ಬೆಂಗಳೂರು: ವಿಭಿನ್ನವಾದ ಸಿನಿಮಾ ನಿರ್ದೇಶನದ ಮೂಲಕವಾಗಿ ಗುರುತಿಸಿಕೊಂಡ ಎ,ಪಿ ಅರ್ಜುನ್ ತಂದೆಯಾಗಿರುವ ಖುಷಿಯಲ್ಲಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಸ್ಯಾಂಡಲ್ವುಡ್ ನಿರ್ದೇಶಕ ಎ.ಪಿ. ಅರ್ಜುನ್ ಹಾಗೂ ಅನ್ನಪೂರ್ಣ ದಂಪತಿಗೆ ಗಂಡು ಮಗುವಾಗಿದೆ. ಈ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Hello everyone ???? I’m happy to share d happiest news of my life with u all… we are blessed with a Baby boy this noon, by the grace of God Baby n Mother both r fine, thank you so much for all the love, blessings n prayers ????love you all ❤️Arjun n Anu???? #gratitude ????#ಜೈಆಂಜನೇಯ ???? pic.twitter.com/v4QKQVf5pW
— AP Arjun (@AP_Arjun_film) May 7, 2021
- Advertisement 2
ನಗುತ್ತಿರುವ ಕಣ್ಣುಗಳಿಂದ ನಗುತ್ತಿರುವ ಮುಖ ನಿಮ್ಮೆಲ್ಲರೊಡನೆ ನನ್ನ ಜೀವನದ ಸಂತೋಷದಾಯಕ ಸುದ್ದಿಗಳನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ನಿನ್ನೆ ಮದ್ಯಾಹ್ನ ಗಂಡು ಮಗುವಾಗಿದ್ದು, ದೇವರ ಕೃಪೆಯಿಂದ ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಅರ್ಜುನ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
- Advertisement 3
View this post on Instagram
- Advertisement 4
ಕಳೆದ ವರ್ಷ ಲಾಕ್ಡೌನ್ ಆದಾಗ ಈ ಜೋಡಿ ವಿವಾಹವಾಗಿತ್ತು. ಕಳೆದ ವರ್ಷದ ಮೇ 10ರಂದು ಕುಟುಂಬದ ಆಪ್ತರು ಹಾಗೂ ಕೆಲವೇ ಸ್ನೇಹಿತರ ಸಮ್ಮುಖದಲ್ಲಿ ತಮ್ಮ ದೀರ್ಘಕಾಲದ ಪ್ರೇಮಿ ಅನ್ನಪೂರ್ಣಾ ಅವರನ್ನು ವಿವಾಹವಾಗಿದ್ದರು. ಇತ್ತೀಚೆಗಷ್ಟೆ ಮಡದಿಯ ಸೀಮಂತ ಸಮಾರಂಭವನ್ನು ಸರಳವಾಗಿ ಮನೆಯಲ್ಲಿ ಸೆಲೆಬ್ರೆಟ್ ಮಾಡಿದ್ದರು. ಇದೀಗ ಈ ಮುದ್ದಾದ ಜೋಡಿಗೆ ಗಂಡು ಮಗುವಾಗಿದೆ.