ಬೆಂಗಳೂರು: ಮಂಗಳವಾರ ರಾತ್ರಿ ಕೆಜಿ ಹಳ್ಳಿಯಲ್ಲಿ ಗಲಭೆ ಮಾಡಿದ್ದ ದುಷ್ಕರ್ಮಿಗಳು ಊರು ಬಿಟ್ಟು ಪರಾರಿಯಾಗಿದ್ದಾರೆ. ಇದನ್ನೂ ಓದಿ: ದುಷ್ಕರ್ಮಿಗಳ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆ – ಭಯದಿಂದ ಬಾತ್ರೂಮಿನಲ್ಲಿ 3 ಗಂಟೆ ಬಚ್ಚಿಟ್ಟುಕೊಂಡಿದ್ದ ಕುಟುಂಬ
Advertisement
ಕೆಜಿ ಹಳ್ಳಿ, ಡಿಜೆ ಪೊಲೀಸ್ ಠಾಣೆಗೆ ಬೆಂಕಿ ಹಾಕಿ, ಧ್ವಂಸ ಮಾಡಿದ್ದ ಉದ್ರಿಕ್ತರು ಕಾಲ್ಕಿತ್ತಿದ್ದಾರೆ. ದುಷ್ಕರ್ಮಿಗಳು ಮಂಗಳವಾರ ರಾತ್ರಿ ಗಲಭೆ ಮಾಡಿದ ನಂತರ ರಾತ್ರೋ ರಾತ್ರಿ ಊರು ಬಿಟ್ಟಿದ್ದಾರೆ. ಸದ್ಯಕ್ಕೆ 170 ಮಂದಿ ಗಲಭೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಪೊಲೀಸರು ಗೋಲಿಬಾರ್ಗೆ ಮೂವರು ಬಲಿಯಾಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಶಾಸಕರ ಮನೆ ಧ್ವಂಸ- ಘಟನೆ ಖಂಡಿಸದೆ ಮೌನ ತಾಳಿದ ಕೈ ನಾಯಕರು
Advertisement
DJ Halli Police Station in Bengaluru vandalised last night, as violence broke out in the city over an alleged inciting social media post.
Sec 144 CrPC imposed in Bangaluru city,curfew in DJ Halli & KG Halli police station limits. 2 died, 110 arrested, 60 Police personnel injured pic.twitter.com/CO1ZdIzLbx
— ANI (@ANI) August 12, 2020
Advertisement
ಈ ಗಲಭೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ. ಆದರೆ ದುಷ್ಕರ್ಮಿಗಳು ಡಿಜಿ ಹಳ್ಳಿ, ಕೆಜಿ ಹಳ್ಳಿ ಮತ್ತು ಟ್ಯಾನರಿ ರೋಡ್ ತೊರೆದಿದ್ದಾರೆ. ಹೀಗಾಗಿ ಪೊಲೀಸರು ದುಷ್ಕರ್ಮಿಗಳ ಪತ್ತೆಗಾಗಿ ಹುಡುಕಾಟ ಮಾಡುತ್ತಿದ್ದಾರೆ.
Advertisement
Karnataka: DJ Halli Police Station in Bengaluru city vandalised last night, as violence broke out over an alleged inciting social media post.
Sec 144 imposed in city, curfew in DJ Halli & KG Halli police station limits. At least 2 dead, 110 arrested, 60 Police personnel injured. pic.twitter.com/FVgUIanWgd
— ANI (@ANI) August 12, 2020
ರಾತ್ರಿ ಕಿಡಿಕೇಡಿಗಳು ಎಟಿಎಂ ಧ್ವಂಸ ಮಾಡಿದ್ದಾರೆ. ಕಾವಲ್ ಬೈರಸಂದ್ರದಲ್ಲಿದ್ದ ಹೆಚ್ಡಿಎಫ್ಸಿ ಮತ್ತು ಕರ್ನಾಟಕ ಬ್ಯಾಂಕ್ ಎರಡು ಎಟಿಎಂ ಅನ್ನು ಸಂಪೂರ್ಣವಾಗಿ ಧ್ವಂಸ ಮಾಡಿದ್ದಾರೆ.