-ಬೆಳಗ್ಗೆ ವಾಕಿಂಗ್ ಬಂದಿದ್ದ ಕೋಚ್
-ಇಬ್ಬರು ಯುವಕರಿಂದ ಕೃತ್ಯ
ಲಕ್ನೋ: ಬೆಳಗ್ಗೆ ವಾಕಿಂಗ್ ಜಿಮ್ ತರಬೇತುದಾರರೊಬ್ಬರನ್ನು ಗುಂಡಿಕ್ಕಿ ಕೊಲೆಗೈದಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. ಇಬ್ಬರ ಯುವಕರು ಗುಂಡಿನ ದಾಳಿ ನಡೆಸಿರೋದನ್ನ ಪ್ರತ್ಯಕ್ಷದರ್ಶಿಗಳು ಖಚಿತಪಡಿಸಿದ್ದಾರೆ.
ಸಕೌತಿ ಗ್ರಾಮದ ನಿವಾಸಿ ಪರ್ವೀಂದ್ರ (45) ಕೊಲೆಯಾದ ಜಿಮ್ ಕೋಚ್. ಪರ್ವೀಂದ್ರ ಇಂದು ಬೆಳಗ್ಗೆ ನಂಗೌಲಿ ರಸ್ತೆಯಲ್ಲಿ ವಾಕಿಂಗ್ಗೆ ಬಂದಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ಯುವಕರಿಬ್ಬರು ಪರ್ವೀಂದ್ರ ಜೊತೆ ಮಾತನಾಡಿದ್ದಾರೆ. ಕೆಲ ಸಮಯದ ಬಳಿಕ ಪರ್ವೀಂದ್ರ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡಿನ ಸದ್ದು ಕೇಳುತ್ತಿದ್ದಂತೆ ಗ್ರಾಮಸ್ಥರು ಯುವಕರನ್ನ ಹಿಡಿಯಲು ಪ್ರಯತ್ನಿಸಿದ್ದಾರೆ. ಆರೋಪಿಗಳಿಬ್ಬರು ಹೆದ್ದಾರಿ ಮೂಲಕ ಪರಾರಿಯಾಗಿದ್ದಾರೆ. ಇದನ್ನೂ ಓದಿ: 90 ವರ್ಷದ ಅಜ್ಜಿಯನ್ನೂ ಬಿಡದ ಕಾಮುಕ- ಅತ್ಯಾಚಾರವೆಸಗಿ ಥಳಿಸಿದ!
Advertisement
Advertisement
ಗಾಯಗೊಂಡಿದ್ದ ಪರ್ವೀಂದ್ರನನ್ನ ಗ್ರಾಮಸ್ಥರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ವೈದ್ಯರು ಪರ್ವೀಂದ್ರ ಸಾವನ್ನಪ್ಪಿರೋದನ್ನ ದೃಢಪಡಿಸಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದ್ದು, ಪ್ರತ್ಯಕ್ಷದರ್ಶಿಗಳು ಮತ್ತು ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮೃತ ಪರ್ವೀಂದ್ರ ಜಿಮ್ ಜೊತೆಗೆ ಗುತ್ತಿಗೆ ವ್ಯವಹಾರಗಳನ್ನು ಮಾಡುತ್ತಿದ್ದರು. ಪ್ರತ್ಯಕ್ಷದರ್ಶಿ ಹೇಳಿಕೆ ಪ್ರಕಾರ, ಐದು ಬಾರಿ ಫೈರಿಂಗ್ ಮಾಡಲಾಗಿದೆ. ಇದನ್ನೂ ಓದಿ: ಬಾತ್ರೂಮಿನಲ್ಲಿಯೇ ಧಾರಾವಾಹಿ ನಟಿ ನೇಣಿಗೆ ಶರಣು!
Advertisement
Advertisement
ಹಣದ ವಿಚಾರವಾಗಿ ಕೊಲೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈಗಾಗಲೇ ಇಬ್ಬರನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ಪರ್ವೀಂದ್ರ ಸಿಂಗ್ ಮೃತದೇಹವನ್ನ ಮರೋಣತ್ತರ ಶವ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಮೀರತ್ ಎಸ್.ಪಿ. ಅಖಿಲೇಶ್ ನಾರಾಯಣ್ ತಿಳಿಸಿದ್ದಾರೆ. ಇದನ್ನೂ ಓದಿ: ಇಲಿ ಓಡಿಸಲು ನಿರಾಕರಿಸಿದ ಪತಿಯ ಜನನಾಂಗವನ್ನೇ ಕಚ್ಚಿದಳು!