ಧಾರವಾಡ: ಕೊರೊನಾ ಮಧ್ಯೆಯೂ ವಿದ್ಯಾರ್ಥಿಗಳ ಪರೀಕ್ಷೆ ನಡೆಸುವ ವಿಚಾರವಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಸಮಾಜದಲ್ಲಿ ಯಾವ ಚಟುವಟಿಕೆಯೂ ನಿಂತಿಲ್ಲ. ಹೆದರುವವರು ಹೆದರುತ್ತಾರೆ, ಹೆದರದವರು ಹೆದರುವುದೇ ಇಲ್ಲ ಎಂದು ಹೇಳಿದರು.
Advertisement
ಧಾರವಾಡದಲ್ಲಿ ಮಾತನಾಡಿದ ಅವರು, ಮೇ, ಜೂನ್ನಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆ ನಡೆಯುತ್ತೆ. ಕಳೆದ ವರ್ಷವೂ ಕೊರೊನಾ ಇತ್ತು. ಕೊರೊನಾ ಇದ್ದಾಗಲೇ ಕಳೆದ ಸಲ ಪರೀಕ್ಷೆ ಮಾಡಿದ್ದೇವೆ ಎಂದರು. ಮೇ ಹೊತ್ತಿಗೆ ಕೊರೊನಾ ಕಡಿಮೆ ಆಗುತ್ತೆ, ಹಾಗಂತ ಆರೋಗ್ಯ ತಜ್ಞರು ಹೇಳಿದ್ದಾರೆ ಎಂದರು.
Advertisement
Advertisement
ಎಪ್ರಿಲ್ ಕೊನೆ ಭಾಗಕ್ಕೆ ಮಾತ್ರ ಕೊರೊನಾ ಟಾಪ್ಗೆ ಹೋಗಲಿದೆಯಂತೆ, ನಾವು ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಪರೀಕ್ಷಾ ಕೇಂದ್ರಗಳು ಕೇವಲ ಪರೀಕ್ಷಾ ಕೇಂದ್ರಗಳು ಆಗಿರುವುದಿಲ್ಲ, ಮಕ್ಕಳ ಸುರಕ್ಷಾ ಕೇಂದ್ರಗಳಾಗಿರುತ್ತವೆ. ದ್ವಿತೀಯು ಪಿಯುಸಿಗೆ 6.72 ಲಕ್ಷ ವಿದ್ಯಾರ್ಥಿಗಳು ನೋಂದಾಯಿತರಾಗಿದ್ದಾರೆ, ಎಸ್ಎಲ್ಎಲ್ಸಿಗೆ 8,75,798 ವಿದ್ಯಾರ್ಥಿಗಳು ನೋಂದಾಯಿತರಾಗಿದ್ದಾರೆ ಎಂದು ತಿಳಿಸಿದರು.