ನವದೆಹಲಿ: ಪೂರ್ವ ಲಡಾಖ್ ಗಡಿ ಪ್ರದೇಶದ ಪ್ಯಾಂಗಾಂಗೊ ತ್ಸೋ ಸರೋವರದ ಬಳಿ ಚೀನಾ ಪ್ರಚೋದನಕಾರಿ ಚಟುವಟಿಕೆಗಳು ಮುಂದಿವರಿಸಿದ್ದು, ಭಾರತ ಗುಂಡಿನ ದಾಳಿಯಂತಹ ಆಕ್ರಮಣಕಾರಿ ಪ್ರಯೋಗ ಮಾಡಿಲ್ಲ ಎಂದು ಭಾರತೀಯ ಸೇನೆ ಹೇಳಿದೆ.
ಚೀನಾ ಆರೋಪಕ್ಕೆ ಭಾರತೀಯ ಸೇನೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು ಗುಂಡಿನ ದಾಳಿ ನಡೆಸಿದ್ದು ಭಾರತವಲ್ಲ, ಚೀನಾ ಸೈನಿಕರು ಎಂದು ತಿರುಗೇಟು ನೀಡಿದೆ. ಭಾರತ ಪೂರ್ವ ಲಡಾಖ್ ನಲ್ಲಿ ಎಲ್ಎಸಿ(ನೈಜ ನಿಯಂತ್ರಣ ರೇಖೆ)ಯನ್ನ ಉಲ್ಲಂಘಿಸಿಲ್ಲ, ಗುಂಡಿನ ದಾಳಿಯಂತಹ ಆಕ್ರಮಣಕಾರಿ ಪ್ರಯೋಗ ಮಾಡಿಲ್ಲ ಬದಲಾಗಿ ಚೀನಾ ಪ್ರಚೋದನಕಾರಿ ಚಟುವಟಿಕೆ ಮುಂದುವರಿಸಿದೆ ಎಂದು ಆರೋಪಿಸಿದೆ.
Advertisement
While India is committed to disengagement & de-escalating situation on the LAC, China continues to undertake provocative activities to escalate. At no stage has the Indian Army transgressed across the LAC or resorted to use of any aggressive means, including firing: Indian Army pic.twitter.com/jhrXs0BHvb
— ANI (@ANI) September 8, 2020
Advertisement
ಮಿಲಿಟರಿ, ರಾಜತಾಂತ್ರಿಕ ಮಾತುಕತೆ ಹಂತದಲ್ಲಿ ಚೀನಾ ನಿಯಮಗಳನ್ನು ಉಲ್ಲಂಘಿಸುತ್ತಿದೆ. ಎಲ್ಎಸಿಯಲ್ಲಿರುವ ಭಾರತದ ಮುಂಚೂಣಿ ಪ್ರದೇಶದ ಆಕ್ರಮಣಕ್ಕೆ ಚೀನಾ ನಿನ್ನೆ ರಾತ್ರಿ ಪ್ರಯತ್ನ ಮಾಡಿದೆ ನಮ್ಮ ಸೈನಿಕರು ಇದನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ ಈ ಬೆನ್ನಲ್ಲೇ ಚೀನಾ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಗಂಭೀರ ಪ್ರಚೋದನೆ ಬಳಿಕವೂ ಗಡಿಯಲ್ಲಿ ಭಾರತ ಶಾಂತಿ ಕಾಪಾಡಿದೆ ರಾಷ್ಟ್ರೀಯ ಸಮಗ್ರತೆ ಮತ್ತು ಸಾರ್ವಭೌಮತ್ವ ರಕ್ಷಣೆ ಮಾಡಲಿದ್ದೇವೆ ಎಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ.
Advertisement
In the instant case on 07 September, it was China's PLA troops who were attempting to close-in with one of our forward positions along the LAC & when dissuaded by own troops, PLA troops fired a few rounds in the air in an attempt to intimidate own troops: Indian Army https://t.co/OtW4YgPKwJ
— ANI (@ANI) September 8, 2020
Advertisement
ಪ್ಯಾಂಗಾಂಗೊ ತ್ಸೋ ಸರೋವರದ ದಕ್ಷಿಣ ದಂಡೆಯ ಶೆನ್ಪಾವೋ ಪರ್ವತದಲ್ಲಿ ಎಲ್ಎಸಿ ಯನ್ನು ಭಾರತೀಯ ಪಡೆಗಳು ದಾಟಿವೆ. ಗಸ್ತು ತಿರುಗುತ್ತಿದ್ದ ಚೀನಾ ಸೈನಿಕರು ಎಲ್ಎಸಿ ದಾಟಿದ ಭಾರತೀಯ ಸೈನಿಕರು ಜೊತೆಗೆ ಮಾತುಕತೆಗೆ ತೆರಳಿದ್ದರು ಈ ವೇಳೆ ಭಾರತೀಯ ಸೈನಿಕರು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯ ಬಳಿಕವೂ ಗಡಿಯಲ್ಲಿ ಚೀನಾ ಶಾಂತಿಯನ್ನು ಕಾಪಾಡಿದೆ ಎಂದು ಚೀನಾ ಸೇನಾ ವಕ್ತಾರರು ಆರೋಪಿಸಿದ್ದರು.