ಬೆಂಗಳೂರು: ಬಾಂಗ್ಲಾದೇಶ ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಪೊಲೀಸ್ ತನಿಖೆ ಮುಂದುವರೆಯುತ್ತಿದೆ. ಬೆಂಗಳೂರಿನ ಇಂದಿರಾನಗರ ಪೊಲೀಸ್ ಠಾಣೆಗೆ ಯುವತಿಯನ್ನು ಕರೆದೊಯ್ದು ಸಿಆರ್ಪಿಸಿ 161 ಅಡಿ ಹೇಳಿಕೆ ದಾಖಲಿಸಲಾಗಿದೆ. 161 ಹೇಳಿಕೆಯಲ್ಲಿ ಯುವತಿ ಕೆಲವೊಂದು ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾಳೆ.
Advertisement
ಯುವತಿ ಪೊಲೀಸರ ಮುಂದೆ ಕೃತ್ಯ ನಡೆದ ಮರುದಿನವೇ ನಾನು ಕೇರಳಕ್ಕೆ ಹೋಗಿದ್ದೆ ಎಂದು ಯವತಿ ತಿಳಿಸಿದ್ದಾಳೆ. ಬಾಯ್ ಫ್ರೆಂಡ್ಗೆ ಕರೆ ಮಾಡಿ ಘಟನೆ ಬಗ್ಗೆ ಹೇಳಿದಾಗ ಬೆಂಗಳೂರಿನಲ್ಲಿ ಯಾರ ಜೊತೆಗೂ ಇರಬೇಡ ಕೇರಳಕ್ಕೆ ಬಾ ಎಂದು ಹೇಳಿದ ಹಿನ್ನೆಲೆಯಲ್ಲಿ ನಾನು ಕೇರಳಕ್ಕೆ ತೆರಳಿದ್ದೆ ಎಂದಿದ್ದಾಳೆ. ಇದನ್ನೂ ಓದಿ: ವಿಕೃತಿ ಮೆರೆದ ಮರುದಿನವೇ ಪೊಲೀಸ್ ಠಾಣೆಗೆ ಹೋಗಿತ್ತು ಗ್ಯಾಂಗ್ ರೇಪ್ ಗ್ಯಾಂಗ್
Advertisement
ಆರೋಪಿಗಳ ಭಯದಿಂದ ಬೆಂಗಳೂರು ಬಿಟ್ಟು ಕೇರಳದಲ್ಲಿ ಬಾಯ್ ಫ್ರೆಂಡ್ ಜೊತೆಗೆ ನಾನು ವಾಸವಾಗಿದ್ದು, ತನಗೆ ಕುಟುಂಬಸ್ಥರಿಲ್ಲ, ಪೋಷಕರಿಲ್ಲ. ಈ ಹಿಂದೆ ದುಬೈನಲ್ಲಿ ಕೆಲಸ ಮಾಡುತ್ತಿದ್ದೆ. ಡ್ಯಾನ್ಸರ್ ಸಹ ಆಗಿದ್ದೆ. ಆ ಬಳಿಕ ಆರೋಪಿಗಳ ಸಂಪರ್ಕ ಬೆಳೆದು ಢಾಕಾದಿಂದ ಅಕ್ರಮವಾಗಿ ಬೆಂಗಳೂರಿಗೆ ಬಂದಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾಳೆ.
Advertisement
Advertisement
ನನಗೆ ಹಣಕಾಸಿನ ವಿಚಾರವಾಗಿಯೇ ದೌರ್ಜನ್ಯ ಮಾಡಲಾಗಿದೆ. ಈ ಘಟನೆಯಲ್ಲಿ ಮತ್ತೋರ್ವ ಯುವತಿ ಸಹ ಇರುವುದಾಗಿ ಸಂತ್ರಸ್ತ ಯುವತಿ ಹೇಳಿಕೆ ನೀಡಿದ್ದು, ಆಕೆಗಾಗಿ ಇದೀಗ ಪೊಲೀಸರ ತಂಡ ಹುಡುಕಾಟ ಆರಂಭಿಸಿದೆ. ಜೊತೆಗೆ ಸಂಪರ್ಕದಲ್ಲಿದ್ದ ಸ್ನೇಹಿತರ ತೀವ್ರ ವಿಚಾರಣೆ ಸಹ ನಡೆಸಲಾಗುತ್ತಿದೆ. ಸಂತ್ರಸ್ತ ಯುವತಿಯ ಕೆಲವು ಹೇಳಿಕೆ ಅಸ್ಪಷ್ಟದಿಂದ ಕೂಡಿದ್ದು, ಯುವತಿ ಬಳಿ ಯಾವುದೇ ದಾಖಲೆ ಪತ್ತೆಯಾಗಿಲ್ಲ. ಪ್ರಕರಣದಲ್ಲಿ ಇದುವರೆಗಿನ ತನಿಖೆಯಲ್ಲಿ ಪ್ರಾಥಮಿಕ ಮಾಹಿತಿ ಪಡೆದಿರೋ ಪೊಲೀಸರ ತಂಡ ಹೆಚ್ಚಿನ ಮಾಹಿತಿಗಾಗಿ ತನಿಖೆ ಮುಂದುವರೆಸಿದೆ. ಇದನ್ನೂ ಓದಿ: ಗ್ಯಾಂಗ್ರೇಪ್ ಪ್ರಕರಣ – ಕೇರಳದಿಂದ ಯುವತಿಯನ್ನು ಬೆಂಗ್ಳೂರಿಗೆ ಕರೆತಂದ ಪೊಲೀಸರು
ಏನಿದು ಪ್ರಕರಣ?
ಯುವತಿಯನ್ನು ಅತ್ಯಾಚಾರಗೈದು ಗುಪ್ತಾಂಗಕ್ಕೆ ಮದ್ಯದ ಬಾಟೆಲ್ ಇರಿಸಿ ಕಾಮುಕರು ವಿಕೃತಿ ಮರೆದಿದ್ದಾರೆ. ವೀಡಿಯೋ ವೈರಲ್ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ನಾಲ್ವರು ಕಾಮುಕರಿಗೆ ಇಬ್ಬರು ಯುವತಿಯರು ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರು ಅತ್ಯಾಚಾರ ಪ್ರಕರಣ- ಕಾಮುಕರ ಕಾಲಿಗೆ ಗುಂಡು ಹೊಡೆದ ಪೊಲೀಸರು
ಸಾಗರ್, ಮೊಹಮ್ಮದ್ ಬಾಬಾ ಶೇಕ್, ರಿದಾಯ್ ಬಾಬು ಹಾಗೂ ಹಕೀಲ್ ಬಂಧಿತ ಆರೋಪಿಗಳು. ಆರೋಪಿಗಳು ಬಾಂಗ್ಲಾ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದರು. ಸಂತ್ರಸ್ಥೆ ಸೇರಿದಂತೆ ಆರೋಪಿಗಳು ರಾಮಮೂರ್ತಿ ನಗರದ ಎನ್.ಆರ್.ಐ ಲೇಔಟ್ ನಲ್ಲಿ ವಾಸವಾಗಿದ್ದರು. ಯುವತಿಯನ್ನು ಅತ್ಯಾಚಾರಗೈದು, ದೌರ್ಜನ್ಯ ನಡೆಸಿ ಹಲ್ಲೆ ಮಾಡಿದ್ದಾರೆ. ಈ ಎಲ್ಲ ಘಟನೆಯನ್ನು ಕಿರಾತಕರು ವೀಡಿಯೋ ಮಾಡಿದ್ದಾರೆ. ಯುವತಿಯ ಮೇಲೆ ದ್ವೇಷಕ್ಕಾಗಿ ಅತ್ಯಾಚಾರ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಬಾಂಗ್ಲಾದೇಶ ಸೇರಿದಂತೆ ಭಾರತದ ಈಶಾನ್ಯ ರಾಜ್ಯಗಳಲ್ಲಿ ಅತ್ಯಾಚಾರದ ವೀಡಿಯೋ ವೈರಲ್ ಆಗಿತ್ತು. ಅಲ್ಲಿ ವೀಡಿಯೋ ವೈರಲ್ ಆಗುತ್ತಿದ್ದಂತೆ ಅಸ್ಸಾಂ ರಾಜ್ಯದ ಪೊಲೀಸರು ಈ ಕುರಿತು ತನಿಖೆ ನಡೆಸಿದ್ದಾರೆ. ವೀಡಿಯೋದಲ್ಲಿ ಬಾಂಗ್ಲಾ ಪ್ರಜೆಗಳು ಭಾಗಿಯಾಗಿದ್ದರಿಂದ ಅಲ್ಲಿನ ಪೊಲೀಸರಿಗೂ ಮಾಹಿತಿ ರವಾನಿಸಲಾಗಿತ್ತು. ಆ ಬಳಿಕ ಬಾಂಗ್ಲಾ ಪೊಲೀಸರು ಸಂತ್ರಸ್ತೆಯ ಕುಟುಂಬಸ್ಥರನ್ನ ಪತ್ತೆ ಮಾಡಿದ್ದಾರೆ. ಆ ನಂತರ ಘಟನೆ ಬೆಂಗಳೂರಿನಲ್ಲಿ ನಡೆದಿರೋದು ಬಗ್ಗೆ ತಿಳಿದು ಬಂದಿದೆ. ಇದನ್ನೂ ಓದಿ: ಬೆಂಗ್ಳೂರಿನಲ್ಲೊಂದು ನಿರ್ಭಯಾ ಪ್ರಕರಣ – ಅತ್ಯಾಚಾರಗೈದು ಗುಪ್ತಾಂಗಕ್ಕೆ ಬಾಟಲ್ ಇರಿಸಿ ವಿಕೃತಿ!