– ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಸ್ಟಾರ್ ಆಲ್ರೌಂಡರ್ ಆಗಿದ್ದ ಭಾಟಿಯಾ
ನವದೆಹಲಿ: ಭಾರತದ ಪ್ರಥಮ ದರ್ಜೆ ಕ್ರಿಕೆಟ್ನ ಸ್ಟಾರ್ ಆಲ್ರೌಂಡರ್ ರಜತ್ ಭಾಟಿಯಾ ಎಲ್ಲ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
ತನ್ನ ನಿವೃತ್ತಿ ವಿಚಾರವಾಗಿ ಬುಧವಾರ ಮಾತನಾಡಿರುವ 40 ವರ್ಷದ ರಜತ್ ಭಾಟಿಯಾ ಅವರು, ಎಲ್ಲ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ಎರಡು ದಶಕಗಳ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ಜೀವನಕ್ಕೆ ಭಾಟಿಯಾ ಬ್ರೇಕ್ ಹಾಕಿದ್ದಾರೆ. ಭಾಟಿಯಾ ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಆಡುತ್ತಿದ್ದರು.
Advertisement
Advertisement
ಮಧ್ಯಮ ವೇಗದ ಬೌಲರ್ ಆಗಿದ್ದ ಭಾಟಿಯಾ ಅವರು, ತನ್ನ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ 137 ವಿಕೆಟ್ ಮತ್ತು 6,482 ರನ್ ಗಳಿಸಿದ್ದಾರೆ. 112 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಭಾಟಿಯಾ 17 ಶತಕ ಮತ್ತು 50 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಅವರ ಕೊನೆಯ ಪ್ರಥಮ ದರ್ಜೆ ಪಂದ್ಯವನ್ನು 2019ರ ಜನವರಿಯಲ್ಲಿ ಮಿಜೋರಾಂ ವಿರುದ್ಧ ಆಡಿದ್ದರು. ಈ ಪಂದ್ಯದಲ್ಲಿ ಅವರು ಪ್ರತಿನಿಧಿಸುತ್ತಿದ್ದ ಉತ್ತರಾಖಂಡ ತಂಡ ಇನ್ನಿಂಗ್ಸ್ ಮತ್ತು 56 ರನ್ಗಳಿಂದ ಜಯಗಳಿಸಿತ್ತು.
Advertisement
Advertisement
ರಜತ್ ಭಾಟಿಯಾ 2000ದಲ್ಲಿ ತಮಿಳುನಾಡು ತಂಡದ ಪರವಾಗಿ ದೇಶೀಯ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದರು. ನಂತರ 2003ರಲ್ಲಿ ತನ್ನ ತವರು ತಂಡವಾದ ದೆಹಲಿ ತಂಡದಲ್ಲಿ ಸ್ಥಾನ ಪಡೆದರು. 2007-08ರಲ್ಲಿ ದೆಹಲಿ ರಣಜಿ ಟ್ರೋಫಿ ಗೆದ್ದ ತಂಡದಲ್ಲಿದ್ದ ಭಾಟಿಯಾ ಅದ್ಭುತವಾಗಿ ಆಡಿ ಆ ಆವೃತ್ತಿಯಲ್ಲಿ 525 ರನ್ ಮತ್ತು 26 ವಿಕೆಟ್ಗಳು ಗಬಳಿಸಿದ್ದರು. ಜೊತೆಗೆ ಉತ್ತರ ಪ್ರದೇಶ ವಿರುದ್ಧದ ಫೈನಲ್ನಲ್ಲಿ 139 ರನ್ ಗಳಿಸಿ ದೆಹಲಿ ತಂಡ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ದೆಹಲಿ ತಂಡದಲ್ಲಿ 81 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ ರಜತ್ ಭಾಟಿಯ ನಂತರ, ರಾಜಸ್ಥಾನ ಮತ್ತು ಉತ್ತರಾಖಂಡ ತಂಡಗಳಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ದೆಹಲಿ ಡೇರ್ಡೆವಿಲ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕಾತ್ತ ನೈಟ್ ರೈಡರ್ಸ್ ತಂಡಗಳ ಪರ ಆಡಿದ್ದರು. 2012ರ ಐಪಿಎಲ್ನಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೋಲ್ಕಾತ್ತ ತಂಡ ಟ್ರೋಫಿ ಗೆದ್ದ ಸಮಯದಲ್ಲಿ ಭಾಟಿಯಾ ತಂಡದಲ್ಲಿ ಇದ್ದರು.