ಮುಂಬೈ: ಬಾಲಿವುಡ್ ನಟಿ ದಿಯಾ ಮಿರ್ಜಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಟೋದೊಂದಿಗೆ ಬರೆದುಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ಸಂತಸ ಹಂಚಿಕೊಂಡಿದ್ದಾರೆ.
Advertisement
ಬಾಲಿವುಡ್ ನಟಿ ದಿಯಾ ಮಿರ್ಜಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿ, ಬರೆದುಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ಸಂತಸ ಹಂಚಿಕೊಂಡಿದ್ದಾರೆ.
Advertisement
ಹೌದು, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮಗನ ಕೈ ಹಿಡಿದುಕೊಂಡಿರುವ ಫೋಟೋ ಶೇರ್ ಮಾಡಿಕೊಂಡ ನಟಿ, ನಮ್ಮ ಹೃದಯದ ಬಡಿತ.. ನಮ್ಮ ಪುತ್ರ ಅವ್ಯಾನ್ ಆಜಾದ್ ರೇಖಿ ಹುಟ್ಟಿದ್ದು ಮೇ 14ರಂದು. ಅವಧಿಗೂ ಮುನ್ನವೇ ಜನಿಸಿದ ಮಗುವನ್ನು ನಿಯೋನೇಟಲ್ ಐಸಿಯುನಲ್ಲಿ ನರ್ಸ್ಗಳು ಹಾಗೂ ವೈದ್ಯರು ಜಾಗ್ರತೆಯಿಂದ ನೋಡಿಕೊಳ್ಳುತ್ತಿದ್ದಾರೆ. ಗರ್ಭಾವಸ್ಥೆಯಲ್ಲಿ ಹಠಾತ್ತಾಗಿ ಮಾಡಲಾದ ಅಪೆನ್ಡೆಕ್ಟೊಮಿ ಮತ್ತು ಅದರಿಂದ ಉಂಟಾದ ತೀವ್ರ ಬ್ಯಾಕ್ಟೀರಿಯಲ್ ಇನ್ಫೆಕ್ಷನ್ನಿಂದ ಜೀವಕ್ಕೆ ಅಪಾಯವಿತ್ತು. ಅದೃಷ್ಟವಶಾತ್, ವೈದ್ಯರ ಸಮಯೋಚಿತ ಆರೈಕೆಯಿಂದ ಹಾಗೂ ಎಮರ್ಜೆನ್ಸಿ ಸಿ-ಸೆಕ್ಷನ್ ಮುಖಾಂತರ ನನಗೆ ಹೆರಿಗೆ ಮಾಡಲಾಯಿತು ಎಂದು ತಿಳಿಸಿದ್ದಾರೆ. ಅಲ್ಲದೆ ಇಲ್ಲಿಯವರೆಗೆ ತಮ್ಮನ್ನು ಕೇರ್ ಮಾಡಿದ ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇದನ್ನೂ ಓದಿ: ವಿಚ್ಛೇದನದ ಬಳಿಕ ಜೀವನ ಹೇಗಿರುತ್ತೆ ಎಂಬುದರ ಅರಿವು ನನಗಿತ್ತು: ದಿಯಾ ಮಿರ್ಜಾ
Advertisement
???????????????? pic.twitter.com/iL6ioUGc15
— Dia Mirza (@deespeak) July 14, 2021
Advertisement
ಇದೇ ವರ್ಷ ಫೆಬ್ರವರಿ 15ರಂದು ದಿಯಾ ಮಿರ್ಜಾ ವೈಭವ್ ರೇಖಿಯನ್ನು ಮದುವೆಯಾಗಿದ್ದರು. ಕೇವಲ ಆಪ್ತರು ಹಾಗೂ ಕುಟುಂಬದ ಸದಸ್ಯರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಮದುವೆ ಮುಗಿಸುತ್ತಿದ್ದಂತೆಯೇ ದಿಯಾ ಮಿರ್ಜಾ ತಮ್ಮ ಪತಿ ಜೊತೆ ಮಾಲ್ಡೀವ್ಸ್ ಗೆ ಹನಿಮೂನ್ಗೆ ತೆರಳಿದ್ದರು. ನಂತರ ತಾವು ಗರ್ಭಿಣಿ ಎಂಬುದನ್ನು ಸಾಮಾಜಿಕ ಜಾಲತಾಣಗಳ ಮೂಲಕ ರಿವೀಲ್ ಮಾಡಿದ್ದರು.
ದಿಯಾ ಮಿರ್ಜಾಗೆ ಇದು ಎರಡನೇ ಮದುವೆಯಾಗಿದ್ದು, ಈ ಹಿಂದೆ ಅವರು 2014ರಲ್ಲಿ ಉದ್ಯಮಿ ಸಾಹುಲ್ ಸಂಘ ಅವರನ್ನು ಮದುವೆಯಾಗಿದ್ದರು. ಆದರೆ ಐದೇ ವರ್ಷದಲ್ಲಿ ಈ ಮದುವೆ ಮುರಿದು ಬಿದ್ದು 2019ರಲ್ಲಿ ಡೈವೋರ್ಸ್ನಲ್ಲಿ ಪರ್ಯಾವಸಾನಗೊಂಡಿತ್ತು. ಈ ಮೂಲಕ 11 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿ 37ನೇ ವಯಸ್ಸಿನಲ್ಲಿ ವಿಚ್ಛೇದನ ನೀಡಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೀಡಾಗಿತ್ತು.
ಇದಾದ ಬಳಿಕ ದಿಯಾ ಮುಂಬೈ ಮೂಲದ ಉದ್ಯಮಿ, ಹಣಕಾಸು ಹೂಡಿಕೆದಾರ ಹಾಗೂ ಪಿರಮಲ್ ಫಂಡ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ವೈಭವ್ ರೇಖಿ ಜೊತೆ ಡೇಟಿಂಗ್ ಶುರು ಮಾಡ್ಕೊಂಡಿದ್ದರು. ಇದೇ ಫೆಬ್ರವರಿಯಲ್ಲಿ ಮದುವೆಯಾಗಿ ಹೊಸ ಜೀವನ ಆರಂಭಿಸಿದ್ದರು. ಇತ್ತ ವೈಭವ್ ರೇಖಿಗೂ ಇದು ಎರಡನೇ ಮದುವೆಯಾಗಿದ್ದು, ಮೊದಲ ಪತ್ನಿಗೆ ಮಗಳಿದ್ದಾಳೆ.
View this post on Instagram