ಕೋಲ್ಕತ್ತಾ: ಖಾಸಗಿ ಹೋಟೆಲೊಂದರಲ್ಲಿ 20 ವರ್ಷದ ಮಹಿಳೆಯೊಬ್ಬಳು ಕೊಲೆಯಾಗಿರುವ ಘಟನೆ ಕೋಲ್ಕತ್ತಾದ ಪೂರ್ವ ಹೊರವಲಯದಲ್ಲಿ ನಡೆದಿದೆ.
ಕೊಲೆಯಾಗಿರುವ ಮಹಿಳೆ ಕೊಠಡಿಯಲ್ಲಿ ಪೊಲೀಸರಿಗೆ ಬೆಂಗಾಲಿ ಭಾಷೆಯಲ್ಲಿ ಬರೆದ ಪತ್ರವೊಂದು ದೊರೆತಿದೆ. ನಿನ್ನನ್ನು ಕೊಲೆ ಮಾಡಲು ನನಗೆ ಇಷ್ಟವಿರಲಿಲ್ಲ, ಆದ್ರೆ ನನಗೆ ಬೇರೆ ಆಯ್ಕೆ ಇಲ್ಲ ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಅಲ್ಲದೆ ಹೊಡೆದು ಹೋದ ಮದ್ಯದ ಬಾಟ್ಲಿ ಕೂಡ ರೂಮ್ನಲ್ಲಿ ಪತ್ತೆಯಾಗಿದೆ.
Advertisement
Advertisement
ಮಹಿಳೆ ತಂಗಿದ್ದ ಕೊಠಡಿಗೆ ಹೋಟೆಲ್ ಸಿಬ್ಬಂದಿಯೊಬ್ಬರು ಬಂದಿದ್ದು, ಮಹಿಳೆ ಹೆಣವಾಗಿ ಬಿದ್ದಿರುವುದನ್ನು ನೋಡಿದ್ದಾರೆ. ಕೂಡಲೇ ಪೊಲೀಸರಿಗೆ ಘಟನೆ ಕುರಿತಂತೆ ಮಾಹಿತಿ ನೀಡಿದ್ದಾರೆ.
Advertisement
ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ತನಿಖೆ ನಡೆಸಿದಾಗ ವ್ಯಕ್ತಿಯೊಬ್ಬರ ಜೊತೆ ಮಹಿಳೆ ಹೋಟೆಲ್ಗೆ 1 ಗಂಟೆ ಸುಮಾರಿಗೆ ಬಂದಿದ್ದು, ಮಧ್ಯಾಹ್ನ 2 ಗಂಟೆ ಹೊತ್ತಿಗೆ ಊಟವನ್ನು ಆರ್ಡರ್ ಮಾಡಿದ್ದಾರೆ. ಹಾಗೂ 4 ಗಂಟೆಯ ಹೊತ್ತಿಗೆ ವ್ಯಕ್ತಿ ಹೋಟೆಲ್ನಿಂದ ಹೊರಟಿದ್ದಾನೆ. ಮಹಿಳೆ ಇದ್ದ ರೂಮ್ನಿಂದ ವ್ಯಕ್ತಿ ಹೊರಬಂದದ್ದನ್ನು ಮಹಿಳೆಯ ಪತಿ ನೋಡಿದ್ದಾರೆ.
Advertisement
ಕೊಲೆಯಾದ ಮಹಿಳೆ ಹಾಗೂ ಆಕೆಯ ಪತಿ ಪಶ್ಚಿಮ ಮಿಡ್ನಾಪೋರ್ ಜಿಲ್ಲೆಯ ನಿವಾಸಿಗಳು ಎಂಬ ಮಾಹಿತಿ ದೊರೆತಿದ್ದು ಸದ್ಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.