ಬಾಗಲಕೋಟೆ: ಕೆಸರಿನಲ್ಲಿಯೇ ಕಮಲದ ಹೂ ಅರಳುವಂತೆ ಕ್ವಾರಂಟೈನ್ ಕೇಂದ್ರದಲ್ಲಿ ಇದ್ದರೂ ಜಿಲ್ಲೆಯ ಶಿಲ್ಪಕಲಾವಿದರೊಬ್ಬರು ತಮ್ಮ ಕೈ ಚಳಕದಿಂದ ಗಣೇಶನ ಮೂರ್ತಿ ಕೆತ್ತನೆ ಮಾಡಿ ಗಮನ ಸಳೆದಿದ್ದಾರೆ.
ಮುಧೋಳ ತಾಲೂಕಿನ ಲೋಕಾಪುರದ ಮಲ್ಲಪ್ಪ ಬಡಿಗೇರ ಅವರ ಕುಟುಂಬಸ್ಥರು ಕೊರೊನಾ ಭೀತಿ ಹಿನ್ನೆಲೆ ಮಹಾರಾಷ್ಟ್ರದಿಂದ ಊರಿಗೆ ವಾಪಸ್ ಆಗಿದ್ದರು. ಆದರೆ ಅವರನ್ನು ಲೋಕಾಪುರದ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಹೀಗಾಗಿ ಮಲ್ಲಪ್ಪ ಅವರು ಕೂಡ ಕುಟುಂಬಸ್ಥರೊಂದಿಗೆ ಕ್ವಾರಂಟೈನ್ ಕೇಂದ್ರದಲ್ಲಿ ಉಳಿದಿದ್ದರು.
Advertisement
Advertisement
ಶಿಲ್ಪಕಲಾವಿದ ಮಲ್ಲಪ್ಪ ತಮ್ಮ ಆಸಕ್ತಿಯನ್ನು ಕ್ವಾರಂಟೈನ್ ಕೇಂದ್ರದ ಅಧಿಕಾರಿಗಳ ಮುಂದೆ ವ್ಯಕ್ತಪಡಿಸಿದ್ದರು. ಈ ವೇಳೆ ಜಿಲ್ಲಾ ಪಂಚಾಯತ್ ಸಿಇಓ ಗಂಗೂಬಾಯಿ ಮಾನಕರ್ ಅವರು ಮೂರ್ತಿ ಕೆತ್ತನೆ ಕೆಲಸ ಕೊಟ್ಟು ಅಗತ್ಯ ಸಾಮಗ್ರಿಗಳನ್ನು ನೀಡಿದ್ದರು. ತಮಗೆ ದೊರೆತ ಕೆಲವೇ ಕೆಲವು ಸಾಮಗ್ರಿಗಳಿಂದ ಮಲ್ಲಪ್ಪ ಅವರು ವಿಘ್ನ ವಿನಾಶಕ ಗಣೇಶ್ನ ವಿಗ್ರಹವನ್ನ ಕೆತ್ತನೆ ಮಾಡಿ ಗಮನ ಸಳೆದಿದ್ದಾರೆ.
Advertisement
ಲೋಕಾಪುರ ಪಂಚಾಯಿತಿ ಪಿಡಿಓ ಅವರು ಮಲ್ಲಪ್ಪ ಅವರಿಗೆ 10 ಸಾವಿರ ರೂ.ವನ್ನು ಪ್ರೋತ್ಸಾಹ ಧನವಾಗಿ ಕೊಟ್ಟು ಮೂರ್ತಿಯನ್ನು ಖರೀದಿಸಿ ಬೆಂಬಲಿಸಿದ್ದಾರೆ. ಮಲ್ಲಪ್ಪ ಅವರ ಕಾರ್ಯಕ್ಕೆ ಅಧಿಕಾರಿಗಳು ಹಾಗೂ ಕ್ವಾರಂಟೈನ್ನಲ್ಲಿದ್ದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.