ಚಿಕ್ಕಮಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಮಂಗಗಳಿಗೆ ಬಾಳೆಹಣ್ಣನ್ನು ನೀಡಿ ಹಸಿರ ಪರಿಸರದಲ್ಲಿ ಪ್ರಾಣಿಗಳ ಜೊತೆ ಸಮಯ ಕಳೆದಿದ್ದಾರೆ.
ಲಾಕ್ಡೌನ್ ಪರಿಣಾಮ ಕಳೆದ ಎರಡು ತಿಂಗಳಿನಿಂದ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಯಾವುದೇ ವಾಹನಗಳು ಸಂಚರಿಸುತ್ತಿಲ್ಲ. ವಾಹನ ಸಂಚಾರವಿಲ್ಲದೆ ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರು, ಪ್ರಯಾಣಿಕರನ್ನೇ ನಂಬಿಕೊಂಡು ಬದುಕುತ್ತಿದ್ದ ಸಾವಿರಾರು ವಾನರ ಸೈನ್ ಆಹಾರಕ್ಕಾಗಿ ಪರದಾಟ ನಡೆಸುತ್ತಿತ್ತು. ಈ ವಾನರ ಸೈನ್ಯಕ್ಕೆ ನಳೀನ್ ಕುಮಾರ್ ಕಟೀಲ್ ಬಾಳೆಹಣ್ಣನ್ನು ನೀಡಿ ಹಸಿವನ್ನು ನೀಗಿಸಿದ್ದಾರೆ. ಇದನ್ನೂ ಓದಿ :15 ಅಡಿ ಉದ್ದದ ಬೃಹತ್ ಕಾಳಿಂಗ ಸೆರೆ
ನಳೀನ್ ಕುಮಾರ್ ಕಟೀಲ್ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಮಾರ್ಗವಾಗಿ ಚಾರ್ಮಾಡಿ ಘಾಟ್ ಮೂಲಕ ಮಂಗಳೂರಿಗೆ ಹೋಗುತ್ತಿದ್ದರು. ಈ ವೇಳೆ, ಭಜರಂಗದಳದ ಕಾರ್ಯಕರ್ತರು ಚಾರ್ಮಾಡಿ ಘಾಟಿಯಲ್ಲಿ ಮಂಗಗಳಿಗೆ ಆಹಾರ ನೀಡುತ್ತಿದ್ದರು. ಇದನ್ನು ಗಮನಿಸಿದ ನಳೀನ್ ಕುಮಾರ್ ಕಟೀಲ್ ಗಾಡಿಯಿಂದ ಕೆಳಗೆ ಇಳಿದು ಅರ್ಧ ಗಂಟೆಗೂ ಹೆಚ್ಚು ಹೊತ್ತು ಕಾರ್ಯಕರ್ತರು ಹಾಗೂ ಮಂಗಗಳ ಜೊತೆ ಸಮಯ ಕಳೆದಿದ್ದಾರೆ.
ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚರವಿಲ್ಲದೆ ಆಹಾರಕ್ಕಾಗಿ ಪರದಾಡುತ್ತಿದ್ದ ಮಂಗಗಳಿಗೆ ಭಜರಂಗದಳದ ಕಾರ್ಯಕರ್ತರು ನೂರು ಕೆ.ಜಿ. ಬಾಳೆಹಣ್ಣನ್ನು ತಂದು ನೀಡುತ್ತಿದ್ದರು. ಈ ವೇಳೆ ನಳೀನ್ ಕುಮಾರ್ ಕಟೀಲ್ ಕೂಡ ಮಂಗಗಳಿಗೆ ಬಾಳೆಹಣ್ಣನ್ನು ನೀಡುವ ಮೂಲಕ ಮೂಕ ಪ್ರಾಣಿಗಳ ಹೊಟ್ಟೆ ತುಂಬಿಸಿದ್ದಾರೆ.