ಬೆಂಗಳೂರು: ಫ್ಲೈಯಿಂಗ್ ಸಿಖ್ ಖ್ಯಾತಿಯ, ಚಾಂಪಿಯನ್ ಓಟಗಾರ ಮಿಲ್ಕಾ ಸಿಂಗ್ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Advertisement
ಈ ಕುರಿತು ಟ್ವಿಟ್ಟರ್ನಲ್ಲಿ ಕೂಡ ಸಂತಾಪ ಸೂಚಿಸಿರುವ ನಳಿನ್ಕುಮಾರ್ ಕಟೀಲ್ ಅವರು, ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ನಾಲ್ಕು ಚಿನ್ನದ ಪದಕಗಳನ್ನು ಗೆದ್ದುಕೊಟ್ಟ ದಿಗ್ಗಜ ಓಟಗಾರ ಮಿಲ್ಕಾ ಸಿಂಗ್ ಅವರು, 1958ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಏಷ್ಯನ್ ಗೇಮ್ಸ್ ನಲ್ಲಿ ನಾಲ್ಕು ಬಾರಿ ಚಿನ್ನ ಗೆದ್ದ ಹೆಗ್ಗಳಿಕೆ ಅವರದ್ದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಥ್ಲಿಟ್ ಮಿಲ್ಕಾಸಿಂಗ್ ಇನ್ನಿಲ್ಲ
Advertisement
ಹಾರುವ ಸಿಖ್ ಎಂದು ಪ್ರಖ್ಯಾತರಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಓಟಗಾರ ಮಿಲ್ಖಾ ಸಿಂಗ್ ನಿಧನರಾಗಿದ್ದಾರೆ.
ದೇಶದ ಕ್ರೀಡಾ ಲೋಕದ ದ್ರುವತಾರೆಯಾಗೆ ಮೆರೆದ ಮಿಲ್ಖಾ ಸಿಂಗ್ ಅವರ ಜೀವನ ಯುವಕರಿಗೆ ಆದರ್ಶವಾಗಿದೆ. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.#MilkhaSinghJi pic.twitter.com/xjdDCirAkV
— Nalinkumar Kateel (@nalinkateel) June 19, 2021
Advertisement
2013ರಲ್ಲಿ ಮಿಲ್ಕಾ ಸಿಂಗ್ ಅವರ ಜೀವನಾಧಾರಿತ ಬಾಲಿವುಡ್ ಸಿನಿಮಾ `ಭಾಗ್ ಮಿಲ್ಕಾ ಭಾಗ್’ ಬಿಡುಗಡೆಯಾಗಿತ್ತು. ಅದು ಕೂಡ ಭರ್ಜರಿ ಹಿಟ್ ಆಗಿತ್ತು. ಮಿಲ್ಕಾ ಸಿಂಗ್ ಭಾರತೀಯ ಸೇನೆಯಲ್ಲಿಯೂ ಕಾರ್ಯನಿರ್ವಹಿಸಿದ್ದರು. ಪಂಜಾಬ್ ಸರ್ಕಾರದಲ್ಲಿ ಕ್ರೀಡಾ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು ಎಂದು ಅವರನ್ನು ನೆನಪಿಸಿಕೊಂಡಿದ್ದಾರೆ. ಮೃತರ ಕುಟುಂಬ, ಬಂಧುಮಿತ್ರರಿಗೆ ಈ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
Advertisement