– ಮೂರು ಕಡೆ ಸೋರಿಕೆ ತಡೆದ ನೌಕಾದಳ ತಂತ್ರಜ್ಞರು
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕೋವಿಡ್ ವಾರ್ಡ್ನಲ್ಲಿ ಆಮ್ಲಜನಕ ಸೋರಿಕೆ ನಂತರ ಜಿಲ್ಲಾಡಳಿತ ಎಚ್ವೆತ್ತುಕೊಂಡಿದ್ದು, ಜಿಲ್ಲೆಯಲ್ಲಿರುವ ಕೋವಿಡ್ ವಾರ್ಡ್ ನಲ್ಲಿ ಆಕ್ಸಿಜನ್ ಸೋರಿಕೆ ತಡೆಯಲು ಕೇಂದ್ರ ನೌಕಾದಳದ ಸಹಾಯ ಪಡೆಯುತ್ತಿದೆ.
Advertisement
ಕದಂಬ ನೌಕಾನೆಲೆಯ ತಾಂತ್ರಿಕ ಸಿಬ್ಬಂದಿಯ ತಂಡವನ್ನು ರಚಿಸಿ ಜಿಲ್ಲೆಯ 12 ತಾಲೂಕುಗಳಲ್ಲಿ ತಪಾಸಣೆಗೆ ನಿಯೋಜನೆ ಮಾಡಿದೆ. ನೌಕಾ ದಳದ ಸಿಬ್ಬಂದಿ ಮೂರು ಕಡೆ ಸೋರಿಕೆ ಗುರಿತಿಸಿದ್ದಾರೆ. ಇದನ್ನೂ ಓದಿ: ಸಕಾಲದಲ್ಲಿ ಚಿಕಿತ್ಸೆ ಸಿಗದೆ ಹೊಟ್ಟೆಯಲ್ಲಿಯೇ 6 ತಿಂಗಳ ಗಂಡು ಮಗು ಸಾವು
Advertisement
ಕಳೆದ ತಿಂಗಳು ಶಿರಸಿಯ ತಾಲೂಕು ಆಸ್ಪತ್ರೆಯಲ್ಲಿ ದೊಡ್ಡ ಮಟ್ಟದಲ್ಲಿ ಆಕ್ಸಿಜನ್ ಸೋರಿಕೆ ಆಗಿತ್ತು, ಇದರ ನಂತರ ಇದೀಗ ತಂಡ ರಚನೆ ಮಾಡಿದ್ದು, ಈ ತಂಡವು ಭಟ್ಕಳ ತಾಲೂಕು ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿರುವ ಆಕ್ಸಿಜನ್ ಪ್ಲಾಂಟ್, ಯಲ್ಲಾಪುರದ ಆಸ್ಪತ್ರೆಯಲ್ಲಿರುವ ಆಕ್ಸಿಜನ್ ಪ್ಲಾಂಟ್ ನಲ್ಲಿ ಸೋರಿಕೆ ಹಾಗೂ ತಾಂತ್ರಿಕ ಸಮಸ್ಯೆ ಗುರುತಿಸಿ ಸರಿಪಡಿಸಿದೆ. ಸದ್ಯ ಈ ತಂಡ 12 ತಾಲೂಕುಗಳಲ್ಲಿ ಸಕ್ರಿಯವಾಗಿರಲಿದ್ದು, ಜಿಲ್ಲಾಡಳಿತದೊಂದಿಗೆ ಕಾರ್ಯ ನಿರ್ವಹಿಸಲಿದೆ.