– ವಿಡಿಯೋ ಮೂಲಕ ಯುವತಿಗೆ ಬೆದರಿಕೆ
ಭೋಪಾಲ್: ಕ್ವಾರಂಟೈನ್ ಕೇಂದ್ರದಲ್ಲಿ ಯುವತಿಯ ಅಶ್ಲೀಲ ವಿಡಿಯೋವನ್ನು ಚಿತ್ರೀಕರಿಸಿದ ಆರೋಪದಲ್ಲಿ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿರುವ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿಗಳಿಬ್ಬರು 20 ವರ್ಷದ ಯುವಕರಾಗಿದ್ದಾರೆ. ವಿಡಿಯೋ ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ 22 ವರ್ಷದ ಯುವತಿಗೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಯುವತಿ ದಾಮೋಹ್ ಜಿಲ್ಲೆಯ ನಿವಾಸಿಯಾಗಿದ್ದು, ಇಂದೋರ್ ನಿಂದ ವಾಪಸ್ ತನ್ನ ಗ್ರಾಮಕ್ಕೆ ಬಂದಿದ್ದಳು. ಹೀಗಾಗಿ ಆಕೆಯನ್ನು ಸಾಗರ್ ಜಿಲ್ಲೆಯ ಕುಮಾರ್ ಭಟೋಲಿ ಗ್ರಾಮದಲ್ಲಿರುವ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು ಎಂದು ಪೊಲೀಸ್ ಅಧಿಕಾರಿ ರಾಜೇಶ್ ಬಂಜಾರ ತಿಳಿಸಿದ್ದಾರೆ.
Advertisement
ಕಳೆದ ವಾರ ಕ್ವಾರಂಟೈನ್ ಕೇಂದ್ರದ ಹೊರಗೆ ತಾತ್ಕಾಲಿಕ ಸ್ನಾನಗೃಹದಲ್ಲಿ ಯುವತಿ ಸ್ನಾನ ಮಾಡುತ್ತಿದ್ದಳು. ಈ ವೇಳೆ ಆರೋಪಿಗಳಿಬ್ಬರು ತಮ್ಮ ಮೊಬೈಲಿನಲ್ಲಿ ಯುವತಿಯ ಸ್ನಾನದ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ನಂತರ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಯುವತಿಗೆ ಬೆದರಿಕೆ ಹಾಕಿದ್ದಾರೆ.
Advertisement
ಯುವತಿ ತಕ್ಷಣ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾಳೆ. ಯುವತಿ ನೀಡಿದ ದೂರಿನ ಅನ್ವಯ ಪೊಲೀಸರು ಆರೋಪಿಗಳಿಬ್ಬರ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.