ಉಡುಪಿ: ಮಹಾರಾಷ್ಟ್ರದಿಂದ ಬಂದ ಜನರು ಉಡುಪಿಯಲ್ಲಿ ಕೊರೊನಾ ಪಾಸಿಟಿವ್ ಸ್ಫೋಟ ಮಾಡುತ್ತಲೇ ಇದ್ದಾರೆ. ಉಡುಪಿಯಲ್ಲಿ ಇಂದು 92 ಜನರಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ.
ಉಡುಪಿ ಜಿಲ್ಲೆಯ ಕೊರೊನಾ ಪೀಡಿತರ ಒಟ್ಟು ಸಂಖ್ಯೆ 564ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಿಂದ ಬಂದು ಗಂಟಲ ಮಾದರಿ ಕೊಟ್ಟು ಸರ್ಕಾರಿ ಕ್ವಾರಂಟೈನ್ ಮುಗಿಸಿ ಹೋಮ್ ಕ್ವಾರಂಟೈನ್ ನಲ್ಲಿ ಇದ್ದವರಲ್ಲಿ ಸೋಂಕು ಇತ್ತು. ವೈದ್ಯಕೀಯ ವರದಿಗಳು ಬರುತ್ತಿದ್ದಂತೆ ಸೋಂಕಿತರನ್ನ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲಾಗಿದೆ. 564 ಸಂಖ್ಯೆಯ ಮೂಲಕ ಉಡುಪಿ ಅತೀ ಹೆಚ್ಚು ಕೊರೊನಾ ಪೀಡಿತರು ಇರುವ ಜಿಲ್ಲೆಯಾಗಿದೆ.
Advertisement
Advertisement
ಸೋಂಕಿತ 564 ಜನರಲ್ಲಿ 528 ಜನ ಮಹಾರಾಷ್ಟ್ರದಿಂದ ಬಂದವರೇ ಆಗಿದ್ದಾರೆ. ರೋಗ ಲಕ್ಷಣಗಳು ಹೆಚ್ಚಿರುವವರು ಟಿಎಂಎಪೈ ಕೋವಿಡ್ ಆಸ್ಪತ್ರೆಗೆ, ಉಳಿದವರನ್ನು ತಾಲೂಕು ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲಾಗುತ್ತಿದೆ. ಓರ್ವ ಸೋಂಕಿತ ಕ್ವಾರಂಟೈನ್ ಮುಗಿಸಿ ಮಂಗಳೂರಿನಲ್ಲಿದ್ದು, ಆತನ ಮಾಹಿತಿಯನ್ನು ದಕ್ಷಿಣಕನ್ನಡ ಜಿಲ್ಲೆಗೆ ರವಾನಿಸಲಾಗಿದೆ. ಆಶ್ಚರ್ಯ ಅಂದ್ರೆ 92 ಜನರಲ್ಲಿ 87 ಜನಕ್ಕೆ ಶೀತ, ಜ್ವರದಂತಹ ಲಕ್ಷಣಗಳೂ ಇಲ್ಲ ಅಂತ ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ.