– ಭಾರತದ ಕಡೆಯಿಂದಲೇ ತಪ್ಪು ನಡೆದಿದೆ
– ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸೋಣ
ನವದೆಹಲಿ: ಚೀನಾ ಪದೇ ಪದೇ ಭಾರತವನ್ನು ಕೆರಳಿಸುವ ಕೆಲಸವನ್ನು ಮಾಡುತ್ತಿದೆ. ಈಗ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗಾಲ್ವಾನ್ ನದಿ ಕಣಿವೆಯ ಸಾರ್ವಭೌಮತ್ವ ಯಾವಗಲೂ ಚೀನಾಗೆ ಸೇರಿದ್ದು, ಎಂದು ಹೇಳಿದ್ದಾರೆ.
ಗಾಲ್ವಾನ್ ಕಣುವೆಯಲ್ಲಿ ಖ್ಯಾತೆ ತೆಗೆಯುತ್ತಿರುವ ಚೀನಾ, ತನ್ನ ಹೇಳಿಕೆಗಳ ಮೂಲಕ ಭಾರತವನ್ನು ಕೆರಳಿಸುವ ಕೆಲಸ ಮಾಡುತ್ತಿದೆ. ಈಗ ಈ ವಿಚಾರವಾಗಿ ಮಾತನಾಡಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜೀವೋ ಲಿಜಿಯಾನ್, ನಾವು ಭಾರತದ ಜೊತೆಗೆ ಹೆಚ್ಚಿನ ಸಂಘರ್ಷ ಬಯಸುವುದಿಲ್ಲ. ಆದರೆ ಗಾಲ್ವಾನ್ ಕಣಿವೆಯ ಸಾರ್ವಭೌಮತ್ವ ಯಾವಗಲೂ ಚೀನಾಗೆ ಸೇರಿದ್ದು ಎಂದು ಹೇಳಿದ್ದಾರೆ.
Advertisement
The sovereignty of the Galwan valley area has always belonged to China. The Indian border troops flip-flopped and seriously violated our border protocols on border-related issues and the consensus of our commander level talks: Zhao Lijian, Chinese Foreign Ministry Spokesperson pic.twitter.com/P1FaBGYkUY
— ANI (@ANI) June 17, 2020
Advertisement
ಭಾರತವು ಗಡಿಯಲ್ಲಿರುವ ತಮ್ಮ ಮುಂಚೂಣಿ ಸೈನಿಕರಿಗೆ ಶಿಸ್ತುಬದ್ಧವಾಗಿ ಇರಲು ತಿಳಿಸಬೇಕು ಮತ್ತು ಗಡಿಭಾಗದಲ್ಲಿ ಪ್ರಚೋದನೆ ಮಾಡುವುದು ಹಾಗೂ ನಿಯಮವನ್ನು ಉಲ್ಲಂಘನೆ ಮಾಡುವುದನ್ನು ಸೈನಿಕರು ನಿಲ್ಲಸಬೇಕು. ಮೊದಲಿನಂತೆ ಚೀನಾದ ಜೊತೆ ಕೆಲಸ ಮಾಡಿಕೊಂಡು ಮಾತುಕತೆಯ ಮೂಲಕ ಭಾರತ ಸಮಸ್ಯೆಯನ್ನು ಬಗಹರಿಸಿಕೊಳ್ಳಬೇಕು ಎಂದು ಚೀನಾ ಭಾರತಕ್ಕೆ ಉಪದೇಶ ಮಾಡಿದೆ.
Advertisement
We ask India to strictly discipline its frontline troops, stop infringing and provocative activity at once, work with China and come back to the right track of resolving the differences through dialogue & talk: Zhao Lijian, Chinese Foreign Ministry Spokesperson https://t.co/TaUqOvifiA pic.twitter.com/4ZXYCiqAH5
— ANI (@ANI) June 17, 2020
Advertisement
ನಾವು ರಾಜತಾಂತ್ರಿಕ ಮತ್ತು ಮಿಲಿಟರಿ ಮಾರ್ಗಗಳ ಮೂಲಕ ಭಾರತದ ಜೊತೆಗೆ ನಾವು ಸಂವಹನ ನಡೆಸುತ್ತಿದ್ದೇವೆ. ಇದರ ಸರಿ ಮತ್ತು ತಪ್ಪು ಬಹಳ ಸ್ಪಷ್ಟವಾಗಿದೆ. ಈ ಘಟನೆ ಚೀನಾದ ಎಲ್ಎಸಿಯ ಕಡೆಯಿಂದ ನಡೆದಿದ್ದು, ಇದಕ್ಕೆ ಚೀನಾ ಕಾರಣವಲ್ಲ. ಚೀನಾ ಇನ್ನೂ ಮುಂದೆ ಸಂಘರ್ಷವನ್ನು ಬಯಸುವುದಿಲ್ಲ. ಗಡಿ-ಸಂಬಂಧಿತ ವಿಚಾರದಲ್ಲಿ ನಮ್ಮ ಗಡಿ ನಿಯಮಾವಳಿಗಳನ್ನು ಮತ್ತು ನಮ್ಮ ಕಮಾಂಡರ್ ಮಟ್ಟದ ಮಾತುಕತೆಯ ಒಮ್ಮತವನ್ನು ಭಾರತೀಯ ಸೈನಿಕರು ಗಂಭೀರವಾಗಿ ಉಲ್ಲಂಘಿಸಿದ್ದಾರೆ ಎಂದು ಜೀವೋ ವಿತ್ತಂಡ ವಾದವನ್ನು ಮುಂದಿಟ್ಟಿದ್ದಾರೆ.
From the Chinese side, we do not wish to see more clashes: Zhao Lijian, Chinese Foreign Ministry Spokesperson on #GalwanValley clash pic.twitter.com/SEQWGUvg6W
— ANI (@ANI) June 17, 2020
ಗಾಲ್ವಾನ್ ಕಣಿವೆಯಲ್ಲಿ ಚೀನಾದೊಂದಿಗೆ ನಡೆದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಅಲ್ಲದೆ 17 ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿಗೆ ಪ್ರತ್ಯುತ್ತರ ನೀಡಿರುವ ಭಾರತೀಯ ಸೇನೆಯು ಚೀನಾದ 40ಕ್ಕೂ ಹೆಚ್ಚು ಮಂದಿ ಯೋಧರನ್ನು ಸೆದೆಬಡಿದಿದೆ. ಇದರಲ್ಲಿ 100ಕ್ಕೂ ಹೆಚ್ಚು ಚೀನಾ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ತನ್ನ ಯೋಧರ ಮೃತದೇಹವನ್ನು ಹೊತ್ತೊಯ್ಯಲು ಚೀನಾ ಹೆಲಿಕಾಪ್ಟರ್ ಗಳು ಎಲ್ಎಸಿ ಬಳಿ ಹಾರಾಟ ನಡೆಸಿವೆ ಎಂದು ವರದಿಯಾಗಿದೆ.