ಮುಂಬೈ: ಟೀ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಬಿಗ್ ಬಾಸ್ನ ಮಾಜಿ ಸ್ಪರ್ಧಿ ಹಾಗೂ ಡಾನ್ಸರ್ ನತಾಶಾ ಸ್ಟಾಂಕೋವಿಕ್ ದಂಪತಿಗೆ ಗಂಡು ಮಗುವಿನ ಜನನವಾಗಿದೆ.
ತಾನು ಗಂಡು ಮಗುವಿನ ತಂದೆಯಾದ ಖುಷಿಯನ್ನು ಪಾಂಡ್ಯ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ನಮಗೆ ಗಂಡು ಮಗುವಿನ ಆಗಮನವಾಗಿದೆ ಎಂದು ಬರೆದುಕೊಂಡಿದ್ದಾರೆ. ಪಾಂಡ್ಯ ತನ್ನ ಮಗುವಿನ ಕೈ ಹಿಡಿದುಕೊಂಡಿದ್ದು, ಪುತ್ರನ ಮುಖ ಕಾಣದಂತೆ ಫೋಟೋ ತೆಗೆಯಲಾಗಿದೆ.
Advertisement
https://www.instagram.com/p/CDQx8yCF-SX/?utm_source=ig_embed
Advertisement
ಈ ಹಿಂದೆ ಕೊರೊನಾ ಲಾಕ್ಡೌನ್ ಸಮಯದಲ್ಲಿ ನತಾಶಾರೊಂದಿಗೆ ಪಾಂಡ್ಯ ಸಮಯ ಕಳೆಯುತ್ತಿದ್ದರು. ನತಾಶಾ ಗರ್ಭಿಣಿ ಫೋಟೋಶೂಟ್ ಮಾಡಿಸಿಕೊಂಡಿದ್ದು, ಆಗಾಗ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ನತಾಶಾ ಅವರು ವ್ಯಾಯಾಮ ಮಾಡುತ್ತಿರುವ ಫೋಟೋಗಳನ್ನು ಕೂಡ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು. ಹೀಗೆ ಇಬ್ಬರು ಸಂತೋಷದಿಂದ ಕಾಲಕಳೆಯುತ್ತಿದ್ದರು.
Advertisement
https://www.instagram.com/p/CCyd9UFA3I9/?utm_source=ig_embed
Advertisement
ಮೇ 31 ರಂದು ಸೋಶಿಯಲ್ ಮೀಡಿಯಾದ ಮೂಲಕ ಹಾರ್ದಿಕ್ ಪಾಂಡ್ಯ ತಾವು ತಂದೆಯಾಗುತ್ತಿರುವ ಬಗ್ಗೆ ರಿವೀಲ್ ಮಾಡಿದ್ದರು. ಈ ಕುರಿತು ಇನ್ಸ್ಟಾದಲ್ಲಿ ಗೆಳತಿ ನತಾಶಾರೊಂದಿಗೆ ಇರುವ ಫೋಟೋವನ್ನು ಪೋಸ್ಟ್ ಮಾಡಿದ್ದ ಪಾಂಡ್ಯ, “ನತಾಶಾ ಮತ್ತು ನಾನು ಒಟ್ಟಿಗೆ ಉತ್ತಮ ಪ್ರಯಾಣವನ್ನು ಹೊಂದಿದ್ದೇವೆ. ಈ ಬಾಂಧವ್ಯ ಮತ್ತಷ್ಟು ಉತ್ತಮಗೊಳ್ಳುವತ್ತ ಹೊರಟಿದ್ದು, ಶೀಘ್ರವೇ ನಮ್ಮ ಜೀವನಕ್ಕೆ ಹೊಸ ಜೀವವನ್ನು ಸ್ವಾಗತಿಸಲು ಉತ್ಸುಕರಾಗಿದ್ದೇವೆ. ನಮ್ಮ ಜೀವನದ ಈ ಹೊಸ ಹಂತಕ್ಕಾಗಿ ರೋಮಾಂಚನಗೊಂಡಿದ್ದು, ನಿಮ್ಮ ಆಶೀರ್ವಾದ ಮತ್ತು ಶುಭಾಶಯಗಳನ್ನು ಕೋರುತ್ತೇವೆ” ಎಂದು ಬರೆದುಕೊಂಡಿದ್ದರು.
https://www.instagram.com/p/CCu87_blItL/?utm_source=ig_embed
ಬಹು ಸಮಯದಿಂದ ಒಟ್ಟಿಗೆ ಓಡಾಡುತ್ತಿದ್ದ ಹಾರ್ದಿಕ್ ಪಾಂಡ್ಯ ಹಾಗೂ ಸರ್ಬಿಯನ್ ಮಾಡೆಲ್, ನಟಿ ನತಾಶಾ ಸ್ಟಾಂಕೋವಿಕ್ ಹೊಸ ವರ್ಷದ ಮೊದಲ ದಿನ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಕುರಿತ ವಿಡಿಯೋ ಹಾಗೂ ಫೋಟೋವನ್ನು ಹಂಚಿಕೊಂಡು ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದರು.