ಮೆಲ್ಬರ್ನ್: ರೋಹಿತ್ ಶರ್ಮಾ ಮತ್ತು 4 ಸಹ ಆಟಗಾರರರು ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆಂದು ಚರ್ಚೆಯಾಗುತ್ತಿರುವ ಬೆನ್ನಲ್ಲೇ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಸ್ಟಾರ್ ಅಲ್ರೌಂಡರ್ ಹಾರ್ದಿಕ್ ಪಾಂಡ್ಯ ಸಿಡ್ನಿಯಲ್ಲಿ ಒಂದು ಬೇಬಿ ಶಾಪ್ಗೆ ತೆರಳಿ ಮಾಸ್ಕ್ ಧರಿಸದೆ ಇದ್ದ ಫೋಟೊ ವೈರಲ್ ಆಗುತ್ತಿದೆ. ಇದನ್ನು ನೋಡುತ್ತಿದ್ದಂತೆ ಈ ಇಬ್ಬರು ಆಟಗಾರರು ಕೋವಿಡ್ ನಿಯಮ ಉಲ್ಲಂಘಿಸಿದ್ರಾ ಎಂಬ ಪ್ರಶ್ನೆ ಎದ್ದಿದೆ
ಹೊಸ ವರ್ಷದಂದು ರೆಸ್ಟೂೀರೆಂಟ್ಗೆ ತೆರಳಿ ಊಟ ಮಾಡಿದ್ದಾರೆಂಬ ಕಾರಣಕ್ಕೆ ರೋಹಿತ್ ಶರ್ಮಾ ಮತ್ತು 4 ಜನ ಸಹ ಆಟಗಾರರನ್ನು ಉಳಿದ ಆಟಗಾರರಿಂದ ದೂರ ಇರಿಸಲಾಗಿದೆ. ಇವರು ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆಂದು ಕಾರಣ ಕೊಡಲಾಗಿತ್ತು. ಆದರೆ ಭಾರತ ತಂಡ ಸಿಡ್ನಿಯಲ್ಲಿ ಟಿ20 ಸರಣಿ ಆಡುತ್ತಿದ್ದಾಗ ಕೊಹ್ಲಿ ಮತ್ತು ಪಾಂಡ್ಯ ಸಿಡ್ನಿಯ ಬೇಬಿ ಶಾಪ್ಗೆ ತೆರಳಿದ್ದರು.
Advertisement
Advertisement
ಕೊಹ್ಲಿ ಒಂದು ಬ್ಯಾಗ್ ಪೂರ್ತಿ ಗೊಂಬೆಗಳನ್ನು ಮತ್ತು ಪಾಂಡ್ಯ ಮಕ್ಕಳ ಆಟಿಕೆಗಳನ್ನು ಖರೀದಿಸಿದ್ದರು. ನಂತರ ಅಲ್ಲಿನ ಮಹಿಳಾ ಸಿಬ್ಬಂದಿ ಜೊತೆ ನಿಂತು ಫೋಟೊಗೆ ಪೋಸ್ ನೀಡಿದ್ದರು. ಆ ಸಂದರ್ಭ ಯಾರೂ ಕೂಡ ಮಾಸ್ಕ್ ಕೂಡ ಧರಿಸಿರಲಿಲ್ಲ ಈ ಚಿತ್ರಗಳು ಇನ್ಸ್ಟಾಗ್ರಾಮ್ನಲ್ಲಿ ಹರಿದಾಡುತ್ತಿದ್ದಂತೆ ಇದು ಕೋವಿಡ್ ನಿಯಮ ಉಲ್ಲಂಘನೆಯಂತೆ ಕಾಣಿಸಿಲ್ಲವೇ ಅವರಿಗೊಂದು ನ್ಯಾಯ ಇವರಿಗೊಂದು ನ್ಯಾಯವೇ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.
Advertisement
ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಶೀಘ್ರದಲ್ಲೇ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರೆ, ಪಾಂಡ್ಯ ಐಪಿಎಲ್ ಆಡಲು ಯುಎಇಗೆ ತೆರಳುವ ಮುನ್ನ ಗಂಡು ಮಗುವಿನ ತಂದೆಯಾಗಿದ್ದರು. ಹಾಗಾಗಿ ಬೇಬಿ ಶಾಪ್ಗೆ ತೆರಳಿ ಶಾಪಿಂಗ್ ನಡೆಸಿದ್ದರು.