– 5 ಮಕ್ಕಳು, ಓರ್ವ ಗರ್ಭಿಣಿಗೂ ಕೊರೊನಾ
ಚಾಮರಾಜನಗರ: ಜಿಲ್ಲೆಯಲ್ಲಿ ಇಂದು 19 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 102ಕ್ಕೇರಿದೆ. ಅಲ್ಲದೆ 98 ಸಕ್ರಿಯ ಪ್ರಕರಣಗಳಿವೆ.
Advertisement
ಸೋಂಕು ತಗುಲಿರುವ ಪಟ್ಟಿಗೆ ಇಂದು ಗರ್ಭಿಣಿಯೂ ಸೇರಿಕೊಂಡಿದ್ದು, ಇವರು ಕೊಳ್ಳೇಗಾಲ ತಾಲೂಕಿನ ಲೊಕ್ಕನಹಳ್ಳಿಯವರಾಗಿದ್ದಾರೆ. ಕಳವಳದ ಸಂಗತಿ ಎಂದರೆ 2 ವರ್ಷ, 11 ವರ್ಷ, 4 ವರ್ಷ, 7 ವರ್ಷದ ಮಕ್ಕಳು ಸೇರಿದಂತೆ ಒಟ್ಟು ಐವರು ಕಂದಮ್ಮಗಳಿಗೆ ಸೋಂಕು ತಗುಲಿದೆ. ಹಾಗಾಗಿ ಜಿಲ್ಲೆಯ ಜನರಲ್ಲಿ ಭಯ ಉಂಟು ಮಾಡಿದೆ.
Advertisement
ಯಳಂದೂರು ತಾಲೂಕಿನ ಮದ್ದೂರು ಗ್ರಾಮದ ಬಸ್ ಚಾಲಕನಿಗೂ ಇಂದು ಕೋವಿಡ್-19 ಪತ್ತೆಯಾಗಿದೆ. ಗುಂಡ್ಲುಪೇಟೆ 12, ಯಳಂದೂರು 2, ಕೊಳ್ಳೇಗಾಲ 2, ಚಾಮರಾಜನಗರ 2 ಹಾಗೂ ಹನೂರಿನಲ್ಲಿ 1 ಕೇಸ್ ಪತ್ತೆಯಾಗುವ ಮೂಲಕ ಜಿಲ್ಲೆಯ ಎಲ್ಲ ತಾಲೂಕುಗಳಿಂದಲೂ ಇಂದು ಸೋಂಕು ವರದಿಯಾಗಿದೆ.
Advertisement
Advertisement
ನಗರ, ಪಟ್ಟಣ ಪ್ರದೇಶಗಳಷ್ಟೇ ಅಲ್ಲದೇ ಹಳ್ಳಿಗಳಲ್ಲೂ ಕೊರೊನಾ ಕಾಣಿಸಿಕೊಳ್ಳುತ್ತಿದ್ದು, ಜಿಲ್ಲೆಯ 8 ಕ್ಕೂ ಹೆಚ್ಚು ಊರುಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಹಳ್ಳಿಗಾಡಿನ ಜನತೆ ಸಹ ಭಯದಲ್ಲೇ ಜೀವನ ಸಾಗಿಸುತ್ತಿದ್ದಾರೆ.