ಪ್ರತಿವಾರ ಬಿಗ್ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆಯುವಂತೆ ಈ ವಾರವೂ ನಡೆಯಿತು. ಈ ವಾರ ಮನೆಯಿಂದ ಹೊರಹೋಗಬೇಕೆಂದು ದೊಡ್ಮನೆ ಸದಸ್ಯರು ಲ್ಯಾಗ್ ಮಂಜು, ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ಅರವಿಂದ್ ಹೆಸರನ್ನು ಸೂಚಿಸಿದ್ದರು. ಅಲ್ಲದೇ ಈ ಮೊದಲನೇ ದಿವ್ಯಾ ಸುರೇಶ್ ಹಾಗೂ ಪ್ರಿಯಾಂಕ್ ನೇರವಾಗಿ ನಾಮಿನೇಟ್ ಆಗಿದ್ದರು.
Advertisement
ಈ ಎಲ್ಲದರ ಮಧ್ಯೆ ವಾರದ ಕ್ಯಾಪ್ಟನ್ ಆಗಿದ್ದ ರಘು, ಶುಭಾ ಪೂಂಜಾ ಬಳಿ ಗೋಲ್ಡನ್ ಪಾಸ್ ಇದೆ. ಅದನ್ನು ಅವರು ಬಳಸುತ್ತಾರೋ ಇಲ್ಲವೋ ಎಂಬ ಕೂತೂಹಲ ಇರುವುದರಿಂದ ನಾನು ಅವರನ್ನು ನೇರವಾಗಿ ನಾಮಿನೇಟ್ ಮಾಡುತ್ತೇನೆ ಎಂದು ಸೂಚಿಸಿದ್ದರು.
Advertisement
Advertisement
ಅದರಂತೆ ಸುದೀಪ್ ಅನುಪಸ್ಥಿತಿಯಲ್ಲಿ ಬಿಗ್ಬಾಸ್ ಕಾರ್ಯಕ್ರಮ ಎಂದಿನಂತೆ ನಡೆಯಿತು. ಈ ವೇಳೆ ಬಿಗ್ಬಾಸ್ ಶುಭಾ ಗೋಲ್ಡನ್ ಪಾಸ್ ಬಳಸಿ ನಾಮಿನೇಷನ್ನಿಂದ ಹೊರಬರಲು ಇಚ್ಛಿಸುತ್ತೀರಾ ಎಂದು ಕೇಳಿದ್ದಾರೆ. ಆಗ ಶುಭಾ, ಹೌದು ನಾನು ಗೋಲ್ಡನ್ ಪಾಸ್ ಬಳಸುತ್ತೀನಿ ಎಂದು ಹೇಳಿ, ಈ ವಾರ ಡೈರೆಕ್ಟ್ ನಾಮಿನೇಷನ್ ನಿಂದ ಹೊರಬಂದಿದ್ದಾರೆ.
Advertisement
ಬಿಗ್ಬಾಸ್ ನೀಡಿದ್ದ ವಿಶೇಷ ಗೋಲ್ಡನ್ ಪಾಸ್ ಬಳಸಿಕೊಳ್ಳದೇ ಕಳೆದ ವಾರ ನಾಮಿನೇಟ್ ಆಗಿ ರಾಜೀವ್ ದೊಡ್ಮನೆಯಿಂದ ಹೊರ ಬಂದಿದ್ದರು. ಈ ವೇಳೆ ರಾಜೀವ್ ಮನೆಯಿಂದ ಹೊರಗೆ ಬರುವ ಮುನ್ನ ನಟಿ ಶುಭಾ ಪೂಂಜಾಗೆ ತಮಗೆ ದೊರೆತಿದ್ದ ಗೋಲ್ಡನ್ ಪಾಸ್ ನೀಡಿದ್ದರು. ಅಲ್ಲದೆ ಮನೆಯ ಎಲ್ಲಾ ಸ್ಪರ್ಧಿಗಳಿಗೂ ಶುಭಾ ಕೈನಲ್ಲಿದ್ದ ಗೋಲ್ಡನ್ ಪಾಸ್ ಮೇಲೆ ಒಂದು ಕಣ್ಣಿತ್ತು. ಆದರೆ ಇದೀಗ ಶುಭಾ ಗೋಲ್ಡನ್ ಪಾಸ್ ಬಳಸುವ ಮೂಲಕ ದೊಡ್ಮನೆಯಲ್ಲಿ ತಮ್ಮ ಆಟವನ್ನು ಮುಂದುವರಿಸಿದ್ದಾರೆ.