ಬೆಂಗಳೂರು: ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದ ವೇದಿಕೆಯಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಿವಾಸಿಗಳಿಗೆ ಇಂದು ಹಕ್ಕುಪತ್ರ ನೀಡಲಾಯಿತು.
ಕಂದಾಯ ಸಚಿವರಾದ ಆರ್.ಅಶೋಕ್ ಮಾತನಾಡಿ, ಬಡವರಿಗೆ ಆಶ್ರಯ ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಬಡವರಿಗೆ ಸೂರು ನೀಡಲು ಕಂದಾಯ ಇಲಾಖೆಯಿಂದ ನೂರಾರು ಎಕರೆ ಜಾಗವನ್ನು ವಸತಿ ಇಲಾಖೆಗೆ ನೀಡಲಾಗಿದೆ ಎಂದು ಹೇಳಿದರು.
Advertisement
Advertisement
ಬಡವರ ಜೀವನದಲ್ಲಿ ಬೆಳಕಾಗಬೇಕು ಎಂದು ಸಾವಿರಾರು ಎಕರೆ ಭೂಮಿಯನ್ನು ಕಂದಾಯ ಇಲಾಖೆವತಿಯಿಂದ ಕೊಳಗೇರಿ,ವಸತಿ ಇಲಾಖೆ ನೀಡಲಾಗಿದೆ. ಹಕ್ಕುಪತ್ರ ನೀಡಲು ನೆನಗುದಿಗೆ ಬಿದ್ದ ಕಾರ್ಯ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ನೇತೃತ್ವದಲ್ಲಿ ನೀಡಲಾಗುತ್ತಿದೆ. 1800 ಕೊಳಚೆ ಪ್ರದೇಶದಲ್ಲಿ ರಾಜ್ಯದ ವಿವಿದ ಕಡೆ ಬಡವರಿಗೆ 3ಲಕ್ಷದ ಮನೆಗಳನ್ನು ನೀಡಲಾಗುತ್ತಿದೆ. ಹಕ್ಕುಪತ್ರ 5 ವರ್ಷಗಳ ಕಾಲ ಪರಭಾರೆ ಮಾಡುವಂತಿಲ್ಲ. ಬ್ಯಾಂಕ್ ನಿಂದ ಸಾಲ ಪಡೆದು ಮನೆ ಕಟ್ಟಿಕೊಳ್ಳಬಹುದು ಎಂದು ವಸತಿ ಸಚಿವರಾದ ವಿ.ಸೋಮಣ್ಣ ತಿಳಿಸಿದರು.
Advertisement
Advertisement
ಈ ಕಾರ್ಯಕ್ರಮದಲ್ಲಿ ನಗರಾಭಿವೃದ್ದಿ ಸಚಿವರಾದ ಭೈರತಿ ಬಸವರಾಜ್, ಕೊಳಗೇರಿ ಅಭಿವೃದ್ದಿ ಮಂಡಳಿ ಅಧ್ಯಕ್ಷರಾದ ಮಹೇಶ್ ಕುಮಟಹಳ್ಳಿ, ವಿಧಾನಪರಿಷತ್ ಸದಸ್ಯ ದೇವೇಗೌಡ, ಪುಟ್ಟಣ್ಣ, ವಸತಿ ಇಲಾಖೆ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ಬಿಬಿಎಂಪಿ ಸದಸ್ಯರುಗಳಾದ ಕೆ.ಉಮೇಶ್ ಶೆಟ್ಟಿ,ಮೋಹನ್ ಕುಮಾರ್, ಶಾಂತಕುಮಾರಿ, ದಾಸೇಗೌಡ, ಮಧುಕುಮಾರಿ ವಾಗೇಶ್, ಶ್ರೀಮತಿ ರೂಪ ಲಿಂಗೇಶ್ವರ್, ಶಿಲ್ಪ ಶ್ರೀಧರ್, ರಾಜ್ಯ ಬಿಜೆಪಿ ಯುವ ಮೋರ್ಚಾ ಮುಖಂಡರಾದ ಅರುಣ್ ಸೋಮಣ್ಣ ಭಾಗಿಯಾಗಿದ್ದರು. ಬಿಜೆಪಿ ಮಂಡಲದ ಅಧ್ಯಕ್ಷರಾದ ವಿಶ್ವನಾಥಗೌಡರು ಕಾರ್ಯಕ್ರಮದ ಉದ್ಘಾಟನೆ ಮಾಡಿದರು.