ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ನಿಂದ ಹಿರಿಯ ಪೊಲೀಸ್ ಅಧಿಕಾರಿ, ಕೆಎಸ್ಆರ್ಪಿ ಎಡಿಜಿಪಿ ಅಲೋಕ್ ಕುಮಾರ್ ಗುಣಮುಖರಾಗಿದ್ದು, ಈ ಹಿನ್ನೆಲೆಯಲ್ಲಿ ಅವರ ಮಗಳು ಕೇಕ್ ಕತ್ತರಿಸಿ ಸಂತಸ ವ್ಯಕ್ತಪಡಿಸಿದ್ದಾರೆ.
ಹೌದು. ಪ್ರತಿನಿತ್ಯ ಕೆಲಸದ ಒತ್ತಡದಲ್ಲಿರುವ ಅಧಿಕಾರಿ ಕೊರೊನಾ ನೆಪದಲ್ಲಾದರೂ ಮನೆಯಲ್ಲಿ ಇದ್ದು, ತಮ್ಮ ಮಕ್ಕಳೊಂದಿಗೆ ಸಮಯ ಕಳೆಯಲು ಅವಕಾಶ ಸಿಕ್ಕಂತಾಗಿದೆ. ಹೀಗಾಗಿ ಅವರ ಪುತ್ರಿ ತುಂಬಾನೇ ಖುಷಿಯಾಗಿದ್ದು, ತಂದೆಯೊಂದಿಗೆ ಅಮೂಲ್ಯ ಸಮಯವನ್ನು ಕಳೆದಿರುವುದರಿಂದ ಕೇಕ್ ಕತ್ತರಿಸಿದ್ದಾರೆ. ಈ ಕೇಕ್ ಮೇಲೆ ‘ವೆಲ್ ಕಮ್ ಬ್ಯಾಕ್ ಪಪ್ಪಾ’ ಎಂದು ಬರೆಯಲಾಗಿದೆ.
Advertisement
Happy to be back with the nearest n dearest ones after hospitalisation for Covid treatment . Would be back in action from Tuesday.
“Don’t drop guard against Covid till you get vaccinated.” pic.twitter.com/aIUlbh29rG
— alok kumar (@alokkumar6994) December 16, 2020
Advertisement
ಡಿಸೆಂಬರ್ 9ಂದು ಅಲೋಕ್ ಕುಮಾರ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಮಗೆ ಕೊರೊನಾ ಬಂದಿರುವ ಬಗ್ಗೆ ಹಂಚಿಕೊಂಡಿದ್ದರು. ಕೋವಿಡ್ ಸೋಮಕು ನನಗೂ ತಗುಲಿದೆ. ಕೋವಿಡ್ ಪಾಸಿಟಿವ್ ಅನ್ನು ಪಾಸಿಟಿವ್ ಅಪ್ರೋಚ್ ನಿಂದಲೇ ಸ್ವೀಕರಿಸಲು ಪ್ರಯತ್ನಿಸುತ್ತೇನೆ. ಸಿಹಿ-ಕಹಿ ಅನುಭವಗಳಿಂದಲೇ ಜೀವನ ಎಂದು ಬರೆದುಕೊಂಡಿದ್ದರು. ಚಿಕಿತ್ಸೆ ಪಡೆದ ಬಳಿಕ ಇದೀಗ ಮತ್ತೊಮ್ಮೆ ಪರೀಕ್ಷೆ ಮಾಡಿದಾ ಕೋವಿಡ್ 19 ನೆಗೆಟಿವ್ ಬಂದಿದೆ. ಹೀಗಾಗಿ ಅವರು ಸೋಂಕಿನಿಂದ ಗುಣಮುಖರಾಗಿದ್ದು ಸಂತಸ ವ್ಯಕ್ತಪಡಿಸಿದ್ದರೆ. ಈ ವಿಚಾರವನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅಲೋಕ್ ಕುಮಾರ್ ಅವರು, ಸಾರ್ವಜನಿಕರಿಗೆ ಮುಬನ್ನೆಚ್ಚರಿಕೆ ವಹಿಸುವಂತೆ ಸಂದೇಶ ರವಾನಿಸಿದ್ದಾರೆ.
Advertisement
At last Covid has got me . Trying to take Covid Positivity with positive approach. Life is nothing but a bundle of experiences, sweet n bitter.
Undergoing treatment n dng fine.
Grateful to my family for the care . Thnx everyone for their kind wishes.
“Stay alert n stay safe”
— alok kumar (@alokkumar6994) December 9, 2020