ನವದೆಹಲಿ: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಡೇವಿಡ್ ವಾರ್ನರ್ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಟಿಕ್ಟಾಕ್ನಲ್ಲಿ ಡ್ಯುಯೆಟ್ ಮಾಡಲು ಆಹ್ವಾನಿಸಿದ್ದಾರೆ.
ಡೇವಿಡ್ ವಾರ್ನರ್ ಅವರು ಲಾಕ್ಡೌನ್ ವೇಳೆ ತಮ್ಮ ಕುಟುಂಬದ ಜೊತೆ ಉತ್ತಮ ಕಾಲವನ್ನು ಕಳೆಯುತ್ತಿದ್ದಾರೆ. ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿ ಇರುವ ವಾರ್ನರ್ ಟಿಕ್ಟಾಕ್ ವಿಡಿಯೋಗಳನ್ನು ಮಾಡಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಮಡದಿ ಮಕ್ಕಳ ಜೊತೆ ಫನ್ನಿ ವಿಡಿಯೋ ಮಾಡಿ ಹಂಚಿಕೊಳ್ಳುತ್ತಿದ್ದಾರೆ.
Advertisement
https://www.instagram.com/p/CAfNQG9Jgbp/
Advertisement
ಇತ್ತೀಚೆಗೆ ವಾರ್ನರ್ ಅವರು ಅಕ್ಷಯ್ ಕುಮಾರ್ ಅವರ ಬಹು ಜನಪ್ರಿಯ ಗೀತೆ ಬಾಲ ಹಾಡಿಗೆ ಟಿಕ್ಟಾಕ್ನಲ್ಲಿ ಹೆಜ್ಜೆ ಹಾಕಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈ ಟಿಕ್ಟಾಕ್ ವಿಡಿಯೋವನ್ನು ವಾರ್ನರ್ ತಮ್ಮ ಇನ್ಸ್ಟಾಗ್ರಾಮ್ನಲ್ಲೂ ಹಂಚಿಕೊಂಡಿದ್ದರು. ಇದನ್ನು ನೋಡಿ ಫಿದಾ ಆದ ಕೊಹ್ಲಿ ಈ ವಿಡಿಯೋಗೆ ವ್ಯಂಗ್ಯವಾಗಿ ನಗುತ್ತಿರುವ ಇಮೋಜಿಗಳನ್ನು ಕಮೆಂಟ್ ಮಾಡಿದ್ದಾರೆ.
Advertisement
https://www.instagram.com/p/CAZmL8HJ4xR/
Advertisement
ಇದಾದ ನಂತರ ಕೊಹ್ಲಿಯ ಕಮೆಂಟ್ಗೆ ಉತ್ತರ ನೀಡಿರುವ ವಾರ್ನರ್ ಅವರು, ನೀನು ಡ್ಯುಯೆಟ್ ಮಾಡು ಬಾ ಮ್ಯಾನ್. ನಿನ್ನ ಪತ್ನಿ ನಿನಗೆ ಹೇಳಿಕೊಡುತ್ತಾರೆ ಎಂದು ರಿಪ್ಲೈ ಮಾಡಿದ್ದಾರೆ. ವಾರ್ನರ್ ಅವರ ರಿಪ್ಲೈ ಕಂಡು ಬೆರಗಾದ ಅಭಿಮಾನಿಗಳು ಇಂದು ಭಾರತದಲ್ಲಿ ಟಿಕ್ಟಾಕ್ ಇನ್ನೂ ಜೀವಂತವಾಗಿದೆ ಎಂದರೆ ಅದು ವಾರ್ನರ್ ಅವರಗಾಗಿಯೇ ಎಂದು ಕಮೆಂಟ್ ಮಾಡಿದ್ದಾರೆ.
https://www.instagram.com/p/B_mINrppW7d/
ಸದ್ಯ ಟಿಕ್ಟಾಕ್ನಲ್ಲಿ ವಿಡಿಯೋ ಮಾಡುವುದರಲ್ಲಿ ಬ್ಯುಸಿ ಇರುವ ಡೇವಿಡ್ ವಾರ್ನರ್ ಇತ್ತೀಚೆಗೆ ಬ್ಯಾಟ್ ಹಿಡಿದು ಬಾಹುಬಲಿ ಡೈಲಾಗ್ ಹೇಳಿ ಮಿಂಚಿದ್ದರು. ಜೊತೆಗೆ ಮಡದಿ ಮಕ್ಕಳ ಜೊತೆಗೆ ಅಲ್ಲು ಅರ್ಜುನ್ ಅವರ ಬುಟ್ಟ ಬೊಮ್ಮ ಹಾಡಿಗೆ ಹೆಜ್ಜೆ ಹಾಕಿದ್ದರು. ಐಪಿಎಲ್ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿರುವ ವಾರ್ನರ್ ತೆಲುಗು ಹಾಡುಗಳಿಗೆ ಟಿಕ್ಟಾಕ್ ಮಾಡಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
ಟಿಕ್ಟಾಕ್ ಬ್ಯಾನ್ ಮಾಡಿ
ಟಿಕ್ಟಾಕ್ ಅನ್ನು ಭಾರತದಲ್ಲಿ ಅತೀ ಹೆಚ್ಚು ಜನ ಬಳಸುತ್ತಿದ್ದಾರೆ. ಆದರೆ ಭಾರತದಲ್ಲಿ ಬ್ಯಾನ್ ಮಾಡಬೇಕು ಎಂಬ ಕೂಗು ಕೂಡ ಕೇಳಿಬಂದಿದೆ. ಇದರಲ್ಲಿ ಜನಪ್ರಿಯತೆ ಪಡೆಯಬೇಕು ಎಂದು ಜನರು ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಈ ಟಿಕ್ಟಾಕ್ನಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತಿದೆ ಎಂದು ರಾಷ್ಟೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಕೆಲವರ ಆಗ್ರಹಿಸುತ್ತಿದ್ದಾರೆ. ಶರ್ಮಾ ಅವರು ಹೇಳಿದ್ದಾರೆ. ಜೊತೆಗೆ ಟಿಕ್ಟಾಕ್ ಚೀನಾ ಆ್ಯಪ್ ಆಗಿದ್ದು, ಇದನ್ನು ನಿಷೇಧ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಜನ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.