀಪ್ ಸುರ್ಜೆವಾಲಾ ಪ್ರತಿಕ್ರಿಯಿಸಿ, ರಾಷ್ಟ್ರವು ಅಭೂತಪೂರ್ವ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಮಯದಲ್ಲಿ, ಪ್ರಧಾನಿ ಮೋದಿಯವರ ನೇತೃತ್ವದ ಸರ್ಕಾರ ಕುಸಿದುಬಿದ್ದಾಗ, ಅವರನ್ನು ಹೊಣೆಗಾರರನ್ನಾಗಿ ಮಾಡದೇ ಚುನಾವಣಾ ಗೆಲುವುಗಳು ಮತ್ತು ನಷ್ಟಗಳ ಬಗ್ಗೆ ಚರ್ಚಿಸುವುದು ಸರಿಯಲ್ಲ. ಹೀಗಾಗಿ ನಮ್ಮ ವಕ್ತಾರರನ್ನು ಚುನಾವಣಾ ಚರ್ಚೆಗಳಿಂದ ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
Advertisement
2/2
We shall remain available for any comment that media friends want.
We may win, we may lose, but at a time when people are looking for oxygen, beds, medicines, ventilators; our duty tells us to stand by them, work with them to heal & help.
In solidarity with India.
— Randeep Singh Surjewala (@rssurjewala) May 1, 2021
Advertisement
ಮಾಧ್ಯಮ ಸ್ನೇಹಿತರು ಬಯಸುವ ಯಾವುದೇ ಕಾಮೆಂಟ್ಗೆ ನಾವು ಲಭ್ಯವಿರುತ್ತೇವೆ. ನಾವು ಗೆಲ್ಲಬಹುದು, ನಾವು ಸೋಲಬಹುದು. ಆದರೆ ಜನರು ಆಮ್ಲಜನಕ, ಹಾಸಿಗೆಗಳು, ಔಷಧಿಗಳು, ವೆಂಟಿಲೇಟರ್ ಗಳನ್ನು ಹುಡುಕುತ್ತಿರುವ ಸಮಯದಲ್ಲಿ ಅವರ ಜೊತೆ ನಿಲ್ಲುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ನಾವು ಅವರೊಂದಿಗೆ ಕೆಲಸ ಮಾಡುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.