ಲಕ್ನೋ: ಗರ್ಭಪಾತ ಮಾಡಿಸಿಕೊಳ್ಳುವಂತೆ ಕಿರುಕುಳ ನೀಡಿದ ವೈದ್ಯ ಪತಿ ವಿರುದ್ಧ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಪತ್ನಿ ಪ್ರಕರಣ ದಾಖಲಿಸಿದ್ದಾಳೆ
ಗರ್ಭದಲ್ಲಿರುವುದು ಮಗು ಹೆಣ್ಣು ಎಂದು ತಿಳಿದ ನನ್ನ ವೈದ್ಯಪತಿ ಗರ್ಭಪಾತ ಮಾಡಿಸಿಕೊಳ್ಳುವುದಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಪತಿ ವಿರುದ್ಧ ಪತ್ನಿಯೇ ಪೊಲೀಸರಿಗೆ ದೂರು ನೀಡಿದ್ದಾಳೆ.
Advertisement
Advertisement
ಮಹಿಳೆಯು ನೋಯ್ಡಾ ನಿವಾಸಿಯಾಗಿದ್ದು, ಮೀರತ್ ಮೂಲದ ವೈದ್ಯನನ್ನು 2019ರಲ್ಲಿ ವಿವಾಹವಾಗಿದ್ದಾಳೆ. ಇದೀಗ ತನ್ನ ಪತಿ ನಾರಂಗ್ಪುರ ಗ್ರಾಮದ ಪರೀಕ್ಷಿತ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದ್ದಾಳೆ.
Advertisement
ಮಹಿಳೆ ತನ್ನ ಪತಿ ಕೌಟುಂಬಿಕ ಹಿಂಸೆ ನೀಡುತ್ತಿರುವುದಾಗಿ ಹಾಗೂ ಮದುವೆಗೂ ಮುನ್ನ ತನಗೆ ಈಗಾಗಲೇ ವಿವಾಹವಾಗಿದೆ ಎಂಬಂತೆ ಹಲವು ರೀತಿಯ ಸುಳ್ಳನ್ನು ಹೇಳಿದ್ದಾನೆ. ಜೊತೆಗೆ ಹಲವು ಬಾರಿ ನನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾಳೆ.
Advertisement
ತನ್ನ ಪತಿ ಬಲವಂತವಾಗಿ ತನ್ನನ್ನು ಭ್ರೂಣ ಲಿಂಗ ಪರೀಕ್ಷೆ ಮಾಡಿಸಿಲು ಕರೆದುಕೊಂಡು ಹೋಗಿದ್ದರು. ಈ ವೇಳೆ ಹೊಟ್ಟೆಯಲ್ಲಿ ಹೆಣ್ಣು ಮಗು ಇದೆ ಎಂದು ತಿಳಿದ ಬಳಿಕ ನನಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಡ ಹೇರುತ್ತಿದ್ದಾಳೆ ಎಂದು ದೂರಿನಲ್ಲಿ ಆರೋಪ ಮಹಿಳೆ ಆರೋಪ ಮಾಡಿದ್ದಾಳೆ.