– ಆಸ್ಪತ್ರೆಯ ಬಳಿಯೇ ಹೆಂಡ್ತಿಯ ಮೇಲೆ ಕಾರು ಹರಿಸಿದ
ವಾಷಿಂಗ್ಟನ್: ಅಮೆರಿಕದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಲೆಯಾಳಿ ನರ್ಸ್ ಒಬ್ಬರನ್ನು ಅವರ ಪತಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ದಕ್ಷಿಣ ಫ್ಲೋರಿಡಾದಲ್ಲಿ ನಡೆದಿದೆ.
ಚೆನ್ನೈನ ಕೊಟ್ಟಾಯಂನ ಮೂಲದ ಮೆರಿನ್ ಜಾಯ್ (26) ಕೊಲೆಯಾದ ನರ್ಸ್. ನರ್ಸ್ ಕೋರಲ್ ಸ್ಪ್ರಿಂಗ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಆಸ್ಪತ್ರೆಯ ಬಳಿಯೇ ಮೆರಿನ್ ಜಾಯ್ಯನ್ನು ಪತಿ ಮಂಗಳವಾರ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಆರೋಪಿ ಪತಿಯನ್ನು ಫಿಲಿಪ್ ಮ್ಯಾಥ್ಯೂ ಅಲಿಯಾಸ್ ನೆವಿನ್ (34) ಎಂದು ಗುರುತಿಸಲಾಗಿದೆ. ಈತ ಮೆರಿನ್ ಅವರಿಗೆ ಅನೇಕ ಬಾರಿ ಚಾಕುವಿನಿಂದ ಇರಿದಿದ್ದಾನೆ. ನಂತರ ಆರೋಪಿ ನೆವಿನ್ನನ್ನು ಯುಎಸ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
Advertisement
ಮೃತ ಮೆರಿನ್ ಬ್ರೋವರ್ಡ್ ಹೆಲ್ತ್ ಕೋರಲ್ ಸ್ಪ್ರಿಂಗ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಕೋವಿಡ್ ವಾರ್ಡಿನಲ್ಲಿ ರಾತ್ರಿಯ ಕರ್ತವ್ಯ ಮುಗಿಸಿ ಆಸ್ಪತ್ರೆಯಿಂದ ಹೊರಬರುತ್ತಿದ್ದರು. ಆಗ ಆರೋಪಿ ನೆವಿನ್ ಪತ್ನಿ ಮೆರಿನ್ ಜಾಯ್ಗೆ ಚಾಕುವಿನಿಂದ ಅನೇಕ ಬಾರಿ ಇರಿದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಅಷ್ಟೇ ಅಲ್ಲದೇ ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ನೆವಿನ್ ತನ್ನ ಕಾರನ್ನು ಪತ್ನಿಯ ಮೇಲೆ ಹರಿಸಿದ್ದಾನೆ.
Advertisement
ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರವಾಗಿ ಗಾಯವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೆರಿನ್ ಜಾಯ್ ಮೃತಪಟ್ಟಿದ್ದಾರೆ. ಈ ಘಟನೆ ದಂಪತಿಯ ನಡುವಿನ ಜಗಳದಿಂದ ಆಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮೆರಿನ್ ಜಾಯ್ ಆರೋಪಿ ಪತಿ ನೆವಿನ್ನಿಂದ ದೂರವಿರುತ್ತಿದ್ದರು. ಅವರ ನಡುವೆ ಕೆಲವು ಸಮಸ್ಯೆಗಳು ಇತ್ತು. ಇದರಿಂದ ಕೋರಲ್ ಸ್ಪ್ರಿಂಗ್ಸ್ ಆಸ್ಪತ್ರೆಯಲ್ಲಿ ನರ್ಸ್ ಮೆರಿನ್ ಜಾಯ್ ಕೆಲಸ ಬಿಡಲು ಯೋಜಿಸುತ್ತಿದ್ದರು ಎಂದು ಮೆರಿನ್ ಸಂಬಂಧಿಕರು ಹೇಳಿದ್ದಾರೆ. ಸದ್ಯಕ್ಕೆ ಆರೋಪಿ ನೆವಿನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಯುಎಸ್ ಪೊಲೀಸರ ವಶದಲ್ಲಿದ್ದಾನೆ.