-ಸ್ವಇಚ್ಛೆಯಿಂದ ಸೇವೆಗೆ ಹಾಜರಾಗಿದ್ದ ನಟಿ
ಮುಂಬೈ: ಮಹಾಮಾರಿ ಕೊರೊನಾ ವಿರುದ್ಧ ಹೋರಾಟದಲ್ಲಿ ಭಾಗಿಯಾಗಿದ್ದ ನಟಿ ಶಿಖಾ ಮಲ್ಹೋತ್ರಾರಿಗೆ ಕೋವಿಡ್-19 ಸೋಂಕಿಗೆ ತುತ್ತಾಗಿದ್ದಾರೆ. ಈ ಕುರಿತು ಶಿಖಾ ಇನ್ಸ್ಟಾಗ್ರಾಂ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.
Advertisement
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಫೋಟೋಗಳನ್ನ ಶಿಖಾ ಶೇರ್ ಮಾಡಿಕೊಂಡಿದ್ದಾರೆ. ಕೋವಿಡ್-19 ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಶಿಖಾ ಸ್ವಯಂ ಪ್ರೇರಿತವಾಗಿ ಸರ್ಕಾರದ ಅನುಮತಿ ಪಡೆದು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಬಣ್ಣದ ಲೋಕಕ್ಕೂ ಬರುವ ಮೊದಲು ನರ್ಸಿಂಗ್ ಕೋರ್ಸ್ ಮಾಡಿ, ಕೆಲ ಸಮಯ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡಿದ್ದರು. ಕಿರುತೆರೆಯಲ್ಲಿ ಅವಕಾಶಗಳು ಲಭ್ಯವಾಗಿದ್ದರಿಂದ ನರ್ಸಿಂಗ್ ವೃತ್ತಿ ತೊರೆದಿದ್ದರು.
Advertisement
Advertisement
ನನಗೆ ಕೊರೊನಾ ಸೋಂಕು ತಗುಲಿರೋದು ದೃಢವಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಈ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ಕೇವಲ ಸಾಂಕ್ರಾಮಿಕ ರೋಗವಾಗಿದ್ದು, ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವದರಿಂದ ಇದರಿಂದ ದೂರ ಇರಬಹುದು ಎಂದು ಬರೆದಿದ್ದಾರೆ.
Advertisement
ನಿಮ್ಮೆಲ್ಲರ ಪ್ರೀತಿ, ಹಾರೈಕೆ ಮತ್ತು ಪ್ರಾರ್ಥನೆಯಿಂದ ಬೇಗ ಗುಣಮುಖಳಾಗಿ ಬರುತ್ತೇನೆ. ಕಳೆದ ಆರು ತಿಂಗಳಿನಿಂದ ಸೇವೆ ಸಲ್ಲಿಸುತ್ತಿದ್ದರೂ ನಿಮ್ಮೆಲ್ಲರ ಹಾರೈಕೆಯಿಂದಲೇ ನಾನು ಆರೋಗ್ಯವಾಗಿದ್ದೇನೆ. ಸದ್ಯದವರೆಗೂ ಈ ರೋಗಕ್ಕೆ ಔಷಧಿ ಸಿಕ್ಕಿಲ್ಲ. ಹಾಗಾಗಿ ಎಲ್ಲರೂ ಸರ್ಕಾರ ಸೂಚಿಸಿರುವ ಕೋವಿಡ್ ನಿಯಮಗಳನ್ನ ಪಾಲಿಸಿ ಎಂದು ಶಿಖಾ ಮನವಿ ಮಾಡಿಕೊಂಡಿದ್ದಾರೆ.
ಶಿಖಾ ಮೆಲ್ಹೋತ್ರಾ ಅವರು ದೆಹಲಿಯ ವರ್ಧಮಾನ್ ಮಹಾವೀರ್ ಮೆಡಿಕಲ್ ಕಾಲೇಜಿನಲ್ಲಿ ನರ್ಸಿಂಗ್ ಪದವಿ ಪಡೆದಿದ್ದು, ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದಾರೆ. ನಂತರ ಸಿನಿಮಾ ರಂಗದಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆಯಿಂದಾಗಿ ಬಾಲಿವುಡ್ಗೆ ಎಂಟ್ರಿ ಕೊಟ್ಟರು. ಇದೀಗ ಮತ್ತೆ ನರ್ಸ್ ಯೂನಿಫಾರ್ಮ್ ಹಾಕುವ ಮೂಲಕ ಕಷ್ಟದ ಸಂದರ್ಭದಲ್ಲಿ ಜನರ ಸಹಾಯಕ್ಕೆ ನಿಂತಿದ್ದಾರೆ. ಕೊರೊನಾ ಸೋಂಕಿತರ ಆರೈಕೆ ಮಾಡುವ ಮೂಲಕ ದೇಶ ಸೇವೆಯಲ್ಲಿ ತೊಡಗಿದ್ದಾರೆ.