ಬೆಂಗಳೂರು: ನಗರದ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಯಾವುದೇ ಶುಚಿತ್ವ, ವ್ಯವಸ್ಥೆ ಇಲ್ಲದೇ ರೋಗಿಗಳು ಪರದಾಟುತ್ತಿರುವ ಸ್ಥಿತಿ ಬೆಳಕಿಗೆ ಬಂದಿದೆ.
ಸೆಂಟರ್ ಗಳಲ್ಲಿ ಎಲ್ಲೆಂದರಲ್ಲಿ ಊಟದ ತ್ಯಾಜ್ಯ ಬೀಸಾಡಿರುವುದು, ಶುಚಿತ್ವ ಇಲ್ಲದ ಬಾತ್ ರೂಂ ಹಾಗೂ ಬ್ಲಾಕ್ ಆಗಿ ನೀರಿನ ವ್ಯವಸ್ಥೆ ಇಲ್ಲದೇ ರೋಗಿಗಳಿಗೆ ನರಕದರ್ಶನವಾಗುತ್ತಿದೆ. ಕೋರಮಂಗಲದ ಇನ್ಡೋರ್ ಸ್ಟೇಡಿಯಂನಲ್ಲಿ ಇಂತಹ ಸ್ಥಿತಿ ಕಂಡು ಬಂದಿದ್ದು, ನಗರದ ಬಹುತೇಕ ಕೋವಿಡ್ ಕೇರ್ ಗಳ ವಿಭಿನ್ನವಾಗಿಲ್ಲ ಎಂದು ಹೇಳಬಹುದು. ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯನ್ನು ರೋಗಿಗಳು ವ್ಯಕ್ತಪಡಿಸಿದ್ದಾರೆ.
Advertisement
Advertisement
ಈ ಕುರಿತು ವಿಡಿಯೋ ಮಾಡಿರುವ ರೋಗಿಯೊಬ್ಬರು ಕೋವಿಡ್ ಕೇರ್ ಸೆಂಟರ್ ಅವ್ಯವಸ್ಥೆಯನ್ನು ಬಿಚ್ಚಿಟ್ಟಿದ್ದಾರೆ. ನನಗೆ ಪಾಸಿಟಿವ್ ಇದೆ. ಇಲ್ಲಿ ಮೂರು ಹೊತ್ತು ಊಟ ಕೊಡುವುದು ಬಿಟ್ಟರೆ ಬೇರೆ ಯಾವ ವ್ಯವಸ್ಥೆಯೂ ಇಲ್ಲ. ರೋಗಿಳಿಗೆ ಎನ್-95 ಮಾಸ್ಕ್ ಇಲ್ಲ. ಆಸ್ಪತ್ರೆಯಿಂದ ಮಾತ್ರೆ ಕೊಡುತ್ತಿಲ್ಲ. ನಮ್ಮ ದುಡ್ಡಲ್ಲೇ ಹೊರಗಿನಿಂದ ಖರೀದಿ ಮಾಡಬೇಕಿದೆ.
Advertisement
Advertisement
ಇಲ್ಲಿ ಸರಿಯಾದ ನೀರಿನ ವ್ಯವಸ್ಥೆ ಸರಿ ಇಲ್ಲ. ಬಾತ್ ರೂಮ್ ಫುಲ್ ಕಟ್ಟಿಕೊಂಡಿದೆ. ಬಿಸಿನೀರು ಕೊಡಲ್ಲ. 30 ಜನ ಮೇಲೆ, 20 ಜನ ಕೆಳಗಿನ ಫ್ಲೋರ್ ನಲ್ಲಿ ಇದ್ದೀವಿ. 5 ಕ್ಯಾನ್ ನೀರು ತರ್ತಾರೆ. ಅದು ಯಾರಿಗೂ ಸಾಕಾಗಲ್ಲ. ಒಂದ್ ಟೈಮ್ ಕಷಾಯ, ಅರಿಶಿಣ ಹಾಲು ಕೊಡುತ್ತಿಲ್ಲ. ಆದರೆ ಊಟದ ಸಮಸ್ಯೆ ಇಲ್ಲ. ಬೆಳಗ್ಗೆ 8, ಮಧ್ಯಾಹ್ನ 1, ಸಾಯಂಕಾಲ 8 ಗಂಟೆಗೆ ಊಟ ಬರುತ್ತೆ. ಶುಚಿತ್ವ ಇಲ್ಲ, ಸರಿಯಾದ ಸಮಯಕ್ಕೆ ನೀರು ತರಿಸಲ್ಲ. ನಾವೇ ಹೊರಗಿನಿಂದ 2 ಲೀಟರ್ ತರಿಸಿಕೊಳ್ಳಬೇಕಿದೆ ಎಂದು ರೋಗಿ ವಿವರಿಸಿದ್ದಾರೆ.