– ನಾನು ಗಾಂಜಾ ತೆಗೆದುಕೊಳ್ಳುತ್ತೇನೆ
ಬೆಂಗಳೂರು: ಗಾಂಜಾ ಡ್ರಗ್ ಅಲ್ಲ ಅದೊಂದು ಮೆಡಿಸಿನ್ ಎಂದು ಯುವನಟ ರಾಕೇಶ್ ಅಡಿಗ ಹೇಳಿದ್ದಾರೆ.
ಚಂದನವದಲ್ಲಿ ಡ್ರಗ್ಸ್ ಮಾಫಿಯಾದ ಬಗ್ಗೆ ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ರಾಕೇಶ್, ಗಾಂಜಾದ ಬಗ್ಗೆ ಎಲ್ಲರಿಗೂ ತಪ್ಪು ಕಲ್ಪನೆ ಇದೆ. ಅದನ್ನು ತೆಗೆದು ಹಾಕಬೇಕು. ಗಂಜಾ ಡ್ರಗ್ ಅಲ್ಲ. ಅದು ಮೆಡಿಸಿನ್ ಆಗಿದ್ದು ಅದನ್ನು ಕಾನೂನು ಬದ್ಧಮಾಡಿ ಎಂದು ತಿಳಿಸಿದ್ದಾರೆ.
Advertisement
Advertisement
ಡ್ರಗ್ ಎಂಬುದು ಇಡೀ ಪ್ರಪಂಚದಲ್ಲೇ ಇದೆ. ಈಗ ಸ್ಯಾಂಡಲ್ವುಡ್ನಲ್ಲಿ ಕೆಲವರನ್ನು ಗುರುತಿಸಿ ಅವರನ್ನು ಅಪರಾಧಿಗಳನ್ನಾಗಿ ಮಾಡಬೇಡಿ. ಅವರನ್ನು ಹೊರಗೆ ಇಡುವುದು ಬೇಡ. ಯಾರು ಅದನ್ನು ತೆಗೆದುಕೊಳ್ಳುತ್ತಿದ್ದಾರೆ ಎನ್ನುವುದಕ್ಕಿಂತ ಯಾರು ತಂದು ಮಾರುತ್ತಿದ್ದಾರೆ ಅವರನ್ನು ಹಿಡಿದುಕೊಳ್ಳಬೇಕು. ನಾನು ಒಬ್ಬ ಸಾಮಾನ್ಯ ಪ್ರಜೆಯಾಗಿ ಹೇಳುತ್ತಿದ್ದೇನೆ ಗಾಂಜಾವನ್ನು ಡ್ರಗ್ನಿಂದ ದೂರ ಇಡಬೇಕು. ಗಾಂಜಾ ಒಂದು ಗಿಡ, ಅದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ ಎಂದು ರಾಕೇಶ್ ಹೇಳಿದರು.
Advertisement
Advertisement
ಗಾಂಜಾ ತೆಗೆದುಕೊಂಡರೆ ಮಾತ್ರ ನಶೆಯಾಗುತ್ತದೆಯೇ, ಡ್ರಿಂಕ್ಸ್ ಮಾಡಿದರೆ ನಶೆ ಆಗುವುದಿಲ್ಲವೇ? ಗಾಂಜಾ ಬಗ್ಗೆ ಮೋದಿಯವರಿಗೂ ಬಹಿರಂಗ ಪತ್ರ ಬರೆಯಲಾಗಿದೆ. ಅಯಷ್ಮಾನ್ ಇಲಾಖೆಯವರು ಇದರ ಬಗ್ಗೆ ಸಂಶೋಧನೆ ಮಾಡುತ್ತಿದ್ದಾರೆ. ಈ ಹಿಂದೆ ಗಾಂಜಾ ಭಾರತೀಯ ಸಂಸ್ಕೃತಿಗೆ ಬೆರೆತು ಹೋಗಿತ್ತು. 1985ರಲ್ಲಿ ಇದು ಬ್ಯಾನ್ ಆಯ್ತು, ಹಾಗಾದರೆ 1985ರವರೆಗೆ ಭಾರತದಲ್ಲಿ ಎಲ್ಲರೂ ಡ್ರಗ್ ಅಡಿಕ್ಟ್ ಆಗಿದ್ರಾ ಎಂದು ರಾಕೇಶ್ ಪ್ರಶ್ನೆ ಮಾಡಿದ್ದಾರೆ.
ಮಿಡೀಯಾದಲ್ಲಿ ಡ್ರಿಂಕ್ಸ್ ಮಾಡಿ ಅಪರಾಧ ಮಾಡಿದರೆ, ಗಾಂಜಾ ಮತ್ತಿನಲ್ಲಿ ಮಾಡಿದ್ದಾರೆ ಎಂದು ತೋರಿಸುತ್ತಾರೆ. ಇದರ ಬಗ್ಗೆ ವಿಜ್ಞಾನಿಗಳು ಕೇಳಿ ಗಾಂಜಾದ ಉಪಯೋಗಗಳ ಬಗ್ಗೆ ಹೇಳುತ್ತಾರೆ. ನಾವು ಎಲ್ಲ ವಿಚಾರದಲ್ಲೂ ಅಮೆರಿಕವನ್ನು ಫಾಲೋ ಮಾಡುತ್ತೇವೆ. ಅವರು ಅಲ್ಲಿ ಇದನ್ನು ಕಾನೂನು ಬದ್ಧ ಮಾಡಿದ್ದಾರೆ. ಅವರಿಗೆ ಹೆಚ್ಚು ಆದಾಯ ಬರುತ್ತದೆ. ಗಾಂಜಾದಿಂದ ನಮ್ಮ ಆರ್ಥಿಕತೆ ಮತ್ತು ಮೆಡಿಸಿನ್ ವಿಭಾಗಕ್ಕೆ ಲಾಭವಿದೆ. ಮದ್ಯಕ್ಕಿಂತ ಗಾಂಜಾ ಒಳ್ಳೆಯದು ಎಂದು ರಾಕೇಶ್ ಅಭಿಪ್ರಾಯಪಟ್ಟರು.
ಜೊತೆಗೆ ನಾನೂ ಗಾಂಜಾವನ್ನು ತೆಗೆದುಕೊಳ್ಳುತ್ತಿದ್ದೆ. ಈಗಲೂ ಅದರಿಂದ ಮಾಡಿದ ಕೇಕ್, ಕುಕಿಗಳನ್ನು ಯಾರದರೂ ಮಾಡಿಕೊಟ್ಟರೆ ತಿನ್ನುತ್ತೇನೆ ಎಂದು ರಾಕೇಶ್ ಬಹಿರಂಗವಾಗಿ ಹೇಳಿಕೆ ನೀಡಿದರು.