ಬೆಂಗಳೂರು: ಬಹುಭಾಷಾ ನಟಿ ನಿತ್ಯಾ ಮೆನನ್ ಲಾಕ್ಡೌನ್ ದಿನಗಳನ್ನು ಫೋಟೋ ಶೂಟ್ ಮೂಲಕ ಕಳೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಫೋಟೋ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಅಪ್ಡೇಟ್ ನೀಡುತ್ತಿದ್ದಾರೆ. ಇದೀಗ ಅವರ ಇನ್ಸ್ಟಾಗ್ರಾಮ್ ಪೋಸ್ಟ್ ವೈರಲ್ ಆಗಿದೆ.
Advertisement
ಬಹುಭಾಷಾ ನಟಿ ನಿತ್ಯಾ ಮೆನನ್ ಸ್ಯಾಂಡಲ್ವುಡ್ನಲ್ಲಿ ನಟಿಸಿದ್ದು ಕೆಲವೇ ಚಿತ್ರಗಳಾದರೂ ಕನ್ನಡವನ್ನು ಲೀಲಾಜಾಲವಾಗಿ ಮಾತನಾಡುತ್ತಾರೆ. ಕೇರಳ ಮೂಲದವರಾದರೂ ಕನ್ನಡದ ನಟಿಯರನ್ನೇ ನಾಚಿಸುವಂತೆ ಮಾತನಾಡುತ್ತಾರೆ, ಹಾಡು ಹೇಳುತ್ತಾರೆ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿರುವ ನಿತ್ಯಾ ಮೆನನ್, ಓದಿದ್ದೂ ಸಹ ಬೆಂಗಳೂರಿನಲ್ಲಿಯೇ. ಹೀಗಾಗಿ ಬೆಂಗಳೂರು, ಕರ್ನಾಟಕ ಎಂದರೆ ಅವರಿಗೆ ಹೆಚ್ಚು ಪ್ರೀತಿಯಂತೆ. ಶೂಟಿಂಗ್ಗೆ ಎಲ್ಲಿಗೇ ತೆರಳಿದರೂ, ಕೆಲಸ ಮುಗಿದ ಮೇಲೆ ಬೆಂಗಳೂರಿಗೇ ಬರುತ್ತಾರಂತೆ. ಸಿಲಿಕಾನ್ ಸಿಟಿಯನ್ನು ಅಷ್ಟು ಇಷ್ಟಪಡ್ತಾರಂತೆ.
Advertisement
Advertisement
ಕನ್ನಡ ಸೇರಿದಂತೆ, ಬಾಲಿವುಡ್, ಟಾಲಿವುಡ್ ಹಾಗೂ ಮಲಯಾಳಂ, ತಮಿಳು ಚಿತ್ರರಂಗದಲ್ಲಿ ಕೋಟಿಗೊಬ್ಬ-2 ಬೆಡಗಿ ಪ್ರಸಿದ್ಧಿ ಪಡೆದಿದ್ದಾರೆ. ಲಾಕ್ಡೌನ್ ಹಿನ್ನೆಲೆ ಸದ್ಯ ಬೆಂಗಳೂರಿನ ತಮ್ಮ ಮನೆಯಲ್ಲೇ ಕಾಲ ಕಳೆಯುತ್ತಿರುವ ನಿತ್ಯಾ ಫೋಟೋ ಶೂಟ್ ಮಾಡಿದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ತಮ್ಮ ಅಭಿಮಾನಿಗಳಿಗೆ ಕೆಲವು ಸಲಹೆಯನ್ನೂ ನೀಡುತ್ತಿದ್ದಾರೆ.
Advertisement
ಮೂರು ಪೋಸ್ಟ್ ಗಳನ್ನು ಮಾಡಿದ್ದು, ಮೊದಲ ಪೋಸ್ಟ್ನಲ್ಲಿ ತಮ್ಮ ಬಟ್ಟೆ ಹಾಗೂ ಹೇರ್ ಸ್ಟೈಲ್ ಕುರಿತು ಹೇಳಿದ್ದಾರೆ. ಬಿಳಿ ಡ್ರೆಸ್ ಮೇಲೆ ಕಪ್ಪು ಚುಕ್ಕೆಗಳಿರುವುದರಿಂದ ಪೋಲ್ಕಾ ಡಾಟ್ಸ್ ಎಂದೂ ಕರ್ಲಿ ಹೇರ್ ಸ್ಟೈಲ್ ಇರುವುದರಿಂದ ಕಲ್ರ್ಸ್ ಎಂದು ಬರೆದಿದ್ದಾರೆ. ಇನ್ನೊಂದು ಪೋಸ್ಟ್ನಲ್ಲಿ ಪ್ರಾಧ್ಯಾಪಕಿ ಬ್ರೆನೆ ಬ್ರೌನ್ ಅವರ ಸಾಲುಗಳನ್ನು ಬರೆದಿದ್ದು, ನಮ್ಮದೇ ಕಥೆಯನ್ನು ಹೊಂದುವುದು, ಆ ಮೂಲಕ ನಮ್ಮ ತನವನ್ನು ಪ್ರೀತಿಸುವುದು ನಾವು ಮಾಡುವ ಧೈರ್ಯಶಾಲಿ ಕೆಲಸವಾಗಿದೆ ಎಂದು ಹೇಳಿದ್ದಾರೆ.
ಕೊನೆಯ ಪೋಸ್ಟ್ನಲ್ಲಿ ಅದ್ಭುತ ಸಾಲುಗಳನ್ನು ಬರೆದಿದ್ದು, ಖಾಲಿ ಕಪ್ನಿಂದ ನೀವು ಏನನ್ನೂ ಸುರಿಯಲು ಸಾಧ್ಯವಿಲ್ಲ. ಮೊದಲು ನಿಮ್ಮ ಬಗ್ಗೆ ಕಾಳಜಿ ವಹಿಸಿ ಎಂದು ಬರೆದಿದ್ದಾರೆ. ಅಂದರೆ ನಿಮ್ಮ ಬಳಿ ಇದ್ದು, ಸಾಮಥ್ರ್ಯವಿದ್ದರೆ ಮಾತ್ರ ಬೇರೆಯವರಿಗೆ ನೀಡಲು ಸಾಧ್ಯ ಎಂದಿದ್ದಾರೆ. ಹಲವರು ಇದಕ್ಕೆ ಕಮೆಂಟ್ ಮಾಡಿ ಟ್ರ್ಯೂ ವರ್ಡ್ಸ್ ಎಂದು ತಿಳಿಸಿದ್ದಾರೆ. ನಿರೂಪಕಿ ಅನುಶ್ರೀ ಸಹ ಕಮೆಂಟ್ ಮಾಡಿದ್ದು, ಕ್ಲಾಸಿಕ್ ಬ್ಯೂಟಿ ಎಂದು ಹೇಳಿದ್ದಾರೆ.
ನಿತ್ಯಾ ಮೆನನ್ ಅವರಿಗೆ ಬೆಂಗಳೂರು ಎಂದರೆ ತುಂಬಾ ಇಷ್ಟವಂತೆ. ಹೀಗಾಗಿ ಸಿಲಿಕಾನ್ ಸಿಟಿಯಲ್ಲೇ ಕಾಲ ಕಳೆಯುತ್ತಿದ್ದು, ಈ ಹಿಂದಿನ ಪೋಸ್ಟ್ನಲ್ಲಿ ಈ ಕುರಿತು ಹೇಳಿದ್ದಾರೆ. ರೇನಿ ಡೇಸ್, ಕೂಲ್ ನೈಟ್ಸ್ ಏಲಕ್ಕಿ ಚಹಾ ಇದೇ ಪ್ರಸ್ತುತ ಇದೇ ನನ್ನ ಬೆಂಗಳೂರು ಎಂದು ಚಹಾ ಕುಡಿಯುತ್ತಿರುವ ಫೋಟೋ ಪೋಸ್ಟ್ ಮಾಡಿದ್ದರು.