– ಮಹದಾಯಿಗೆ ಕಟ್ಟಿದ ಗೋಡೆ ಟಚ್ ಮಾಡಿದ್ರೆ ರಾಜೀನಾಮೆ
– ಡಿಸಿಎಂ ಹುದ್ದೆ ನಾನು ಬಯಸಿಲ್ಲ
ಬೆಳಗಾವಿ: ನಾವು ಮಹದಾಯಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಗೋಡೆ ಟಚ್ ಮಾಡಿದ್ರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಗೋವಾ ಸಿಎಂ ಪ್ರಮೋದ್ ಸಾವಂತ್ ಮಹದಾಯಿ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಕಾನೂನು ಬಾಹಿರವಾಗಿ ಯಾವುದೇ ಕೆಲಸ ಮಾಡಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಎಂದಿದ್ದಾರೆ.
Advertisement
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ, ನಮ್ಮ ನಾಯಕ ಬಿಎಸ್ವೈ. ಈ ಅವಧಿ ಮಾತ್ರ ಅಲ್ಲ, ಮುಂದಿನ ಚುನಾವಣೆಯಲ್ಲಿಯೂ ಯಡಿಯೂರಪ್ಪ ನಾಯಕತ್ವದಲ್ಲಿ ನಾವು ಸಾಗುತ್ತೇವೆ.
Advertisement
Advertisement
ಡಿಸಿಎಂ ಹುದ್ದೆ ನಾನು ಬಯಸಿಲ್ಲ. ಬಾಂಬೆ ಪಾರ್ಟಿ ವಿಚಾರಚಾಗಿ ಶಾಸಕ ರೇಣುಕಾಚಾರ್ಯ ಹೇಳಿಕೆಯನ್ನು ಪ್ರತ್ಯಕ್ಷವಾಗಿ ಗಮನಿಸಿಲ್ಲ. ಮಾಧ್ಯಮಗಳಿಂದ ತಿಳಿದು ಬಂದಿದೆ. ನಮ್ಮ ಜೊತೆಗಿದ್ದವರಿಗೆ ಸಚಿವ ಸ್ಥಾನ ಕೊಡಿಸಲು ನಾನು ರಾಜೀನಾಮೆ ನೀಡಲು ಸಿದ್ಧ ಎಂದರು.