ನವದೆಹಲಿ: ಈ ವರ್ಷ ಕೋವಿಡ್ ಲಸಿಗೆಗಾಗಿ ಸರ್ಕಾರ 35 ಸಾವಿರ ಕೋಟಿ ಮೀಸಲಿರಿಸಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಎಂದು ತಿಳಿಸಿದರು.
ಈ ವರ್ಷದ ಬಜೆಟ್ ನಲ್ಲಿ ಕೋವಿಡ್ ಲಸಿಕೆಗಾಗಿ 35 ಸಾವಿರ ಕೋಟಿ ರೂ. ಅನುದಾನವನ್ನ ಮೀಸಲಿರಿಸಲಾಗುವುದು. ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಅನುದಾನವನ್ನ ಹೆಚ್ಚಿಸಲಾಗುವುದು. ಹೆಲ್ತ್ ಬಜೆಟ್ ಗೆ 2 ಲಕ್ಷ 32 ಸಾವಿರ ಕೋಟಿ ಅನುದಾನ ಮೀಸಲಿರಿಸಲಾಗಿದೆ. ಈ ಮೊದಲಿನ ಬಜೆಟ್ ನಲ್ಲಿ 92 ಸಾವಿರ ಕೋಟಿ ಫಂಡ್ ನೀಡಲಾಗಿತ್ತು. ಈ ಬಾರಿ ಹೆಲ್ತ್ ಬಜೆಟ್ ಫಂಡ್ ಶೇ.137ರಷ್ಟು ಏರಿಕೆಯಾಗಿದೆ ಎಂದರು.
Advertisement
Advertisement
ಇದೇ ವೇಳೆ ಭಾರತದಲ್ಲಿ ಎರಡು ಕೊರೊನಾ ವ್ಯಾಕ್ಸಿನ್ ಲಭ್ಯವಿದ್ದು, ನೂರಕ್ಕೂ ಹೆಚ್ಚು ದೇಶಗಳು ಇದರ ಲಾಭವನ್ನ ಪಡೆಯುತ್ತಿವೆ. ಇನ್ನೆರಡು ಲಸಿಕೆಗಳು ಬರಲಿದೆ. ಪ್ರಧಾನಿಗಳು ನಮ್ಮ ವಿಜ್ಞಾನಿಗಳ ತಂಡಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಕೊರೊನಾ ವಿರುದ್ಧದ 2021ರಲ್ಲಿ ಮುಂದುವರಿದಿದೆ. ಎರಡು ವಿಶ್ವ ಯುದ್ಧದ ರೀತಿಯಲ್ಲಿ ಕೋವಿಡ್ ನಂತರದ ಜಗತ್ತು ಮತ್ತು ರಾಜಕೀಯ ನೀತಿಗಳು ಬದಲಾಗುತ್ತಿವೆ. ಈ ಯುದ್ಧದಲ್ಲಿ ಭಾರತವನ್ನ ಲ್ಯಾಂಡ್ ಆಫ್ ಹೋಪ್ ರೀತಿಯಲ್ಲಿ ಜಗತ್ತು ನೋಡುತ್ತಿದೆ. ಕೊರೊನಾ ವೇಳೆ ಕಾರ್ಯನಿರ್ವಹಿಸಿದ ಹೆಲ್ತ್ ವರ್ಕರ್ ಸೇರಿದಂತೆ ಎಲ್ಲ ಸಿಬ್ಬಂದಿಗೆ ಧನ್ಯವಾದ ಸಲ್ಲಿಸಿದರು.
Advertisement
I have provided Rs 35,000 crores for #COVID19 vaccine in this year 2021-22. I am committed to provide further funds if required: Finance Minister Nirmala Sitharaman. #UnionBudget2021 pic.twitter.com/7ducO1ZAbO
— ANI (@ANI) February 1, 2021
Advertisement
ಸರ್ಕಾರ ಈ ವರ್ಷ ಸ್ವಚ್ಛ ಭಾರತ ಮಿಶನ್ 2.0 ಅಡಿಯಲ್ಲಿ 1.41 ಲಕ್ಷ ಕೋಟಿ ಖರ್ಚು ಮಾಡಲಿದೆ. ಮುಂದಿನ ಐದು ವರ್ಷಗಳಲ್ಲಿ ಏರ್ ಕ್ಲೀನಿಂಗ್ ಗಾಗಿ ಎರಡು ಸಾವಿರ ಕೋಟಿ ರೂ. ಮೀಸಲಿರಿಸಲಿದೆ ಎಂದು ಮಾಹಿತಿ ನೀಡಿದರು.