ನವದೆಹಲಿ: ಗಡಿಯಲ್ಲಿ ಚೀನಾ ಕಿರಿಕ್ಗೆ ಭಾರತ ಮತ್ತು ಅಮೆರಿಕ ಸಡ್ಡು ಹೊಡೆದಿವೆ. ಭಾರತ ಮತ್ತು ಅಮೆರಿಕ ಮಧ್ಯೆ ಅತ್ಯುನ್ನತ ಮಿಲಿಟರಿ ತಂತ್ರಜ್ಞಾನ, ಉಪಗ್ರಹ ದತ್ತಾಂಶ ಮತ್ತು ಸೂಕ್ಷ್ಮ ಮಾಹಿತಿಗಳ ವಿನಿಮಯಕ್ಕೆ ರಕ್ಷಣಾ ಒಪ್ಪಂದ ನಡೆದಿದೆ.
ಉಭಯ ದೇಶಗಳ 2+2 ಮಾತುಕತೆಯಲ್ಲಿ ಮೂಲ ವಿನಿಮಯ ಮತ್ತು ಸಹಕಾರ ಒಪ್ಪಂದ(ಬಿಇಸಿಇ), ದ್ವಿಪಕ್ಷೀಯ ರಕ್ಷಣಾ ಮತ್ತು ಮಿಲಿಟರಿ ಸಂಬಂಧ ವೃದ್ಧಿಸಿಕೊಳ್ಳಲು ಒಪ್ಪಂದ ಮಾಡಿಕೊಳ್ಳಲಾಗಿದೆ.
Advertisement
My statement after Ministerial Level India-US 2+2 Dialogue in New Delhi pic.twitter.com/VlaYeKCWG8
— Rajnath Singh (@rajnathsingh) October 27, 2020
Advertisement
ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪ್ಯಾಂಪಿಯೋ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ ಎಸ್ಪರ್ ಇಂದು ಮಾತುಕತೆ ನಡೆಸಿದರು.
Advertisement
ಜಂಟಿ ಸುದ್ದಿಗೋಷ್ಠಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿ, ಕಾನೂನುಗಳನ್ನು ಗೌರವಿಸಿ ಮತ್ತು ಅಂತಾರಾಷ್ಟ್ರೀಯ ಸಾಗರಗಳಲ್ಲಿ ನೌಕಾ ಚಟುವಟಿಕೆಗಳಿಗೆ ಸ್ವಾತಂತ್ರ್ಯವನ್ನು ವಿಸ್ತರಿಸಲು, ಪ್ರಾಂತೀಯ ಸಮಗ್ರತೆ, ದೇಶಗಳ ಸಾರ್ವಭೌಮತೆ ಎತ್ತಿಹಿಡಿಯುವುದು ಅಗತ್ಯ. ಇದಕ್ಕೆ ಉಭಯ ದೇಶಗಳು ಪರಸ್ಪರ ಒಪ್ಪಿಗೆ ಸೂಚಿಸಿವೆ ಎಂದರು.
Advertisement
U.S. Secretary of State Michael R. Pompeo and Secretary of Defense Dr. Mark T. Esper call on Prime Minister @narendramodi
PM appreciates the successful conclusion of the third India-US 2+2 dialogue
Read: https://t.co/VJngDXBVnh pic.twitter.com/PbetOQM897
— PIB India (@PIB_India) October 27, 2020
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಮಾತನಾಡಿ, ಚೀನಾದ ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷ ಜಾಗತಿಕ ಪ್ರಜಾಪ್ರಭುತ್ವ ಕೂಟಕ್ಕೆ ಬೆದರಿಕೆಯಾಗಿದ್ದು, ಈ ಬೆದರಿಕೆಯನ್ನು ಭಾರತ-ಅಮೆರಿಕ ಜಂಟಿಯಾಗಿ ಎದುರಿಸಲಿದೆ ಎಂದು ಹೇಳಿದರು.
ಲಡಾಖ್ ಗಡಿ ಘರ್ಷಣೆ ವಿಚಾರದಲ್ಲಿ ಭಾರತದ ಜೊತೆ ಅಮೆರಿಕ ಗಟ್ಟಿಯಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದ ಅವರು ಚೀನಾದ ದುಷ್ಟ ನೀತಿಗಳನ್ನು ಸೋಲಿಸುತ್ತೇವೆ ಎಂದು ತಿಳಿಸಿದರು.
@IndiaPostOffice and United States Postal Service (USPS) signs Agreement for Electronic Exchange of Customs Data related to postal shipments exchanged between the two countries.@rsprasad https://t.co/1VYOIzeF3O pic.twitter.com/2jRPDj2Wxc
— PIB_INDIA Ministry of Communications (@pib_comm) October 27, 2020