– ಎಂಎಲ್ಎ ಹಾಸ್ಟೆಲ್ ಮುಂದೆ ಪಾರ್ಕ್ ಆಗಿದ್ದ ಕಾರ್
ಚಂಡೀಗಢ: ಕರ್ತವ್ಯ ನಿರತ ಪೊಲೀಸ್ ಪೇದೆಯೊಬ್ಬರ ಮೃತದೇಹ ಪಂಜಾಬ್ ಎಂಎಲ್ಎ ಒಬ್ಬರ ಹಾಸ್ಟೆಲ್ ಮುಂದೆ ಪಾರ್ಕ್ ಮಾಡಲಾದ ಕಾರಿನೊಳಗೆ ಸಿಕ್ಕಿರುವ ಘಟನೆ ಚಂಡೀಗಢದಲ್ಲಿ ನಡೆದಿದೆ.
ಮೃತ ಪೊಲೀಸ್ ಪೇದೆಯನ್ನು ಪಂಜಾಬ್ ಪೊಲೀಸರ 82 ಬೆಟಾಲಿಯನ್ನೊಂದಿಗೆ ನಿಯೋಜಿಸಲಾಗಿತ್ತು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿ ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಇವರು ತಮ್ಮ ಕಾರಿನಲ್ಲೇ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕಾರಿನೊಳಗೆ ಅವರ ಸರ್ವಿಸ್ ಪಿಸ್ತೂಲ್ ಪತ್ತೆಯಾಗಿದೆ.
Advertisement
Advertisement
ಪ್ರತಿ ದಿನ ಡೂಟ್ಯಿ ಮಗಿಸಿಕೊಂಡು ಪೇದೆ ಅವರ ಕಾರಿನಲ್ಲಿ ಮನೆಗೆ ಬರುತ್ತಿದ್ದರು. ಆದರೆ ಶನಿವಾರ ಮಧ್ಯರಾತ್ರಿಯಾದರೂ ಮನೆಗೆ ಬಂದಿಲ್ಲ. ಆಗ ಅವರ ಜೊತೆ ಆತನ ಮನೆಯಲ್ಲಿ ವಾಸವಾಗಿದ್ದ ಸಹೋದ್ಯೋಗಿಯೊಬ್ಬರು ಹುಡುಕಿಕೊಂಡು ಹೋಗಿದ್ದಾರೆ. ಆಗ ಅವರ ಕಾರು ಹಾಸ್ಟೆಲ್ ಮುಂದೆ ಪಾರ್ಕ್ ಆಗಿರುವುದು ಕಂಡು ಬಂದಿದೆ. ಅಲ್ಲಿ ಹೋಗಿ ನೋಡಿದಾಗ ಅವರು ಕಾರಿನೊಳಗೆ ಡ್ರೈವರ್ ಸೀಟಿನಲ್ಲಿ ರಕ್ತದ ಮಡುವಿನಲ್ಲಿ ಪೇದೆ ಬಿದ್ದಿರುವುದು ಕಂಡು ಬಂದಿದೆ. ಇದನ್ನು ಕಂಡು ಆತ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
Advertisement
Advertisement
ಮೃತನನ್ನು ಚಂಡೀಗಢದ ಪಿಜಿಐಎಂಆರ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿ ವೈದ್ಯರು ಮೃತಪಟ್ಟಿರುವುದನ್ನು ಖಚಿತ ಪಡಿಸಿದ್ದಾರೆ. ಈಗ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ಮಾಡುತ್ತಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಪೊಲೀಸ್ ಅಧಿಕಾರಿ, ಶೇರ್ ಸಿಂಗ್, ಪ್ರಾಥಮಿಕ ತನಿಖೆಯಲ್ಲಿ ಇದು ಆತ್ಮಹತ್ಯೆ ಎಂದು ತಿಳಿದು ಬಂದಿದೆ. ಗಲ್ಲದ ಮೂಲಕ ಹೊಡೆದುಕೊಂಡಿರುವುದರಿಂದ ನಾವು ಎಲ್ಲ ವಿಭಾಗದಿಂದ ತನಿಖೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.