ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಡುವೆ ಐಷಾರಾಮಿ ಚಿಗರಿ ಬಸ್ ಓಡಾಟ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಬಸ್ ಸಂಚಾರ ಸ್ಥಗಿತವಾಗಿತ್ತು. ಲಾಕ್ಡೌನ್ ಸಡಿಲಿಕೆಯಿಂದ ಬಸ್ ಸಂಚಾರ ಪುನರಾಂಭಗೊಂಡಿದ್ದು, ಈಗ ಮತ್ತೆ ಸಂಚಾರ ಪ್ರಾರಂಭಿಸಿವೆ. ಅಲ್ಲದೇ ಬಿ.ಆರ್.ಟಿ.ಎಸ್ ಬಸ್ಸುಗಳಲ್ಲಿ ಪ್ರಯಾಣಿಸಲು ಲಭ್ಯವಿರುವ ಮಾಸಿಕ ರಿಯಾಯಿತಿ ಸ್ಮಾರ್ಟ್ ಕಾರ್ಡ್ ವಿತರಣೆಗೆ ಬಿ.ಆರ್.ಟಿ.ಎಸ್ ಮುಂದಾಗಿದೆ.
Advertisement
ಪ್ರತಿನಿತ್ಯ ಬಿ.ಆರ್.ಟಿ.ಎಸ್ ಬಸ್ಸುಗಳಲ್ಲಿ ಪ್ರಯಾಣಿಸುವ ನೌಕರರಿಗೆ ಹಾಗೂ ಇತರೇ ಶೈಕ್ಷಣಿಕ ವಾಣಿಜ್ಯ ಕೆಲಸ ಕಾರ್ಯಗಳಿಗಾಗಿ ಮೇಲಿಂದ ಮೇಲೆ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ವಾಕರಸಾಸಂಸ್ಥೆ ಹಾಗೂ ಬಿ.ಆರ್.ಟಿ.ಎಸ್ ವತಿಯಿಂದ ಮಾಸಿಕ ರಿಯಾಯಿತಿ ಸ್ಮಾರ್ಟ್ ಕಾರ್ಡ್, ನಗದು ರಹಿತವಾಗಿ ಪ್ರಯಾಣಿಸಲು ಇ-ಪಾಸ್ ಹಾಗೂ ಮಾಸಿಕ ರಿಯಾಯಿತಿ ಸ್ಮಾರ್ಟ್ ಕಾರ್ಡ್ದಾರರಿಗೆ ನಗರ, ಉಪನಗರ ಸಾರಿಗೆಗಳಲ್ಲಿ ವಿಶೇಷ ರಿಯಾಯಿತಿ ಮಾಸಿಕ ಪಾಸುಗಳನ್ನು ಜಾರಿಗೆ ತರಲಾಗಿದೆ.
Advertisement
Advertisement
ಹುಬ್ಬಳ್ಳಿ ಸಿ.ಬಿ.ಟಿ ಧಾರವಾಡ ಹೊಸ ನಿಲ್ದಾಣ 1,280 ರೂ., ಹುಬ್ಬಳ್ಳಿ ರೈಲ್ವೇ ಸ್ಟೇಷನ್ ಹಾಗೂ ಸಿ.ಬಿ.ಟಿ, ಧಾರವಾಡ ಬಿ.ಆರ್.ಟಿ.ಎಸ್ ಟರ್ಮಿನಲ್ 1200 ರೂ, ಹುಬ್ಬಳ್ಳಿ ಎಚ್.ಡಿ.ಎಮ್.ಸಿ ಧಾರವಾಡ ಬಿ.ಆರ್.ಟಿ.ಎಸ್ ಟರ್ಮಿನಲ್ 1,120 ರೂ., ಹುಬ್ಬಳ್ಳಿ ಎಚ್.ಡಿ.ಎಮ್.ಸಿ ಧಾರವಾಡ ಹೊಸ ನಿಲ್ದಾಣ 1200ರೂ., ಹುಬ್ಬಳ್ಳಿ ಸಿ.ಬಿ.ಟಿ ಸತ್ತೂರ ನಿಲ್ದಾಣ 880 ರೂ., ಹುಬ್ಬಳ್ಳಿ ಸಿ.ಬಿ.ಟಿ ನವನಗರ 720 ರೂ., ಧಾರವಾಡ ಹೊಸ ಬಸ್ ನಿಲ್ದಾಣ ನವನಗರ 880 ರೂ., ಧಾರವಾಡ ಬಿ.ಆರ್.ಟಿ.ಎಸ್ ಟರ್ಮಿನಲ್ ನವನಗರ 840 ರೂ., ಧಾರವಾಡ ಹೊಸ ಬಸ್ ನಿಲ್ದಾಣ ಎಸ್.ಡಿ.ಎಮ್. ಆಸ್ಪತ್ರೆ 800 ರೂ., ಧಾರವಾಡ ಬಿ.ಆರ್.ಟಿ.ಎಸ್ ಟರ್ಮಿನಲ್ ಎಸ್.ಡಿ.ಎಮ್.ಆಸ್ಪತ್ರೆ 720 ರೂ., ಪಾಸಿನ ದರವನ್ನು ನಿಗದಿಪಡಿಸಲಾಗಿದೆ.
Advertisement
ಮೊದಲ ಬಾರಿಗೆ ಮಾಸಿಕ ರಿಯಾಯಿತಿ ಸ್ಮಾರ್ಟ್ ಕಾರ್ಡ್ ಪಡೆಯುವರು ಆಧಾರ ಕಾರ್ಡ್ ಪ್ರತಿ ಹಾಗೂ ಒಂದು ಬಾರಿ ರೂ.150 ಸಂಸ್ಕರಣಾ ಶುಲ್ಕ ಪಾವತಿಸಬೇಕಾಗುತ್ತದೆ. ಅಲ್ಲದೇ ಧಾರವಾಡದಲ್ಲಿನ ಬಿ.ಆರ್.ಟಿ.ಎಸ್ ನಿಲ್ದಾಣ (ಮಿತ್ರ ಸಮಾಜ) ಹಾಗೂ ಹೊಸ ಬಸ್ ನಿಲ್ದಾಣ, ಹುಬ್ಬಳ್ಳಿಯಲ್ಲಿನ ಸಿಬಿಟಿ ಹಾಗೂ ಹಳೇ ಬಸ್ ನಿಲ್ದಾಣಗಳಲ್ಲಿ ಸ್ಮಾರ್ಟ್ ಕಾರ್ಡ್ ಪಡೆಯಬಹುದಾಗಿದೆ.