ಚೆನ್ನೈ: 1.42 ಕಿಲೋ ಗ್ರಾಂ ಚಿನ್ನ ಸೇರಿದಂತೆ 85 ಲಕ್ಷ ಮೌಲ್ಯದ ವಸ್ತುಗಳನ್ನ ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಪೊಲೀಸರು ಬುಧವಾರ ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಚೆನ್ನೈ ಏರ್ ಕಸ್ಟಮ್ಸ್ ಪ್ರಕಾರ ಆರೋಪಿಗಳ ಬಳಿ ಇದ್ದ 72.6 ಲಕ್ಷ ಬೆಲೆಬಾಳುವ 1.42 ಕೆಜಿ ಚಿನ್ನ ಸೇರಿದಂತೆ ಸಿಗರೇಟುಗಳು, ಸ್ಮಾರ್ಟ್ ಫೋನ್ಗಳನ್ನು, ಲ್ಯಾಪ್ಟಾಪ್ ಹಾಗೂ ಮದ್ಯ ಒಟ್ಟಾರೆ 12.4 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಫ್ಲೈಟ್ 6 ಇ 8246ನಲ್ಲಿ ದುಬೈನಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದ ಈ ಇಬ್ಬರು ಆರೋಪಿಗಳು ತಮ್ಮ ಗುದನಾಳದ ಒಳಗೆ ಚಿನ್ನದ ಪೇಸ್ಟ್ನನ್ನು ಮರೆಮಾಚಿಕೊಂಡಿರೋದು ಪರಿಶೀಲನೆ ನಡೆಸಿದಾಗ ತಿಳಿದು ಬಂದಿದೆ. ಜೊತೆಗೆ ಆರೋಪಿಗಳ ಲಗೇಜ್ನಲ್ಲಿ ಇದ್ದ ಮತ್ತಷ್ಟು ವಸ್ತುಗಳನ್ನ ಸಹ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.