ಬೀಜಿಂಗ್ : ಗಲ್ವಾನ್ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ನಮ್ಮ ಸೈನಿಕರು ಸಾವನ್ನಪ್ಪಿಲ್ಲ ಎಂದು ಸುಳ್ಳು ಹೇಳಿದ್ದ ಚೀನಾ ಈಗ ಮೊದಲ ಬಾರಿಗೆ ಸತ್ಯವನ್ನು ಒಪ್ಪಿಕೊಂಡಿದೆ. 5 ಮಂದಿ ಹುತಾತ್ಮರಾಗಿರುವುದಾಗಿ ಚೀನಾ ಈಗ ಅಧಿಕೃತವಾಗಿ ಒಪ್ಪಿಕೊಂಡಿದೆ.
Advertisement
Advertisement
Advertisement
ಓರ್ವ ಸೈನಿಕ ಮತ್ತು 4 ಮಂದಿ ಅಧಿಕಾರಿಗಳು ಮೃತಪಟ್ಟಿರುವುದುದಾಗಿ ಚೀನಾದ ಮಿಲಿಟರಿ ಪತ್ರಿಕೆ ಪಿಎಲ್ಎ ಡೈಲಿ ಪ್ರಕಟಿಸಿದೆ. ಜೂನ್ 15ರಂದು ನಡೆದ ಘರ್ಷಣೆಯಲ್ಲಿ 20 ಯೋಧರು ವೀರ ಮರಣ ಹೊಂದಿದ್ದಾರೆ ಎಂದು ತಿಳಿಸಿತ್ತು. ತನ್ನ ಹೇಳಿಕೆಯಲ್ಲಿ ಚೀನಾ ಕಡೆಯಲ್ಲೂ ಭಾರೀ ಸಾವು ನೋವು ಸಂಭವಿಸಿದೆ ಎಂದು ತಿಳಿಸಿತ್ತು.
Advertisement
ಚೀನಾ ಸರ್ಕಾರ ಇಲ್ಲಿಯವರೆಗೆ ಸಾವುನೋವುಗಳನ್ನು ಎಂದಿಗೂ ಒಪ್ಪಿಕೊಂಡಿರಲಿಲ್ಲ. ರಷ್ಯಾದ ಸುದ್ದಿ ಸಂಸ್ಥೆಯಾದ ಟಾಸ್ ಫೆಬ್ರವರಿಯಲ್ಲಿ ವರದಿಮಾಡಿ ಚೀನಾದ 45 ಸೈನಿಕರು ಹುತಾತ್ಮರಾಗಿದ್ದರು ಎಂದು ವರದಿಮಾಡಿತ್ತು.