ಮುಂಬೈ: ತೌಕ್ತೆ ಚಂಡಮಾರುತವು ದೇಶದ ವಿವಿಧ ಭಾಗಗಳಿಗೆ ಹಾನಿಗೊಳಿಸಿದ್ದು, ಅರಬ್ಬಿ ಸಮುದ್ರದ ಬಲವಾದ ಅಲೆಗಳು ಗೇಟ್ ವೇ ಆಫ್ ಇಂಡಿಯಾಗೆ ಅಪ್ಪಳಿಸಿದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
ವೀಡಿಯೋವನ್ನು ಗೇಟ್ ಆಫ್ ಇಂಡಿಯಾದ ಬಳಿ ಇರುವ ತಾಜ್ಮಹಲ್ ಹೋಟೆಲ್ನಿಂದ ಸೆರೆಹಿಡಿದಂತಿದ್ದು, ಅಲೆಗಳು ಗೇಟ್ ವೇ ಆಫ್ ಇಂಡಿಯಾದ ಗೋಡೆಗಳಿಗೆ ಜೋರಾಗಿ ಬಂದು ಅಪ್ಪಳಿಸುತ್ತಿರುವುದನ್ನು ಕಾಣಬಹುದಾಗಿದೆ.
Advertisement
ವೀಡಿಯೋದಲ್ಲಿ ಅಲೆಗಳು ಸ್ಮಾರಕದ ಗೋಡೆಗಳ ಮೇಲೆ ರಭಸದಿಂದ ಅಪ್ಪಳಿಸುತ್ತಿದ್ದು, ಜೋರಾಗಿ ಗಾಳಿ ಬೀಸುತ್ತಿರುತ್ತದೆ. ಮುಂಬೈ ಕರಾವಳಿ ಸಮೀಪದಲ್ಲಿ ಚಂಡಮಾರುತ ಹಾದು ಹೋಗಿದ್ದು, ಸೋಮವಾರ ಮಧ್ಯಾಹ್ನ ಮುಂಬೈಯಲ್ಲಿ 114 ಕಿ.ಮೀ ವೇಗದಲ್ಲಿ ಗಾಳಿ ಬೀಸಿದೆ ಎಂದು ನಾಗರಿಕ ಅಧಿಕಾರಿಗಳು ತಿಳಿಸಿದ್ದಾರೆ.
Advertisement
Never Ever Seen Gateway of India like this ???????? Wondering if water has entered the Taj Hotel?? #CycloneTaukte #Gateway_of_India #mumbairain pic.twitter.com/ayfZHgVc0H
— Rosy (@rose_k01) May 17, 2021
Advertisement
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋಗೆ ಹಲವಾರು ವ್ಯೂಸ್ ಬಂದಿದ್ದು, ಈ ಭಯಾನಕ ದೃಶ್ಯ ವೈರಲ್ ಆಗುತ್ತಿದೆ